ಸೋಮವಾರಪೇಟೆ, ಸೆ.೨೧ : ತಾಲೂಕಿನ ಹಿಪ್ಲಿ ಗೇಟ್ ಮಾರ್ಗವಾಗಿ ಅಂಕನಳ್ಳಿ ಮೂಲಕ ಆಲೂರು ಸಿದ್ದಾಪುರ ಸಂಪರ್ಕಿಸುವ ಮುಖ್ಯರಸ್ತೆಯಲ್ಲಿ ಹೊಂಡಾಗುAಡಿಗಳು ನಿರ್ಮಾಣಗೊಂಡಿದ್ದು, ಮಳೆ ನೀರು ಸಂಗ್ರಹವಾಗಿ ಸಣ್ಣ ಕೆರೆಗಳಂತೆ ಮಾರ್ಪಟ್ಟಿರುವ ರಸ್ತೆಯಲ್ಲಿ ವಾಹನಗಳು ಸಂಚರಿಸುವAತಾಗಿದೆ.
ಹಿಟ್ಲಿಗೇಟ್ನಿAದ ೧೦೦ ಮೀಟರ್ ದೂರದಲ್ಲಿಯೇ ರಸ್ತೆಯ ಮಧ್ಯೆ ಬೃಹತ್ ಹೊಂಡಗಳು ನಿರ್ಮಾಣವಾಗಿವೆ. ರಸ್ತೆಗೆ ಸಮರ್ಪಕ ಚರಂಡಿಯ ವ್ಯವಸ್ಥೆ ಇಲ್ಲದೇ ಇರುವುದರಿಂದ ಮಳೆ ನೀರಿನ ಸರಾಗ ಹರಿವಿಗೆ ತಡೆಬಿದ್ದಿದ್ದು, ಪರಿಣಾಮ ರಸ್ತೆಯಲ್ಲಿ ಕೊಳಚೆ ನೀರಿನ ಕೆರೆಗಳು ನಿರ್ಮಾಣವಾಗಿವೆ.
ಲೋಕೋಪಯೋಗಿ ಇಲಾಖೆಗೆ ಒಳಪಡುವ ಈ ರಸ್ತೆಯು ನಿರ್ವಹಣೆಯ ಕೊರತೆಯಿಂದ ನಲುಗುತ್ತಿರುವುದಕ್ಕೆ ಗುಂಡಿಗಳು ಸಾಕ್ಷಿಯಾಗಿವೆ. ರಸ್ತೆಯಲ್ಲಿ ಬೃಹತ್ ಗುಂಡಿಗಳು ನಿರ್ಮಾಣಗೊಂಡು ವಾಹನಗಳ ಸಂಚಾರಕ್ಕೆ ತೊಡಕಾಗಿದ್ದರೂ ಸಂಬAಧಿಸಿದ ಇಲಾಖಾಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ಪರಿಣಾಮ ಹಲವಷ್ಟು ದ್ವಿಚಕ್ರ ಸವಾರರು ರಾತ್ರಿ ವೇಳೆ ಸಂಚರಿಸುವ ಸಂದರ್ಭ ಗುಂಡಿಯಲ್ಲಿ ಬಿದ್ದು ಗಾಯಗೊಂಡಿದ್ದಾರೆ.
ತಕ್ಷಣ ರಸ್ತೆಯ ಗುಂಡಿಗಳನ್ನು ಮುಚ್ಚುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸ್ಥಳೀಯರಾದ ದೀಪಕ್, ದುಷ್ಯಂತ್, ಸೋಮಯ್ಯ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ವೆಂಕಟೇಶ್ ನಾಯಕ್ ಅವರು, ಮುಂದಿನ ೨ ದಿನಗಳಲ್ಲಿ ರಸ್ತೆಯ ಗುಂಡಿಗಳನ್ನು ಮುಚ್ಚಿ, ಚರಂಡಿ ನಿರ್ವಹಣೆ ಮಾಡುವುದಾಗಿ ‘ಶಕ್ತಿ’ಗೆ ತಿಳಿಸಿದ್ದಾರೆ.