ಎಂ.ಎನ್. ಚಂದ್ರಮೋಹನ್
ಕುಶಾಲನಗರ, ಸೆ. ೨೩ : ರಾಷ್ಟç ಕಂಡ ಮಹಾನ್ ಸೇನಾ ನಾಯಕರು ವೀರಸೇನಾನಿಗಳ ಪ್ರತಿಮೆಗಳನ್ನು ಜಿಲ್ಲೆಯ ಪ್ರಮುಖ ವೃತ್ತಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಿರುವುದು ನಿಜವಾಗಿಯೂ ಹೆಮ್ಮೆಯ ವಿಚಾರ ಜೊತೆಗೆ ಗೌರವದ ಸಂಕೇತವು ಕೂಡ ಆಗಿದೆ.
ಆದರೆ ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯ ನಾಗಾಲೋಟದ ನಡುವೆ ಪ್ರತಿಮೆಗಳಿಗೆ ವಾಹನಗಳು ಡಿಕ್ಕಿಯಾಗುವ ಮೂಲಕ ಹಾನಿಯಾಗುತ್ತಿರುವುದು ವಿಷಾದಕರ ಸಂಗತಿಯಾಗಿದೆ.
ಅತಿ ಶೀಘ್ರದಲ್ಲಿ ಬೆಳೆಯುತ್ತಿರುವ ನಗರವಾದ ಕುಶಾಲನಗರ ತಾಲೂಕು ಕೇಂದ್ರವಾದ ಕುಶಾಲನಗರದಲ್ಲಿ ಗಣಪತಿ ದೇವಾಲಯ ಮುಂಭಾಗ ಮಹಾನ್ ಸೇನಾ ದಂಡ ನಾಯಕ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಅವರ ಹೆಸರಿನಲ್ಲಿ ವೃತ್ತ ಒಂದನ್ನು ರಚಿಸಲಾಗಿತ್ತು. ಆ ವೃತ್ತಕ್ಕೆ ನೀಡಬೇಕಾಗಿದ್ದ ಅಗತ್ಯವಾದ ಗೌರವವನ್ನು ನೀಡುವಲ್ಲಿ ಮಾತ್ರ ಬಹುತೇಕ ಜನರು ಮರೆತಂತೆ ಕಂಡು ಬರುತ್ತಿತ್ತು.
ಪ್ರತಿದಿನ ಒಂದಲ್ಲ ಒಂದು ವಾಹನ ಆ ವೃತ್ತಕ್ಕೆ ಒರೆಸಿಕೊಂಡು ಹೋಗುತ್ತಿರುವುದು ಸಾಮಾನ್ಯವಾಗಿದೆ. ಇನ್ನೊಂದೆಡೆ ಕುಶಾಲನಗರದಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಾಗಲಿ ಆ ಗೌರವಾನ್ವಿತ ವೃತ್ತಕ್ಕೆ ಭಿತ್ತಿ ಪತ್ರ ಅಂಟಿಸುವುದು, ವೃತ್ತದ ಮೇಲೆ ಸಂಘಟನೆಗಳ ಧ್ವಜಗಳನ್ನು ಹಾರಿಸುವುದು, ಊರಿನಲ್ಲಿ ಯಾರಾದರೂ ಸಾವಾದಲ್ಲಿ ಅವರ ಭಾವಚಿತ್ರವನ್ನು ಅಂಟಿಸಿ ಶ್ರದ್ಧಾಂಜಲಿ ಕೋರುವುದು ಇಂಥ ಕಾಯಕಗಳು ನಿರಂತರವಾಗಿ ನಡೆದು ವೀರಸೇನಾನಿಗಳಿಗೆ ಅಗೌರವ ಉಂಟಾಗುತ್ತದೆ. ಅವರ ಹುಟ್ಟು ಹಬ್ಬದಂದು ಸ್ಥಳೀಯ ಕೊಡವ ಸಮಾಜ ಪ್ರಮುಖರು ಮತ್ತು ಸದಸ್ಯರು ಗೌರವ ಸೂಚನೆ ನೀಡುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ. ಕೆಲವು ತಿಂಗಳುಗಳ ಹಿಂದೆ ಕನ್ನಡ ಕಾರ್ಯಕ್ರಮ ಸಂದರ್ಭ ಈ ವೃತ್ತಕ್ಕೆ ಕಬ್ಬಿಣದ ಸರಪಳಿ ಅಳವಡಿಸಿ ಸಿಂಗರಿಸಲು ಹೋದ ವೇಳೆ ಈ ವೃತ್ತಕ್ಕೆ ಸಂಪೂರ್ಣ ಹಾನಿಯಾಗಿದೆ.
