ಮೂಲತಃ ಜಿಲ್ಲೆಯ ಕಾಕೋಟು ಪರಂಬು ನಿವಾಸಿ ಮೈಸೂರಿನಲ್ಲಿ ನೆಲೆಸಿದ್ದ ವಾಯುಸೇನೆಯ ಮಾಜಿ ಯೋಧ ಸಾರ್ಜೆಂಟ್ ಮಂಡೇಟಿರ ಸುಬ್ರಮಣಿ (೬೭) ಅವರು ತಾ. ೨೧ರಂದು ನಿಧನರಾದರು. ಮೃತರು ಮೈಸೂರಿನ ವಿ.ಕೆ.ಇ ಟ್ರಸ್ಟ್ನ ಅಧ್ಯಕ್ಷರಾಗಿ ಹಾಗೂ ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಕಾನೂನು ಸಲಹೆಗಾರ ರಾಗಿಯೂ ಸೇವೆ ಸಲ್ಲಿಸಿದ್ದರು.

ಟ ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮದ ನಿವೃತ್ತ ಶಿಕ್ಷಕ ಎಚ್.ವಿ. ಸೋಮಪ್ಪ ಅವರ ಪತ್ನಿ ಶಾರದಮ್ಮ (೮೫) ತಾ.೨೧ರಂದು ನಿಧನರಾದರು. ಮೃತರ ಅಂತ್ಯ ಸಂಸ್ಕಾರ ತಾ.೨೨ ರಂದು (ಇಂದು) ಹಳೇಗೋಟೆಯಲ್ಲಿ ನಡೆಯಲಿದೆ. ಮೃತರು ಪತಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.