ಮಡಿಕೇರಿ, ಸೆ. ೨೩ : ರೈತರ ಸೇವೆಗಾಗಿಯೇ ಮೀಸಲಾಗಿರುವ ಸಹಕಾರ ಕ್ಷೇತ್ರದಲ್ಲಿ ರಾಜಕೀಯ ನುಸುಳಬಾರದು ಎಂದು ಹಿರಿಯ ಸಹಕಾರಿ ಹಾಗೂ ಮಾಜಿ ಕಾನೂನು ಸಚಿವ ಎಂ.ಸಿ.ನಾಣಯ್ಯ ಹೇಳಿದರು.

ನಗರದ ಬಾಲಭವನ ಸಭಾಂ ಗಣದಲ್ಲಿ ನಡೆದ ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ಮಹಾಸಭೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತ ನಾಡಿದ ಅವರು ರೈತರ ಅಭ್ಯುದಯಕ್ಕೆ ಸಹಕಾರಿ ಕ್ಷೇತ್ರ ಸಹಕಾರಿಯಾಗಿದೆ ಎಂದರು.

ಕೊಡಗು ಜಿಲ್ಲೆಯ ಬೆಳೆಗಾರರು ಹಾಗೂ ರೈತರು ಸಹಕಾರಿ ಕ್ಷೇತ್ರವನ್ನು ಅತಿಯಾಗಿ ನಂಬಿರುವುದರಿAದ ಉತ್ತಮ ಸೇವೆ ನೀಡುವುದು ಈ ಕ್ಷೇತ್ರದಲ್ಲಿರುವವರ ಜವಾಬ್ದಾರಿ ಯಾಗಿದೆ ಎಂದು ತಿಳಿಸಿದರು.

ತಾನು ಏಲಕ್ಕಿ ಸಹಕಾರ ಸಂಘದ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ನಮ್ಮ ಸಂಘದ ಗೋದಾಮು ವರ್ಷದಲ್ಲಿ ೩-೪ ಲಕ್ಷ ಕೆ.ಜಿ.ಯಷ್ಟು ಏಲಕ್ಕಿ ದಾಸ್ತಾನು ಹೊಂದಿತ್ತು. ಆದರೆ ಈಗ ಕೊಡಗಿ ನಲ್ಲಿ ಏಲಕ್ಕಿ ಹೆಸರಿಲ್ಲದಂತೆ ನಾಶವಾಗು ತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ರೈತರಿಗೆ ಬೇಕಾದ ಗುಣಮಟ್ಟದ ವಿವಿಧ ಸಾಮಾಗ್ರಿಗಳ ಮಾರಾಟ ಮಳಿಗೆಯನ್ನು ಆನಂತರ ತೆರೆಯಲಾ ಗಿದೆ. ಸದಸ್ಯರು ಹಾಗೂ ರೈತರು ಸಂಘದ ಮೂಲಕವೇ ವ್ಯವಹರಿಸಬೇಕೆಂದು ಹೇಳಿದರು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಸೂದನ ಎಸ್.ಈರಪ್ಪ ಈ ಸಾಲಿನಲ್ಲಿ ಸಂಘ ರೂ.೬,೭೪,೪೫೩.೧೮ ನಿವ್ವಳ ಲಾಭ ಗಳಿಸಿದೆ ಎಂದರು.

ಸAಘÀ ಸಾಂಬಾರ ಮಳಿಗೆ ಆರಂ ಭಿಸಿ ಒಂದು ವರ್ಷವಾಗಿದೆ, ಸದಸ್ಯರು ಹಾಗೂ ಬೆಳೆಗಾರರು ಏಲಕ್ಕಿ ಮತ್ತು ಕರಿಮೆಣಸನ್ನು ಸಂಘಕ್ಕೆ ತಂದು ನ್ಯಾಯಯುತ ದರವನ್ನು ಪಡೆಯು ವಂತೆ ಮನವಿ ಮಾಡಿದರು.

ಬೆಳೆಗಾರರು ಹಾಗೂ ಗ್ರಾಹಕರು ವಂಚನೆಗೆ ಒಳಗಾಗದಂತೆ ಸಂಘ ಎಚ್ಚರ ವಹಿಸುತ್ತಿದೆ. ಗುಣಮಟ್ಟಕ್ಕೆ ಆದ್ಯತೆ ನೀಡುತ್ತಿದ್ದು, ಎಲ್ಲರೂ ಸದುಪ ಯೋಗ ಪಡಿಸಿಕೊಳ್ಳಬೇಕು ಎಂದರು.

ಸಭೆಯಲ್ಲಿ ನಿರ್ದೇಶಕರುಗಳಾದ ಬಿ.ಈ. ಬೋಪಯ್ಯ, ಕೋಳುಮುಡಿ ಯನ ಆರ್.ಅನಂತ ಕುಮಾರ್, ಮಂದ್ರೀರ, ಜೆ.ಮೋಹನ್‌ದಾಸ್, ಬಿ.ಸಿ.ಚೆನ್ನಪ್ಪ, ಅಜಿನಂಡ. ಎಂ. ಗೋಪಾಲಕೃಷ್ಣ, ಶಿವಚಾರರ ಎಸ್. ಸುರೇಶ್, ಕುಂಭಗೌಡನ, ಡಿ.ವಿನೋದ್ ಕುಮಾರ್, ಸಿ.ಪಿ.ವಿಜಯ್ ಕುಮಾರ್, ಪೇರಿಯನ ಉದಯ ಕುಮಾರ್, ಹೆಚ್.ಎ.ಬೊಳ್ಳು, ಕೆ.ಬಿ.ಬೆಳ್ಯಪ್ಪ, ಅಂಬೆಕಲ್ಲು ಸುಶೀಲ ಕುಶಾಲಪ್ಪ ಹಾಗೂ ಪರಿವಾರ ಎಸ್.ಕವಿತ ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿ ಎಂ.ಎA.ತಮ್ಮಯ್ಯ ನಿರೂಪಿಸಿ, ಉಪಾಧ್ಯಕ್ಷÀ ಕೆ.ಕೆ. ಗೋಪಾಲ ವಂದಿಸಿದರು. ಸಭೆಯಲ್ಲಿ ೧೦ನೇ ತರಗತಿ ಮತ್ತು ದ್ವಿತೀಯ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.