*ಗೋಣಿಕೊಪ್ಪ, ಸೆ. ೨೩: ಕೊಡಗು ಜಿಲ್ಲಾ ಪಿ.ಸಿ. ಕ್ಲಬ್ ಹಾಗೂ ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ ಜಿಲ್ಲಾಮಟ್ಟದ ಚದುರಂಗ ಸ್ಪರ್ಧೆ ಗೋಣಿಕೊಪ್ಪ ಅನುದಾನಿತ ಪ್ರೌಢಶಾಲೆಯಲ್ಲಿ ನಡೆಯಿತು. ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ಅಧ್ಯಕ್ಷ ನೀತ್ ಅಯ್ಯಪ್ಪ ಅಧ್ಯಕ್ಷತೆಯಲ್ಲಿ ವಕೀಲ ಕಳ್ಳಿಚಂಡ ಅಪ್ಪಣ್ಣ, ನೂರೆರ ಧನ್ಯ ಪಂದ್ಯಾವಳಿಯನ್ನು ಉದ್ಘಾಟಿಸಿದರು.

ನಾಲ್ಕು ವಿಭಾಗಗಳಿಗೆ ನಡೆದ ಸ್ಪರ್ಧೆಯಲ್ಲಿ ಒಟ್ಟು ೨೨೦ ಸ್ಪರ್ಧಿಗಳು ಭಾಗವಹಿಸಿದ್ದರು. ಮುಕ್ತ ವಿಭಾಗದಲ್ಲಿ ಜಿಜೋಜೇಮ್ಸ್, ವಿಘ್ನೇಶ್, ನಾಗೇಂದ್ರ ಪ್ರಸಾದ್, ಪ್ರಮೋದ್ ವಿಎಸ್, ಪ್ರೌಢಶಾಲಾ ವಿಭಾಗದಲ್ಲಿ ಜ್ಯೋತಿರಾಧಿತ್ಯ, ನಿಖಿಲ್, ಮುಸ್ತಾಫ, ಶಶಾಂಕ್ ನಾಣಯ್ಯ, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಅನುಷ್ಕ ಬಿಪಿ, ರೋಶನ್ ಆರ್. ನಾಯ್ಕ್, ಅರುಷ್ ವಂದಕುದ್ರಿ, ಗೌತಮ್ ಎಂ.ಕೆ., ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಚಿನ್ವಿತ್ ಕೆ.ಎಸ್., ಧ್ಯಾನ್ ಎನ್., ತೆರನ್ ಕಾರ್ಯಪ್ಪ, ಶೌರ್ಯ ವಿಜೇತರಾದರು.

ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಜಿ.ಪಂ. ಮಾಜಿ ಸದಸ್ಯರುಗಳಾದ ಮೂಕಳೆರ ಕುಶಾಲಪ್ಪ, ಬಾನಂಡ ಪ್ರಥ್ಯು, ಪಿ.ಸಿ. ಕ್ಲಬ್ ಕಾರ್ಯದರ್ಶಿ ಟಿ.ಜೆ. ಅಂಟೋಣಿ, ಶಿಕ್ಷಕಿ ಧರಣಿ, ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ, ಪಿ.ಸಿ. ಕ್ಲಬ್‌ನ ಅಧ್ಯಕ್ಷ ಪ್ರದೀಪ್ ಪಿ.ಆರ್. ಇದ್ದರು.