ಕೂಡಿಗೆ, ಸೆ. ೨೨: ಜಮೀನಿನಲ್ಲಿ ಕೆಲಸ ಮಾಡುವ ಸಂದರ್ಭ ಹಾವು ಕಚ್ಚಿ ಯುವಕ ಸಾವನ್ನಪ್ಪಿರುವ ಘಟನೆ ಕೂಡುಮಂಗಳೂರು ಸಮೀಪದ ದೊಡ್ಡತ್ತೂರು ಬೆಂಡೆಬೆಟ್ಟದಲ್ಲಿ ನಡೆದಿದೆ.

ಮೂಲತಃ ಪಿರಿಯಾಪಟ್ಟಣ ತಾಲೂಕಿನ ಹೆಬ್ಬಲು ಗ್ರಾಮದ ರಕ್ಷಿತ್ (೨೪) ಮೃತ ದುರ್ದೈವಿ. ದೊಡ್ಡತ್ತೂರು ಗ್ರಾಮದ ತನ್ನ ಅಣ್ಣನ ಮನೆಯಲ್ಲಿದ್ದ ರಕ್ಷಿತ್ ಅವರದ್ದೆ ಜಮೀನಿನಲ್ಲಿ ಕೆಲಸ ಮಾಡುವ ಸಂದರ್ಭ ಹಾವು ಕಚ್ಚಿದೆ. ತಕ್ಷಣವೇ ಆತನ ಗೆಳೆಯರು ಕುಶಾಲನಗರ ಸಮುದಾಯ ಆಸ್ಪತ್ರೆಗೆ ಸಾಗಿಸಿ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬAಧ ಪ್ರಕರಣ ದಾಖಲಾಗಿದೆ.