ಎನ್.ಡಿ.ಎ. ಸೇರ್ಪಡೆಯಾದ ಜೆ.ಡಿ.ಎಸ್.
ಬೆಂಗಳೂರು, ಸೆ. ೨೨: ಮುಂಬರುವ ಲೋಕಸಭೆ ಚುನಾವಣೆಗೆ ಜೆಡಿಎಸ್-ಬಿಜೆಪಿ ಮೈತ್ರಿ ಹಿನ್ನೆಲೆಯಲ್ಲಿ ಇಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬಿಜೆಪಿ ನೇತೃತ್ವದ ರಾಷ್ಟಿçÃಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ (ಎನ್‌ಡಿಎ) ಜೆಡಿಎಸ್ ಔಪಚಾರಿಕವಾಗಿ ಸೇರ್ಪಡೆಯಾಗಿದೆ ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದಾರೆ. ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಅಮಿತ್ ಶಾ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಮಾತನಾಡಿದ ಕುಮಾರಸ್ವಾಮಿ ಅವರು, ಅಧಿಕೃತವಾಗಿ ಮೈತ್ರಿ ಬಗ್ಗೆ ಕೆಲ ವಿಚಾರ ಚರ್ಚೆ ನಡೆಸಿದ್ದೇವೆ. ಮೈತ್ರಿ ಬಗ್ಗೆ ಎಲ್ಲಾ ರೀತಿಯಲ್ಲೂ ಸುಗಮವಾಗಿ ಚರ್ಚೆ ನಡೆಯುತ್ತಿದೆ. ಎಷ್ಟು ಸೀಟ್ ನಮಗೆ ಕೊಡುತ್ತಾರೆಂಬುದು ಮುಖ್ಯವಲ್ಲ ಎಂದಿದ್ದಾರೆ.
ಚAದ್ರಯಾನ ೩-ಸಂಪರ್ಕ ನಿರೀಕ್ಷೆಯಲ್ಲಿ ಇಸ್ರೋ
ಬೆಂಗಳೂರು, ಸೆ. ೨೨: ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆಯ ಐತಿಹಾಸಕ ಚಂದ್ರಯಾನ ೩ ಯೋಜನೆಯ ವಿಕ್ರಂ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್ ಚಂದ್ರನೆಲದಲ್ಲಿ ಅವಿತಿರುವ ಸ್ಥಳದಲ್ಲಿ ತಾ. ೨೨ ರಂದು ಸೂರ್ಯೋದಯವಾಗಿದ್ದು, ೧೪ ದಿನಗಳ ಅತ್ಯಂತ ಚಳಿಯ ಚಂದ್ರನ ಕತ್ತಲಿನ ಸ್ಥಳದಲ್ಲಿ ನಿದ್ದೆಯಲ್ಲಿದ್ದ ಇವೆರಡೂ ಯಂತ್ರಗಳು ಮತ್ತೆ ಕಾರ್ಯಚರಿಸುವಂತೆ ಮಾಡಲು ಇಸ್ರೋ ಪಣ ತೊಟ್ಟಿದೆ. ತಾ. ೪ ರಂದೆ, ಸೂರ್ಯಸ್ತಕ್ಕೂ ೪ ದಿನ ಮೊದಲು ತನ್ನೆಲ್ಲ ವೈಜ್ಞಾನಿಕ ಸಂಶೋಧನೆಗಳನ್ನು ಪೂರೈಸಿ ಚಂದ್ರನಲ್ಲಿನ ಅತ್ಯಂತ ಚಳಿಯ ರಾತ್ರಿಗೆ ಸಿದ್ದವಾಗುವ ನಿಟ್ಟಿನಲ್ಲಿ ಯಂತ್ರ ಪರಿಕರಗಳನ್ನು ಆರಿಸಿ ನಿದ್ದೆಗೆ ಜಾರಿದ ವಿಕ್ರಂ ಹಾಗೂ ಪ್ರಗ್ಯಾನ್ ಮೇಲೆ ಇದೀಗ ಮತ್ತೆ ಸೂರ್ಯನ ಬೆಳಕು ಬಿದ್ದಿದೆ. ಸೌರ ವಿದ್ಯುತ್ ಬಳಸಿ ಇವೆರಡೂ ಮತ್ತೆ ಎದ್ದು ಇಸ್ರೋದ ಬೆಂಗಳೂರು ಕೇಂದ್ರದೊAದಿಗೆ ಸಂಪರ್ಕ ಸಾಧಿಸುವಂತೆ ಮಾಡಲು ಪ್ರಯತ್ನಿಸುತ್ತಿರುವುದಾಗಿ ಇಸ್ರೋ ಮಾಹಿತಿ ನೀಡಿದೆ.
ಮಹಿಳಾ ಮೀಸಲಾತಿ ನವ ಭಾರತದ ಹೊಸ ಶಕ್ತಿ-ಮೋದಿ
ನವದೆಹಲಿ, ಸೆ. ೨೨: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. ೩೩ರಷ್ಟು ಸ್ಥಾನಗಳನ್ನು ಒದಗಿಸುವ ಮಹಿಳಾ ಮೀಸಲು ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾದ ಬೆನ್ನಲೇ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲಾ ಮಹಿಳೆಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿರುವ ಬಿಜೆಪಿ ಕಚೇರಿಯಲ್ಲಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಹಿಳಾ ಮೀಸಲಾತಿ ಮಸೂದೆ ಸಾಮಾನ್ಯ ಕಾನೂನಲ್ಲ, ಇದು ನವ ಭಾರತದ ಹೊಸ ಶಕ್ತಿ ಎಂದರು.
