ಸಿದ್ದಾಪುರ, ಸೆ. ೨೨: ಶುಕ್ರವಾರದಂದು ದಿಢೀರ್ ಮಳೆಯಿಂದಾಗಿ ನೀರು ಅಂಗಡಿಗಳ ಒಳಗೆ ನುಗ್ಗಿದೆ.
ದ್ವಿಚಕ್ರ ವಾಹನಗಳು ಕೂಡ ನೀರಿನಲ್ಲಿ ಮುಳುಗಿದ ಘಟನೆ ನಡೆದಿದೆ. ವ್ಯಾಪ್ತಿಯಲ್ಲಿ ಎರಡು ಇಂಚು ಅಧಿಕ ಮಳೆ ಸುರಿದಿದ್ದು, ಕೊಂಡAಗೇರಿ ಭಾಗದ ರಸ್ತೆಗಳ ತುಂಬಾ ನೀರು ನಿಂತು ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮಳೆ ನೀರು ಹೋಗಲು ಸೂಕ್ತವಾದ ಚರಂಡಿ ಇಲ್ಲದೆ ಇರುವುದೇ ಸಮಸ್ಯೆ ಎದುರಾಗಿದೆ ಎಂದು ಸ್ಥಳೀಯರು ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಗಳು ನೀರು ತುಂಬಿ ನದಿಯಂತೆ ಕಂಡು ಬಂತು.