ಮಡಿಕೇರಿ, ಸೆ. ೨೩: ಕೊಡಗು ಜಿಲ್ಲೆಯ ಸಿಬಿಎಸ್‌ಸಿ ಶಾಲೆಗಳ ಸಂಘದ ಆಶ್ರಯದಲ್ಲಿ ನಡೆದ ಅಂತರ್ ಶಾಲಾ ನೃತ್ಯ ಸ್ಪರ್ಧೆ "ನರ್ತನ" ಕಾರ್ಯಕ್ರಮ ಮಡಿಕೇರಿ ಕೊಡಗು ವಿದ್ಯಾಲಯದಲ್ಲಿ ನಡೆಯಿತು.
ಶಾಲೆಯ ಶಿಕ್ಷಕರು ಸ್ವಾಗತ ನೃತ್ಯವನ್ನು ಪ್ರದರ್ಶಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪ್ರಶಸ್ತಿ ವಿಜೇತೆ ಐಮುಡಿಯಂಡ ರಾಣಿ ಮಾಚಯ್ಯ ಭಾಗವಹಿಸಿದ್ದರು. ಶಾಲೆಯ ಪ್ರಾಂಶುಪಾಲೆ ಕೆ.ಎಸ್. ಸುಮಿತ್ರಾ, ಎಸ್‌ಎಂಎಸ್ ಶಾಲೆಯ ಪ್ರಾಂಶುಪಾಲೆ ಕುಸುಮ್ ಹಾಗೂ ಆಡಳಿತಾಧಿಕಾರಿ ರವಿ ಪಿ. ವೇದಿಕೆಯಲ್ಲಿದ್ದರು. ಈ ಸಂದರ್ಭ ರಾಣಿ ಮಾಚಯ್ಯ ಅವರಿಗೆ ಸನ್ಮಾನ ನೀಡಿ ಗೌರವಿಸಲಾಯಿತು. ನೃತ್ಯ ಸ್ಪರ್ಧೆಯಲ್ಲಿ ಒಟ್ಟು ಐದು ವಿದ್ಯಾಸಂಸ್ಥೆಗಳು ಪಾಲ್ಗೊಂಡಿದ್ದವು. ಭರತನಾಟ್ಯ ಪ್ರದರ್ಶನದಲ್ಲಿ ಕೊಡಗು ವಿದ್ಯಾಲಯ ಶಾಲೆ ಮಡಿಕೇರಿ ಪ್ರಥಮ ಸ್ಥಾನ, ಎಸ್‌ಎಂಎಸ್ ಶಾಲೆ ವೀರಾಜಪೇಟೆ ದ್ವಿತೀಯ ಸ್ಥಾನ ಹಾಗೂ ನ್ಯಾಷನಲ್ ಅಕಾಡೆಮಿ ಶಾಲೆಯು ತೃತೀಯ ಸ್ಥಾನವನ್ನು ಪಡೆದವು. ಜಾನಪದ ನೃತ್ಯ ವಿಭಾಗದಲ್ಲಿ ನ್ಯಾಷನಲ್ ಅಕಾಡೆಮಿ ಶಾಲೆ ಪ್ರಥಮ, ಎಸ್‌ಎಂಎಸ್ ಶಾಲೆ ವೀರಾಜಪೇಟೆ ದ್ವಿತೀಯ ಸ್ಥಾನ ಹಾಗೂ ಅಂಕುರ್ ಪಬ್ಲಿಕ್ ಶಾಲೆ ತೃತೀಯ ಸ್ಥಾನ ಹಾಗೂ ಜ್ಞಾನಗಂಗಾ ಶಾಲೆ ಕುಶಾಲನಗರ ಸಮಾಧಾನಕರ ಬಹುಮಾನ ಪಡೆದುಕೊಂಡವು. ಕಾಂಟೆAಪರರಿ(ಸಮಕಾಲಿನ ನೃತ್ಯ)ನೃತ್ಯ ವಿಭಾಗದಲ್ಲಿ ಕೊಡಗು ವಿದ್ಯಾಲಯ ಶಾಲೆ ಮಡಿಕೇರಿ ಪ್ರಥಮ ಸ್ಥಾನ, ಅಂಕುರ್ ಪಬ್ಲಿಕ್ ಶಾಲೆ ದ್ವಿತೀಯ ಸ್ಥಾನವನ್ನು, ನ್ಯಾಷನಲ್ ಅಕಾಡೆಮಿ ಶಾಲೆ ತೃತೀಯ ಸ್ಥಾನವನ್ನು ಪಡೆದುಕೊಂಡವು.