ಈ ವೃತ್ತ ಹೆದ್ದಾರಿಯೊಂದಿಗೆ ಐದು ಕೂಡು ರಸ್ತೆಗಳು ಸೇರುವ ಜಾಗವಾಗಿದ್ದು ಬಹುತೇಕ ಅವೈಜ್ಞಾನಿಕವಾಗಿ ವೃತ್ತ ನಿರ್ಮಾಣವಾಗಿದೆ ಎಂದರೆ ತಪ್ಪಾಗಲಾರದು. ವಾಹನ ಸಂಚಾರಕ್ಕೆ ಭಾರೀ ತೊಡಕು ಉಂಟಾಗುವುದರೊAದಿಗೆ ಇಲ್ಲಿ ವಾಹನ ಸಂಚಾರವನ್ನು ಸುಗಮವಾಗಿ ನಡೆಸಲು ಸಂಚಾರಿ ಪೊಲೀಸರು ಹೆಣಗಾಡುತ್ತಿರುವುದು ದಿನನಿತ್ಯ ಕಂಡು ಬರುತ್ತಿರುವ ದೃಶ್ಯವಾಗಿದೆ. ಲಕ್ಷಗಟ್ಟಲೆ ವೆಚ್ಚ ಮಾಡಿ ನಿರ್ಮಾಣಗೊಂಡ ಸಿಗ್ನಲ್ ವ್ಯವಸ್ಥೆ ಕೂಡ ಇಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಇದು ಅವೈಜ್ಞಾನಿಕವಾಗಿ ಇರುವ ಕಾರಣ ಕಾರ್ಯನಿರ್ವಹಿಸಲು ಆಗುತ್ತಿಲ್ಲ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು. ಕುಶಾಲನಗರ ಪಂಚಾಯಿತಿ ಬಜೆಟ್ ನಲ್ಲಿ ಘೋಷಣೆಯಾದಂತೆ ಪಾದಚಾರಿಗಳಿಗೆ ಓಡಾಡಲು ಕನಿಷ್ಟ ಫ್ಲೆöÊ ಓವರ್ ಆದರೂ ನಿರ್ಮಿಸಬೇಕಾಗಿದೆ.
೧೬- ೨೦ ಚಕ್ರಗಳ ಬೃಹತ್ ಗಾತ್ರದ ಲಾರಿ ಮತ್ತಿತರ ವಾಹನಗಳು ಇಲ್ಲಿ ಬಂದಾಗ ತಿರುವು ತೆಗೆದುಕೊಳ್ಳಲು ಭಾರೀ ಅನಾನುಕೂಲ ಉಂಟಾಗುತ್ತಿದೆ. ಗಣಪತಿ ದೇವಸ್ಥಾನದ ಮುಂಭಾಗ ಪಾದಚಾರಿಗಳು ತೆರಳಬೇಕಾದ ಜಾಗದಲ್ಲಿ ತಳ್ಳುವ ಗಾಡಿಗಳು ಬೀದಿ ಬದಿ ವ್ಯಾಪಾರಿಗಳು ಇನ್ನೊಂದೆಡೆ ವಾಹನ ದ್ವಿಚಕ್ರ ವಾಹನಗಳು ನಿಲ್ಲುವುದರೊಂದಿಗೆ ಇಡೀ ವೃತ್ತ ಸಂಪೂರ್ಣ ಗೊಂದಲಮಯವಾಗಿ ಕಂಡುಬರುತ್ತದೆ. ಸಮೀಪದಲ್ಲಿ ಸರಕಾರಿ ಬಸ್ ನಿಲ್ದಾಣ, ಹೆದ್ದಾರಿ ಬದಿಯಲ್ಲಿ ನಿಲ್ಲುವ ಖಾಸಗಿ ಬಸ್ಸುಗಳು ಅವುಗಳ ನಡುವೆ ಆಟೋ ರಿಕ್ಷಾಗಳು, ಗಣಪತಿ ದೇವಾಲಯಕ್ಕೆ ಬರುವ ಪೂಜಾ ವಾಹನಗಳು, ಕೆಲವೊಮ್ಮೆ ಸಿಗ್ನಲ್ ಬಳಿ ನಿಲ್ಲುವ ಪೊಲೀಸ್ ವಾಹನಗಳು ಇವೆಲ್ಲದರ ನಡುವೆ ಸಂಚಾರಿ ಪೊಲೀಸರು ಸಮರ್ಪಕ ಸಂಚಾರಿ ವ್ಯವಸ್ಥೆಗಾಗಿ ಪಡುವ ಪರದಾಟ ಹೇಳತೀರದು. ದಿನ ನಿತ್ಯ ಬಿಸಿಲಿನ ಬೇಗೆಯಲ್ಲಿ ಮಳೆಯ ನಡುವೆ ಸಂಚಾರಿ ಪೊಲೀಸರು ಕೆಲಸ ನಿರ್ವಹಿಸುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.
ಕೆಲವೊಮ್ಮೆ ವಾಹನ ಸವಾರರು ಸಂಚಾರಿ ನಿಯಮವನ್ನು ಉಲ್ಲಂಘಿಸಿ ಕರ್ತವ್ಯ ನಿರತ ಪೊಲೀಸರ ಮೇಲೆ ರಾಜಕೀಯ
(ಮೊದಲ ಪುಟದಿಂದ) ಪ್ರಭಾವ ಬೀರಿ ಮಾತಿನ ಚಕಮಕಿ ನಡೆಸುತ್ತಿರುವುದು ನಿರಂತರ ಕಂಡುಬರುವ ದೃಶ್ಯ.
ಗಣಪತಿ ದೇವಾಲಯದ ಮುಂಭಾಗ ವೃತ್ತ ಅಳವಡಿಸುವ ವೇಳೆ ಸುತ್ತಮುತ್ತಲಿನ ಅಕ್ರಮ ರಸ್ತೆ ಬದಿ ವಾಹನಗಳ ನಿಲುಗಡೆ ತೆರವು ಮತ್ತು ರಸ್ತೆ ಬುಡದಲ್ಲಿ ವ್ಯಾಪಾರ ಮಾಡುತ್ತಿರುವ ಅಂಗಡಿಗಳನ್ನು ಸ್ಥಳಾಂತರಿಸುವುದು ಉತ್ತಮ ಎನ್ನುತ್ತಾರೆ ಕುಶಾಲನಗರ ಪುರಸಭೆ ಮಾಜಿ ಸದಸ್ಯ ಕೆ.ಜಿ. ಮನು ಗಣಪತಿ ದೇವಾಲಯ ಮುಂಭಾಗದ ವೃತ್ತದ ಬಗ್ಗೆ ಸಂಪೂರ್ಣ ಗಮನಹರಿಸಲಾಗುವುದು ಯಾವುದೇ ರೀತಿಯ ಅನಾನುಕೂಲತೆ ಇಲ್ಲದಂತೆ ವೃತ್ತದಲ್ಲಿ ಯೋಜನೆ ರೂಪಿಸಲಾಗುವುದು ಎಂದು ಮುಖ್ಯ ಅಧಿಕಾರಿ ಕೃಷ್ಣ ಪ್ರಸಾದ್ ಶಕ್ತಿಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕುಶಾಲನಗರ ಕಾರು ನಿಲ್ದಾಣದಿಂದ ಪೋಸ್ಟ್ ಆಫೀಸ್ ತನಕ ವಾಹನ ಸಂಚಾರದ ದಟ್ಟಣೆ ಅಧಿಕ ಗೊಳ್ಳುವುದರೊಂದಿಗೆ ಪಾದಚಾರಿಗಳಿಗೆ ನಡೆದಾಡಲು ಸಂಕಷ್ಟ ಉಂಟಾಗುತ್ತಿದೆ ಎಂದು ಕರ್ನಾಟಕ ಕಾವಲು ಪಡೆ ಜಿಲ್ಲಾಧ್ಯಕ್ಷ ಎಂ. ಕೃಷ್ಣ ತಿಳಿಸಿದ್ದಾರೆ.