ಮಸೂದೆ ತಕ್ಷಣ ಜಾರಿಗೊಳಿಸಿ-ರಾಹುಲ್
ನವದೆಹಲಿ, ಸೆ. ೨೨: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. ೩೩ರಷ್ಟು ಸ್ಥಾನಗಳನ್ನು ಒದಗಿಸುವ ಮಹಿಳಾ ಮೀಸಲು ಮಸೂದೆಗೆ ಸಂಸತ್ತಿನ ಉಭಯ ಸದನಗಳಲ್ಲಿ ಒಪ್ಪಿಗೆ ದೊರಕಿದ್ದು, ತಕ್ಷಣ ಜಾರಿಗೊಳಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಮೀಸಲು ಮಸೂದೆ ಅನುಷ್ಠಾನಗೊಳಿಸಲು ಬಿಜೆಪಿಗೆ ಇರುವ ಬದ್ಧತೆಯನ್ನು ಪ್ರಶ್ನಿಸಿದ್ದಾರೆ. ಜನಗಣತಿಯ ಆಧಾರದಲ್ಲಿ, ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಯನ್ನು ನಡೆಸಿದ ಬಳಿಕವಷ್ಟೇ ಈ ಮೀಸಲು ಸೌಲಭ್ಯ ಅನುಷ್ಠಾನಕ್ಕೆ ಬರಲಿದೆ. ಇದನ್ನೇ ಉಲ್ಲೇಖ ಮಾಡಿರುವ ಸರ್ಕಾರ ದುರ್ಬಲ ಕಾರಣ ನೀಡಿ ಮಹಿಳಾ ಮೀಸಲು ಮಸೂದೆ ಮುಂದೂಡಲು ಬಯಸುತ್ತಿದೆ ಎಂದು ಆರೋಪಿಸಿದ್ದಾರೆ.
೪ ವರ್ಷಗಳ ನಂತರ ಗೃಹ ಬಂಧನದಿAದ ಬಿಡುಗಡೆ
ಶ್ರೀನಗರ, ಸೆ. ೨೨: ಹುರಿಯತ್ ಕಾನ್ಫರೆನ್ಸ್ನ ಅಧ್ಯಕ್ಷ ಮಿರ್ವೈಜ್ ಉಮರ್ ಫಾರೂಕ್ ಅವರನ್ನು ನಾಲ್ಕು ವರ್ಷಗಳ ನಂತರ ಗೃಹ ಬಂಧನದಿAದ ಶುಕ್ರವಾರ ಮುಕ್ತಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಂವಿಧಾನದ ೩೭೦ನೇ ವಿಧಿಯಡಿ ಈ ಹಿಂದಿನ ಜಮ್ಮು-ಕಾಶ್ಮೀರ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆಯುವ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ೨೦೧೯ರಲ್ಲಿ ಅವರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಗೃಹ ಬಂಧನದಲ್ಲಿರಿಸಿದ್ದರು. ಗೃಹಬಂಧನದಿAದ ಮುಕ್ತರಾದ ನಂತರ ಐತಿಹಾಸಿಕ ಜಾಮಿಯಾ ಮಸೀದಿಯಲ್ಲಿ ನಡೆಯಲಿರುವ ಶುಕ್ರವಾರದ ಸಾಮೂಹಿಕ ಪ್ರಾರ್ಥನೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ನೊಹಾತಾ ಪ್ರದೇಶದ ಅಂಜುಮನ್ ಔಖಾಫ್ ಜಾಮಿಯಾ ಮಸೀದಿಯ ವ್ಯವಸ್ಥಾಪನಾ ಮಂಡಳಿಯ ಪ್ರಕಟಣೆ ತಿಳಿಸಿದೆ.
ತ.ನಾಡು ಸರ್ಕಾರ ಮತ್ತು ಉದಯನಿಧಿಗೆ ನೋಟೀಸ್
ನವದೆಹಲಿ, ಸೆ. ೨೨: ಸನಾತನ ಧರ್ಮದ ನಿರ್ಮೂಲನೆ ಕುರಿತು ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬAಧಿಸಿ ದಂತೆ ತಮಿಳುನಾಡಿನ ಸರ್ಕಾರ ಮತ್ತು ಸಚಿವ ಉದಯನಿಧಿ ಸ್ಟಾಲಿನ್‌ಗೆ ಸುಪ್ರೀಂ ಕೋರ್ಟ್ ಶುಕ್ರವಾರ ನೋಟೀಸ್ ಜಾರಿ ಮಾಡಿದೆ. ಸನಾತನ ಧರ್ಮದ ಕುರಿತು ಈ ಹಿಂದೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಮತ್ತು ಮಾಜಿ ಕೇಂದ್ರ ಸಚಿವ ಮತ್ತು ಡಿಎಂಕೆ ಮಾಜಿ ಸಂಸದ ಎ ರಾಜಾ ನೀಡಿದ್ದ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ದಾಖಲಾಗಿದ್ದ ಅರ್ಜಿಗೆ ಸಂಬAಧಿಸಿದAತೆ ಇಂದು ಸುಪ್ರೀಂ ಕೋರ್ಟ್ ನೋಟೀಸ್ ನೀಡಿದೆ.