ಮಡಿಕೇರಿ, ಸೆ. ೨೩ : ಸರ್ಕಾರಿ ದಾಖಲೆಗಳಲ್ಲಿ ‘ಕೊಡಗರು’ ಅಥವಾ ‘ಕೊಡವರು’ ಪದ ಬಳಕೆಗೆ ಬದಲಾಗಿ ‘ಕೊಡವ’ ಎಂದು ಬಳಕೆ ಮಾಡಲು ರಾಜ್ಯ ಸಚಿವ ಸಂಪುಟದ ಸಭೆ ಅನುಮೋದನೆ ನೀಡಿದೆ.

ದಾಖಲೆಗಳಲ್ಲಿ ‘ಕೊಡಗರು’ ಅಥವಾ ‘ಕೊಡವರು’ ಎನ್ನುವ ಪದ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿ ‘ಕೊಡವ’ ಶಾಸ್ತಿçÃಯ ಪದ ಬಳಕೆಗಾಗಿ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಹೋರಾಟ ನಡೆಸುತ್ತಾ ಬಂದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಸಹಕಾರದೊಂದಿಗೆ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ‘ಕೊಡವ’ ಪದ ಬಳಕೆಗೆ ಸಚಿವ ಸಂಪುಟದ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ನಾಚಪ್ಪ ಅವರು, ಇದು ಸಿಎನ್‌ಸಿ ಹೋರಾಟದ ಫಲ ಎಂದು ಹರ್ಷ ವ್ಯಕ್ತಪಡಿಸಿದರು. ‘ಕೊಡವ’ ಪದವನ್ನು ಕ್ಯಾಬಿನೆಟ್ ನಿರ್ಣಯದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತಗೊಳಿಸಿದ್ದಾರೆ. ‘ಕೊಡವ’ ಎನ್ನುವ ಉಜ್ವಲ ಶಾಸ್ತಿçÃಯ ನಾಮಕ್ಕೆ ಶಾಸನಬದ್ಧ ಸ್ಥಿರೀಕರಣ ದೊರೆತ್ತಿದ್ದು,

(ಮೊದಲ ಪುಟದಿಂದ) ಇದು ಸಿಎನ್‌ಸಿಯ ಮಹತ್ವದ ಮೈಲುಗಲ್ಲಾ ಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕ್ಯಾಬಿನೆಟ್ ಅನುಮೋದನೆ ನೀಡಿದ ‘ಕೊಡವ’ ಶಾಸ್ತಿçÃಯ ನಾಮಕ್ಕೆ ಇನ್ನು ಒಂದೆರಡು ದಿನಗಳಲ್ಲಿ ಗೆಜೆಟ್ ನೋಟಿಫಿಕೇಷನ್ ಜಾರಿಯಾಗಿ ‘ಕೊಡವ’ ಪದ ಬಳಕೆ ಶಾಸನ ಬದ್ಧಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

ಇಷ್ಟು ವರ್ಷಗಳ ಕಾಲ ಕೊಡವರನ್ನು ‘ಕೊಡವ’ ಎಂದು ನಮೂದಿಸದೆ ‘ಕೊಡಗರು’ ಎಂದು ನಮೂದಿಸುವ ಮೂಲಕ ಕೊಡವ ಬುಡಕಟ್ಟು ಆದಿಮ ಸಂಜಾತ ಮೂಲನಿವಾಸಿಗಳ ಅಸ್ತಿತ್ವದ ಬಗ್ಗೆ ಆತಂಕ ಮೂಡಿಸಲಾಗುತ್ತಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಿಎನ್‌ಸಿ ಸಂಘಟನೆ ೨೦೦೮ ರಿಂದಲೇ ಹೋರಾಟವನ್ನು ಆರಂಭಿಸಿತು.

೨೦೦೮ ರಲ್ಲಿ ಡಾ.ದ್ವಾರಕಾನಾಥ್ ನೇತೃತ್ವದ ಆಯೋಗಕ್ಕೆ ಮನವಿ ಸಲ್ಲಿಸಲಾಯಿತು. ೨೦೦೯ ರಲ್ಲಿ ಆಯೋಗವು ಕೊಡಗಿಗೆ ಭೇಟಿ ನೀಡಿತು. ಆಯೋಗದ ಕರೆಯ ಮೇರೆಗೆ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರೊಂದಿಗಿನ ತಂಡ ಬೆಂಗಳೂರಿನಲ್ಲಿರುವ ಆಯೋಗದ ಕಚೇರಿಯಲ್ಲಿನ ನ್ಯಾಯಾಲಯದಲ್ಲಿ ಕೊಡವ ಪದ ಬಳಕೆಯ ಸಮಗ್ರ ಚಾರಿತ್ರಿಕ ಹಿನ್ನೆಲೆ ಮತ್ತು ದಾಖಲಾತಿಯೊಂದಿಗೆ ಜ್ಞಾಪನಾ ಪತ್ರ ಸಲ್ಲಿಸಿತು. ೨೦೧೦ ರಲ್ಲಿ ಡಾ.ದ್ವಾರಕಾನಾಥ್ ಆಯೋಗ ಎಲ್ಲಾ ಸರ್ಕಾರಿ ದಾಖಲೆಗಳಲ್ಲಿ `ಕೊಡಗರು' ಬದಲಿಗೆ ‘ಕೊಡವ’ ಪದ ಬಳಕೆಗೆ ಶಿಫಾರಸ್ಸು ಮಾಡಿತು. ಇದಕ್ಕೆ ಸ್ಪಂದನ ಸಿಗದೆ ಇದ್ದಾಗ ೨೦೧೪ ರಲ್ಲಿ ಸಿಎನ್‌ಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತು. ೨೦೧೬ರಲ್ಲಿ ಹೈಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆಯನ್ನು ಸಲ್ಲಿಸಿತಾದರೂ ಯಾವುದೇ ಸ್ಪಂದನ ದೊರೆತಿಲ್ಲ. ೨೦೧೮ ರಲ್ಲಿ ಮತ್ತೆ ಕೊಡವ ನ್ಯಾಷನಲ್ ಕೌನ್ಸಿಲ್ ಕೋರ್ಟ್ ಮೊರೆ ಹೋಯಿತು.

೨೦೨೧ ಡಿ.೮ ರಂದು ಹೈಕೋರ್ಟ್ನ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಪೀಠವು ‘ಕೊಡಗರು’ ಬದಲಿಗೆ ‘ಕೊಡವ’ ಪದ ಬಳಸುವಂತೆ ಮಹತ್ವದ ತೀರ್ಪು ನೀಡಿತು. ೨೦೨೨ ರಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರಿಗೆ ನ್ಯಾಯಾಲಯದ ಆದೇಶದೊಂದಿಗೆ ಜ್ಞಾಪನಾ ಪತ್ರವನ್ನು ಸಲ್ಲಿಸಲಾಯಿತು. ನಂತರ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ಮೂಲಕ ಅಂದಿನ ಸಿಎಂ ಬೊಮ್ಮಾಯಿ ಅವರಿಗೆ ಪತ್ರ ತಲುಪಿತ್ತಾದರೂ ಈ ನಿಟ್ಟಿನಲ್ಲಿ ಅವರ ಸರಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ.

ಸಿಎನ್‌ಸಿ ತನ್ನ ನ್ಯಾಯಾಂಗ ಮತ್ತು ರಾಜಕೀಯ ಹೋರಾಟವನ್ನು ಮುಂದುವರೆಸಿತು. ೨೭ ಜುಲೈ ೨೦೨೩ ರಂದು ನಡೆದ ಕ್ಯಾಬಿನೆಟ್ ಸಭೆಯು `ಕೊಡವ’ ಪದದ ಮರುಸ್ಥಾಪನೆಗೆ ಒಪ್ಪಿಗೆ ನೀಡಿತು. ಆದರೆ ಎರಡು ನಾಮಕರಣಗಳು ಇದ್ದವು: ಅಂದರೆ `ಕೊಡವ’ ಮತ್ತು `ಕೊಡವರು’ ಎರಡನ್ನು ಪುನಃಸ್ಥಾಪಿಸಲಾಯಿತು.

ಈ ಕುರಿತು `ಕೊಡವ’ ಏಕವಚನ ಪದವನ್ನು ಮಾತ್ರ ಉಳಿಸಿಕೊಳ್ಳ ಬೇಕೆಂದು ಮತ್ತೊಮ್ಮೆ ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ (ಕೆಎಸ್‌ಬಿಸಿ)ಯ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರಿಗೆ ಮನವಿ ಮಾಡಿದರು. ಅವರು ಸಿಎನ್‌ಸಿಯ ಮನವಿಗೆ ಪ್ರತಿಕ್ರಿಯಿಸಿದ್ದು ‘ಕೊಡವರು’ ಎಂಬ ಬಹುವಚನ ನಾಮಕರಣವನ್ನು ಕೈಬಿಡುವ ಮೂಲಕ ‘ಕೊಡವ’ ಏಕವಚನ ನಾಮಕರಣ ಉಚ್ಛರಣೆಯನ್ನು ಮಾತ್ರ ಮರುಸ್ಥಾಪಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ.

ಈ ಅಧಿಕೃತ ನಾಮಕರಣದ ಮೂಲಕ ಸಂಘಟನೆಯ ಎಲ್ಲಾ ೯ ಪರಮಮೋಚ್ಛ ಆಕಾಂಕ್ಷೆಗಳು ಮತ್ತು ಗುರಿಗಳನ್ನು ಪಡೆದುಕೊಳ್ಳಬಹುದು ಮತ್ತು ಸಾಧಿಸಬಹುದು ಎಂದು ನಾಚಪ್ಪ ಪ್ರತಿಪಾದಿಸಿದರು.