ಮಡಿಕೇರಿ, ಸೆ. ೨೨: ಪಾಲಿಬೆಟ್ಟ ಕೃ.ಪ.ಸ.ಸಂಘವು ೨೦೨೨-೨೩ ಸಾಲಿನಲ್ಲಿ ರೂ. ೪೭.೩೪ ಲಕ್ಷ ನಿವ್ವಳ ಲಾಭಗಳಿಸಿದ್ದು ಸಂಘದ ವಾರ್ಷಿಕ ವ್ಯವಹಾರ ಒಟ್ಟು ೧೩೭.೧೭ ಕೋಟಿಗಳಾಗಿದ್ದು ಸಂಘದ ಒಟ್ಟು ದುಡಿಯುವ ಬಂಡವಾಳ ೩೪.೭೦ ಕೋಟಿಗಳಾಗಿರುತ್ತದೆ ಎಂದು ಅಧ್ಯಕ್ಷ ವಿ.ಎಸ್. ಶ್ಯಾಂ ಚಂದ್ರ ಮಾಹಿತಿ ನೀಡಿದರು. ಪಾಲಿಬೆಟ್ಟದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಂಘವು ೧೦೨೭ ಎ ತರಗತಿ ಸದಸ್ಯರನ್ನು ಹೊಂದಿದ್ದು ರೂ ೧.೨೨ ಕೋಟಿ ಪಾಲು ಬಂಡವಾಳ, ಕ್ಷೇಮ ನಿಧಿ ೨.೭೫ ಕೋಟಿಯನ್ನು ಹೊಂದಿರುತ್ತದೆ. ಸಂಘದಲ್ಲಿ ಒಟ್ಟು ೨೪.೫೦ ಕೋಟಿ ಠೇವಣಿ ಇದ್ದು ಕೆಡಿಸಿಸಿ ಬ್ಯಾಂಕ್‌ನಲ್ಲಿ ಪಾಲು ಹಣ ೩೦.೯೦ಲಕ್ಷ, ಕ್ಷೇಮ ನಿಧಿ ೩.೦೮ ಕೋಟಿ, ಇತರೆ ಸಂಘ ಸಂಸ್ಥೆಗಳಲ್ಲಿ ೧.೭೬ ಕೋಟಿ ತೊಡಗಿಸಿರುತ್ತೇವೆ. ಸಂಘದಿAದ ಕೃಷಿ ಮತ್ತು ಕೃಷಿಯೇತರ ಸಾಲವಾಗಿ ರೂ ೨೬.೪೧ ಕೋಟಿ ನೀಡಿದಾಗಿ ತಿಳಿಸಿದರು. ಸಂಘದಲ್ಲಿ ಎರಡು ಮಾರಾಟ ಶಾಖೆಗಳಿಂದ ಗೊಬ್ಬರ ಕ್ರಿಮಿನಾಶಕ ಪೆಯಿಂಟ್, ಸೀಮೆಂಟು, ಹಂಚು, ಕಬ್ಬಿಣ ಮತ್ತು ಪಡಿತರ ವಸ್ತುಗಳ ಮಾರಾಟದಿಂದ ಒಟ್ಟು ೨.೩೨ ಕೋಟಿಗಳ ವ್ಯವಹಾರ ನಡೆದಿರುವುದಾಗಿ ತಿಳಿಸಿದರು. ಚೆನ್ನಯ್ಯನಕೋಟೆಯಲ್ಲಿ ಸಂಘದ ಒಂದು ಶಾಖೆ ಇದ್ದು ಬ್ಯಾಂಕಿAಗ್, ಹಾಗೂ ಮಾರಾಟ ಶಾಖೆ ಹೊಂದಿರುತ್ತದೆ. ಸಂಘದ ಸದಸ್ಯರಿಗೆ ಶೇ.೨೦ರಷ್ಟು ಡಿವಿಡೆಂಟ್ ನೀಡುವ ಬಗ್ಗೆ ತಿಳಿಸಿದರು. ಸಭೆಯಲ್ಲಿ ಹಾಜರಿದ್ದ ನಿರ್ದೇಶಕರು ಸಂಘದ ಅಭಿವೃದ್ದಿ ಕಾರ್ಯಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಎ.ಎಸ್. ಶ್ಯಾಂಚAದ್ರ, ಉಪಾಧ್ಯಕ್ಷ ಕೊಲ್ಲೀರ ಧರ್ಮಜ, ನಿರ್ದೇಶಕರಾದ ಕುಟ್ಟಂಡ ಅಜಿತ್ ಕರುಂಬಯ್ಯ, ವಿ.ವಿ. ಡಾಲು, ಜೆ.ಕೆ. ಶುಭಾಷಿಣಿ, ಅನಿತ ಸುರೇಶ್, ಶೋಭಾ ಕುಟ್ಟಪ್ಪ, ಪಿ.ಸಿ. ತಮ್ಮಯ್ಯ, ಎಂ.ಬಿ. ಪವಿತ್ರ, ಸಿ.ಎಲ್. ಸೋಮೇಶ್, ಟಿ.ಕೆ. ಯಶೋಧರನ್, ಹೆಚ್.ಕೆ. ದಿನೇಶ್ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಎ. ಶಶಿಕಲಾ ಹಾಜರಿದ್ದರು.