ಅಯ್ಯಪ್ಪ ಸ್ವಾಮಿ ದೇವಾಲಯ ರಸ್ತೆ, ಮೈಸೂರು ರಸ್ತೆ, ಪ್ರವಾಸಿ ಮಂದಿರ ರಸ್ತೆ ಮತ್ತು ಮಡಿಕೇರಿ ಮುಖ್ಯ ರಸ್ತೆ ಸೇರುವ ಅಂತರ್ ರಾಜ್ಯ ವಾಹನ ಸಂಚಾರ ಉಳ್ಳ ಕುಶಾಲನಗರ ಗಣಪತಿ ದೇವಾಲಯ ಮುಂಭಾಗದ ಈ ವೃತ್ತದಲ್ಲಿ ಮಹಾ ದಂಡ ನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಪ್ರತಿಮೆ ನಿಲ್ಲಿಸಿದಲ್ಲಿ ಅವರಿಗೆ ಸೂಕ್ತವಾದ ಗೌರವ ಸಲ್ಲಿಸಲು ಈ ವೃತ್ತದಲ್ಲಿ ಭಾರಿ ಅನಾನುಕೂಲತೆ ಕಂಡುಬರುತ್ತಿದೆ. ಈ ವ್ಯಾಪ್ತಿಯ ವೃತ್ತವನ್ನು ಅಗಲೀಕರಣ ಮಾಡಿ ಅಭಿವೃದ್ಧಿಗೊಳಿಸಬೇಕು ಎನ್ನುತ್ತಾರೆ ಕೊಡವ ಸಮಾಜದ ಅಧ್ಯಕ್ಷ ಬೋಸ್ ಮೊಣ್ಣಪ್ಪ ಅವರು.
ನಿಲ್ದಾಣ ಎದುರು ಭಾಗದ ಮರದ ವ್ಯಾಪ್ತಿಯಿಂದ ಹೊಟೇಲ್ ಗ್ರೀನ್ ತನಕ ರಸ್ತೆ ಅಗಲೀಕರಣದೊಂದಿಗೆ ಅಭಿವೃದ್ಧಿಗೊಳಿಸುವುದು ಒಳಿತು ಎನ್ನುವುದು ಈ ಭಾಗದ ಜನರ ಅಭಿಪ್ರಾಯವಾಗಿದೆ.
ಇಲ್ಲದಿದ್ದರೆ ಸಂಚಾರಿ ದಟ್ಟಣೆಯೊಂದಿಗೆ ಬೃಹತ್ ವಾಹನಗಳ ಸಂಚಾರ ಸಂದರ್ಭ ವಾಹನಗಳಿಂದ ಇದೀಗ ನಿರ್ಮಾಣಗೊಳ್ಳುತ್ತಿರುವ ಪ್ರತಿಮೆಗೆ ಸಂಭಾವ್ಯ ಹಾನಿ ಕುಶಾಲನಗರದಲ್ಲಿ ಕೂಡ ನಡೆಯುವ ಸಾಧ್ಯತೆ ಇರಲಿದೆ ಎನ್ನುವುದು ಎಲ್ಲರ ಆತಂಕವಾಗಿದೆ.
ಕೂಡಲೇ ಸಂಬAಧಿಸಿದವರು ಗಮನಹರಿಸಿ ಈ ವ್ಯಾಪ್ತಿಯ ವೃತ್ತದ ಅಗಲೀಕರಣ ಬಗ್ಗೆ ಕಾರ್ಯಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕಾಗಿದೆ.