ಕುಶಾಲನಗರ, ಸೆ. ೨೦: ಕೊಡಗಿನ ಕಲೆ, ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರೂ ಪಣತೊಡಬೇಕಾಗಿದೆ ಎಂದು ಪದ್ಮಶ್ರೀ ಪುರಸ್ಕೃತ ಉಮ್ಮತಾಟ್ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಕರೆ ನೀಡಿದರು.
ಅವರು ಕುಶಾಲನಗರ ಕೊಡವ ಸಮಾಜದಲ್ಲಿ ನಡೆದ ಕೈಲ್ ಪೊಳ್ದ್ ಸಂತೋಷಕೂಟ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ತಮ್ಮ ಕಾಲದಲ್ಲಿ ಯಾವುದೇ ಸೌಲಭ್ಯಗಳು ಇಲ್ಲದಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ತೆರಳಿ ಉಮ್ಮತಾಟ್ ಮತ್ತಿತರ ಕಲೆಗಳನ್ನು ಬೆರಳೆಣಿಕೆಯಷ್ಟು ಮಂದಿಗೆ ಕಲಿಸಿ ಅದನ್ನು ಬೆಳೆಸಿ ಉಳಿಸುವಲ್ಲಿ ಪ್ರಯತ್ನಿಸಲಾಗಿದೆ. ಈ ಶ್ರಮಕ್ಕೆ ಫಲವಾಗಿ ಭಾರತ ಸರ್ಕಾರದ ಶ್ರೇಷ್ಠ ಪ್ರಶಸ್ತಿ ಲಭಿಸಿದೆ. ಇದು ಜಿಲ್ಲೆಗೆ ಕೊಡವ ಸಮಾಜದ ಪುರಾತನ ಕಲೆಗೆ ಸಂದ ಗೌರವ ಎಂದರು. ಯುವಪೀಳಿಗೆ ಇಂತಹ ಕಲೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಬಗ್ಗೆ ಕಾಳಜಿ ಹೊಂದಬೇಕು ಎಂದರು.
ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷ ಮಂಡೇಪAಡ ಬೋಸ್ ಮೊಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ ರಾಣಿ ಮಾಚಯ್ಯ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಈ ಸಂದರ್ಭ ಮಾತನಾಡಿದ ಬೋಸ್ ಮೊಣ್ಣಪ್ಪ, ಭಾರತ ದೇಶದ ಅತ್ಯುನ್ನತ ಪ್ರಶಸ್ತಿಯನ್ನು ಗಳಿಸಿರುವ ರಾಣಿ ಮಾಚಯ್ಯ ಅವರ ಮೂಲಕ ಕೊಡವ ಸಮಾಜದ ಜಿಲ್ಲೆಯ ಕೀರ್ತಿ ಉನ್ನತಮಟ್ಟಕ್ಕೆ ಏರಿದೆ. ಇದು ಕುಶಾಲನಗರ ಕೊಡವ ಸಮಾಜಕ್ಕೂ ಪ್ರತಿಯೊಬ್ಬರಿಗೂ ಹೆಮ್ಮೆಯ ವಿಷಯವಾಗಿದೆ ಎಂದರು.
ಸAತೋಷ ಕೂಟ ಅಂಗವಾಗಿ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಗೆ ರಾಣಿ ಮಾಚಯ್ಯ ಅವರು ಚಾಲನೆ ನೀಡಿದರು. ಮುಂಡ್ಯೋಳAಡ ಸುಬ್ರಮಣಿ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಗಳಿಸಿದರು.
ಸಮಾಜದ ಪ್ರಮುಖರಾದ ಬಲ್ಲಾರಂಡ ಜಾಲಿ ಅವರು ಆಯುಧ ಪೂಜೆ ನೆರವೇರಿಸಿದರು. ಎಸ್ಎಸ್ಎಲ್ಸಿ ಮತ್ತಿತರ ತರಗತಿಗಳಲ್ಲಿ ಹೆಚ್ಚಿನ ಅಂಕ ಪಡೆದ ಸಮಾಜದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಉಪಾಧ್ಯಕ್ಷ ಪುಲಿಯಂಡ ಚಂಗಪ್ಪ, ಗೌರವ ಕಾರ್ಯದರ್ಶಿ ವಾಂಚೀರ ಮನು ನಂಜುAಡ, ಬಲ್ಯಾಟಂಡ ಚಿಂಗಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ಚೇಂದAಡ ಜೆಮ್ಸಿ ಪೊನ್ನಪ್ಪ ಸಮಾಜದ ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು ಪಾಲ್ಗೊಂಡಿದ್ದರು.
ನAದಿನೆರವAಡ ನಿತಿನ್ ಜಗದೀಶ್ ಪ್ರಾರ್ಥಿಸಿ, ಕಾರ್ಯದರ್ಶಿ ವಾಂಚೀರ ಮನು ಅವರು ಸ್ವಾಗತಿಸಿ, ಚೆಪ್ಪುಡಿರ ರತನ್ ಮತ್ತು ಕೊಕ್ಕಲೆರ ಧರಣಿ ಅವರು ನಿರೂಪಿಸಿದರು, ಪುಲಿಯಂಡ ಚಂಗಪ್ಪ ವಂದಿಸಿದರು.