ವೀರಾಜಪೇಟೆ, ಸೆ. ೨೩: ಕಡುಬಡತನದಲ್ಲೇ ಜೀವನ ಸಾಗಿಸುತ್ತಿರುವ ವಿದ್ಯಾರ್ಥಿಯ ಸ್ನಾತ ಕೋತ್ತರ ಪದವಿ ವ್ಯಾಸ ಂಗಕ್ಕೆ ವೀರಾಜ ಪೇಟೆಯ ಲಿಟಲ್ ಸ್ಕಾಲ ರ್ಸ್ ಅಕಾಡೆ ಮಿಯ ಮುಖ್ಯಸ್ಥೆ, ಉದ್ಯಮಿ, ಕಾಫಿ ಬೆಳೆಗಾರರು ಹಾಗೂ ಹೆಗ್ಗಳ ಗ್ರಾಮದ ಗೋಲ್ಡನ್ ರಾಕ್ಸ್ನ ಪೂಜಾ ರವೀಂದ್ರ ನೆರವು ನೀಡಿದ್ದಾರೆ.
ಸಂತ ಅನ್ನಮ್ಮ ಕಾಲೇಜಿನಲ್ಲಿ ದಾನಿಗಳ ನೆರವಿನಿಂದ ಹಾಗೂ ಅಲ್ಲಿನ ಫಾದರ್ ನೆರವಿನಿಂದ ವಿದ್ಯಾಭ್ಯಾಸ ಮಾಡಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿನಿ ಕೆ.ಟಿ. ಭವಾನಿ ಅವರಿಗೆ ನೆರವು ನೀಡಲಾಗಿದೆ.