ಮಡಿಕೇರಿ, ಸೆ. ೨೩: ರಾಜ್ಯದಲ್ಲಿ ಒಟ್ಟು ೧೪ ಆಕಾಶವಾಣಿ ಕೇಂದ್ರಗಳಿದ್ದು, ೨೦೨೩-೨೪ನೇ ಆರ್ಥಿಕ ವರ್ಷಕ್ಕೆ ಅನುಗುಣವಾಗಿ ಏಪ್ರಿಲ್‌ನಿಂದ ರಾಷ್ಟçವ್ಯಾಪಿ ಕ್ಲಸ್ಟರ್ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಇದರಿಂದಾಗಿ ಮಡಿಕೇರಿ ಆಕಾಶವಾಣಿ ಸೇರಿದಂತೆ ರಾಜ್ಯದ ವಿವಿಧೆಡೆ ಇರುವ ಆಕಾಶವಾಣಿ ಕೇಂದ್ರಗಳು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ. ಪ್ರಸಾರ ಭಾರತಿ ವ್ಯಾಪ್ತಿಯ ದೂರದರ್ಶನ, ಆಕಾಶವಾಣಿ ಕೇಂದ್ರಗಳ ವ್ಯವಸ್ಥೆಯನ್ನು ರಾಷ್ಟçವ್ಯಾಪಿ ಒಟ್ಟು ೮೦ ಕ್ಲಸ್ಟರ್‌ಗಳನ್ನಾಗಿ ಬದಲಾವಣೆ ಮಾಡಲಾಗಿತ್ತು.

ಈ ಪೈಕಿ ಡಿಡಿಜಿ, ಎಡಿಜಿ ರ‍್ಯಾಂಕ್‌ನ ಅಧಿಕಾರಿಗಳನ್ನು ೬೧ ಕ್ಲಸ್ಟರ್‌ಗಳ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು. ಜತೆಗೆ ನಿರ್ದೇಶಕರನ್ನು ೧೯ ಕ್ಲಸ್ಟರ್‌ಗಳಿಗೆ ನೇಮಕ ಮಾಡಲಾಗಿದೆ. ಈ ಪೈಕಿ ಬೆಂಗಳೂರು ಕ್ಲಸ್ಟರ್ ಡಿಡಿಜಿ ವ್ಯಾಪ್ತಿಗೆ ಬರಲಿದ್ದು, ಇದರ ಅಡಿಯಲ್ಲಿ ಬೆಂಗಳೂರು, ಹಾಸನ, ಚಿತ್ರದುರ್ಗ, ಭದ್ರಾವತಿ, ಮಂಗಳೂರು, ಮಡಿಕೇರಿ, ಮೈಸೂರು ಆಕಾಶವಾಣಿ, ಮೈಸೂರು ದೂರದರ್ಶನ, ಹೊಸಕೋಟೆ ಟ್ರಾನ್ಸ್ಮೀಟರ್, ಯಲಹಂಕ ಟ್ರಾನ್ಸ್ಮೀಟರ್, ಶಿವಮೊಗ್ಗ ಟ್ರಾನ್ಸ್ಮೀಟರ್ ಸೇರಿದಂತೆ ಸ್ಥಳೀಯ ದೂರದರ್ಶನದೊಂದಿಗೆ ಟ್ರಾನ್ಸ್ಮೀಟರ್ ಕೇಂದ್ರಗಳು ಒಳಪಟ್ಟಿವೆ. ಮೊದಲೆಲ್ಲಾ ಆಯಾ ಆಕಾಶವಾಣಿ ಮುಖ್ಯಸ್ಥರೇ ಬಿಲ್‌ಗಳ ವಿಲೇವಾರಿ ಮಾಡುತ್ತಿದ್ದರು. ಆದರೆ, ಕ್ಲಸ್ಟರ್ ವ್ಯವಸ್ಥೆ ಜಾರಿಯಾದ ನಂತರ ಪ್ರತಿಯೊಂದು ನಿರ್ಧಾರ, ಬಿಲ್ ವಿಲೇವಾರಿ ಸೇರಿದಂತೆ ಎಲ್ಲಕ್ಕೂ ಬೆಂಗಳೂರನ್ನೇ ಅವಲಂಬಿಸಬೇಕಾಗಿದೆ.

ಆಕಾಶವಾಣಿ ಕೇಂದ್ರಗಳಿಗೆ ಏನನ್ನೇ ಖರೀದಿಸಬೇಕಾದರೂ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾದರೂ ಬೆಂಗಳೂರಿನಿAದ ಅನುಮತಿ ಪಡೆಯಬೇಕಾಗಿದೆ. ಸಿಬ್ಬಂದಿಗಳ ವೇತನಕ್ಕೂ ಇದರಿಂದ ತೊಂದರೆ ಆಗುತ್ತಿದ್ದು, ಬೆಂಗಳೂರು ಮಟ್ಟದಲ್ಲೇ ಎಲ್ಲವೂ ಆಗಬೇಕಿರುವುದರಿಂದ ಕೆಲವು ತಿಂಗಳು ಗಳಿಂದ ವೇತನ ಪಾವತಿ ವಿಳಂಬವಾಗುತ್ತಿದೆ. ಮಡಿಕೇರಿ ಆಕಾಶವಾಣಿಯಲ್ಲೂ ಏಪ್ರಿಲ್ ತಿಂಗಳಿನಿAದೀಚೆಗೆ ಮಾಸಿಕ ವೇತನ ಸಮರ್ಪಕವಾಗಿ ಪಾವತಿಯಾಗದೆ ಸಿಬ್ಬಂದಿ ಕಾದುಕೂರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಣ್ಣಪುಟ್ಟ ನಿರ್ಧಾರಗಳ ಕೈಗೊಳ್ಳಲು ಕೂಡ ಬೆಂಗಳೂರು ಕ್ಲಸ್ಟರ್ ಉಪ ಮಹಾನಿರ್ದೇಶಕರ ಅನುಮತಿ ಪಡೆಯಬೇಕಾಗಿದೆ.