ವೀರಾಜಪೇಟೆ, ಸೆ. ೨೦: ವೀರಾಜಪೇಟೆ ತಾಲೂಕು ಮಾಜಿ ಸೈನಿಕರ ಸಹಕಾರ ಸಂಘದ ಮೂಲಕ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ಇಂದು ಜರುಗಿತು. ವೀರಾಜಪೇಟೆಯಲ್ಲಿರುವ ಅಮರ್ ಜವಾನ್ ಯುದ್ಧ ಸ್ಮಾರಕಕ್ಕೆ ಪುಷ್ಪ ನಮನದ ಮೂಲಕ ಗೌರವ ನಮನ ಸಲ್ಲಿಸಲಾಯಿತು.
ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳೊಂದಿಗೆ ಸ್ಥಳೀಯ ಮಿಲಿಟರಿ ಕ್ಯಾಂಟೀನ್, ಕೊಡವ ಮುಸ್ಲಿಂ ಅಸೋಸಿಯೇಷನ್, ಕಾರು ಚಾಲಕರ ಮತ್ತು ಮಾಲೀಕರ ಸಂಘ, ಹೆಗ್ಗಡೆ ಸಮಾಜ, ಕರ್ನಾಟಕ ಸಂಘ, ವಕೀಲರ ಸಂಘ, ಬಿಲ್ಲವ ಸಮಾಜ, ಸ್ಕೌಟ್ ಮತ್ತು ಗೈಡ್ಸ್ ಸೇರಿದಂತೆ ವಿವಿಧ ಸಂಘ-ಸAಸ್ಥೆಗಳ ಪದಾಧಿಕಾರಿಗಳು ಗೌರವ ನಮನ ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು. ಜಿಲ್ಲಾ ಶಸಸ್ತç ಪೊಲೀಸ್ ಪಡೆಯ ಮೂಲಕ ಹುತಾತ್ಮ ಯೋಧರನ್ನು ಸ್ಮರಿಸಿ ಪುಷ್ಪ ನಮನ ಸಲ್ಲಿಸಲಾಯಿತು. ಪೊಲೀಸ್ ಬ್ಯಾಂಡ್ನೊAದಿಗೆ ಮೂರು ಸುತ್ತು ಕುಶಾಲತೋಪು ಹಾರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಮತ್ತು ಕೇರಳ ಉಪ ವಿಭಾಗದ ಕಮಾಂಡೆAಟ್ ಕರ್ನಲ್ ಮಾಚಿಮಂಡ ಡಿ. ಮುತ್ತಪ್ಪ ಅವರು ಪಾಲ್ಗೊಂಡಿದ್ದರು. ಇವರೊಂದಿಗೆ, ಇದೇ ಸಂದರ್ಭ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ತಾಲೂಕು ದಂಡಾಧಿಕಾರಿ ಹೆಚ್.ಎನ್ ರಾಮಚಂದ್ರ, ಡಿ.ವೈ.ಎಸ್.ಪಿ ಮೋಹನ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್, ಕೊಂಗAಡ ಬೋಜಮ್ಮ ಮುತ್ತಣ್ಣ, ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್, ಉಪಾಧ್ಯಕ್ಷ ಬಿ.ಎಸ್ ಚಂದ್ರಶೇಖರ್, ಕಾನೂನು ಸಲಹೆಗಾರ ಚೆಂದ್ರಿಮಾಡ ನಂಜಪ್ಪ, ಕಾರ್ಯದರ್ಶಿ ಪುಗ್ಗೆರ ನಂದಾ, ಖಜಾಂಚಿ ತೋರೆರ ಪೂವಯ್ಯ ಸೇರಿದಂತೆ ಸಂಘದ ನಿರ್ದೇಶಕರುಗಳು, ಕ್ಯಾಂಟೀನ್ ವ್ಯವಸ್ಥಾಪಕ ಡಾಲಿ, ಕೊಡವ ಮುಸ್ಲಿಂ ಅಸೋಷಿಯೇಷನ್, ಕಾರು ಚಾಲಕರ ಮತ್ತು ಮಾಲೀಕರ ಸಂಘ, ಹೆಗ್ಗಡೆ ಸಮಾಜ, ಕರ್ನಾಟಕ ಸಂಘ, ವಕೀಲರ ಸಂಘ, ಬಿಲ್ಲವ ಸಮಾಜ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದು ನಮನ ಸಲ್ಲಿಸಿದರು.
(ಮೊದಲ ಪುಟದಿಂದ)
ಕ್ಯಾAಟೀನ್ ಅಭಿವೃದ್ಧಿಗೆ ಸಹಕಾರ: ಕರ್ನಲ್ ಮುತ್ತಪ್ಪ
ಪುಷ್ಪ ನಮನದ ಬಳಿಕ ಸ್ಥಳೀಯ ಮಹಿಳಾ ಸಮಾಜದಲ್ಲಿ ಸಂಘದ ಮಹಾಸಭೆ ಜರುಗಿತು. ಈ ಸಂದರ್ಭ ಉಪಸ್ಥಿತರಿದ್ದ ಮುಖ್ಯ ಅತಿಥಿ ಕರ್ನಲ್ ಮಾಚಿಮಂಡ ಮುತ್ತಪ್ಪ ಅವರು ಪ್ರಸ್ತುತ ಎಲ್ಲವೂ ಸ್ಪರ್ಧಾತ್ಮಕವಾಗಿದೆ. ಸೇನೆ ಸೇರ್ಪಡೆಯ ಮಹತ್ವ, ಇದಕ್ಕೆ ಯುವ ಜನತೆ ಹೇಗೆ ತಯಾರಿ ನಡೆಸಿಕೊಳ್ಳಬೇಕು ಎಂಬ ಬಗ್ಗೆ ಸಲಹೆ ನೀಡಿದರು. ವೀರಾಜಪೇಟೆಯ ಮಿಲಿಟರಿ ಕ್ಯಾಂಟೀನ್ನ ಅಭಿವೃದ್ಧಿಗೆ ಕರ್ನಾಟಕ-ಕೇರಳ ಸಬ್ ಏರಿಯಾದ ಮೂಲಕ ಅಗತ್ಯ ಸಹಕಾರ ನೀಡುವುದಾಗಿಯೂ ಅವರು ಈ ಸಂದರ್ಭ ತಿಳಿಸಿದರು. ಸೇನೆ ಸೇರ್ಪಡೆಗೆ ಅಗತ್ಯ ತರಬೇತಿ ಪಡೆಯುವಂತೆಯೂ ಅವರು ಹೇಳಿದರು. ಈ ಸಂದರ್ಭ ಯುದ್ಧ ಸ್ಮಾರಕದ ಸ್ಥಾಪಕರಾದ ನಿವೃತ್ತ ಯೋಧ ದಿವಂಗತ ಕೊಂಗಾAಡ ಮುತ್ತಣ್ಣ, ಅವರ ಪರವಾಗಿ ಪತ್ನಿ ಬೋಜಮ್ಮ ಮುತ್ತಣ್ಣ ಅವರನ್ನು ಸನ್ಮಾನಿಸ ಗೌರವಿಸಲಾಯಿತು. ಸಂಘದ ಇನ್ನಿತರ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಯಿತು. ಸಂಘದ ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು.