ಮಡಿಕೇರಿ, ಸೆ. ೨೦: ವಿದ್ಯಾರ್ಥಿನಿಯರಿಗೆ ಶೇ. ೦.೫೦ ರಷ್ಟು ರಿಯಾಯಿತಿ ದರದಲ್ಲಿ ಶೈಕ್ಷಣಿಕ ಸಾಲ ಒದಗಿಸಲಾಗುವುದು. ಆ ಮೂಲಕ ಅವರು ತಮ್ಮ ಉನ್ನತ ಶಿಕ್ಷಣದ ಕನಸನ್ನು ಈಡೇರಿಸಿಕೊಳ್ಳಬಹುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಶೈಲೇಶ್ ಸುರೇಶ್ ನಾಯ್ಕ ಹೇಳಿದರು.

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಬ್ಯಾಂಕ್ ಸೌಲಭ್ಯಗಳ ಕುರಿತು ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಬ್ಯಾಂಕಿAಗ್ ಸಾಲ ಸೌಲಭ್ಯ, ವಿದೇಶಿ ವ್ಯಾಸಂಗಕ್ಕಾಗಿ ನಿಗದಿಪಡಿಸಿದ ಶೈಕ್ಷಣಿಕ ಸಾಲ, ಬ್ಯಾಂಕಿAಗ್ ಸ್ಪಾಮ್, ಸೈಬರ್ ಸೆಕ್ಯುರಿಟಿಯನ್ನು ಮೀರಿ ಬೆಳೆಯುತ್ತಿರುವ ಸೈಬರ್ ಅಪರಾಧ, ಬ್ಯಾಂಕಿAಗ ಫ್ರಾಡ್‌ಗಳ ಕುರಿತು ತಿಳಿಸಿದರು.

ಆರ್.ಡಿ., ಎಫ್.ಡಿ. ಯಂತಹ ಹಣ ಉಳಿತಾಯ ಕ್ರಮಗಳ ಕಡೆಗೆ ವಿದ್ಯಾರ್ಥಿಗಳು ಹೆಚ್ಚು ಗಮನ ಹರಿಸಬೇಕು. ಜೀವನ ನಿರ್ವಹಣೆಯ ಜೊತೆಯಲ್ಲಿ ಆರ್ಥಿಕ ಸಬಲೀಕರಣಕ್ಕೆ ಬ್ಯಾಂಕಿAಗ್ ವ್ಯವಸ್ಥೆ ಹೆಚ್ಚು ಪೂರಕವಾಗಿದೆ ಎಂದು ಹೇಳಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಎಸ್ ಬಿ ಐ ಅಧಿಕಾರಿಗಳಾದ ದೀಪ್ತಿ ಹಾಗೂ ಕೃತಿ ಬ್ಯಾಂಕಿಗ್ ಕ್ಷೇತ್ರದಲ್ಲಿನ ಔದ್ಯೋಗಿಕ ಅವಕಾಶಗಳು, ಐಬಿಪಿಎಸ್ ನಂತಹ ಬ್ಯಾಂಕಿAಗ್ ಪರೀಕ್ಷೆಗಳ ತಯಾರಿಯ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು. ಪ್ರಾಸ್ತಾವಿಕ ನುಡಿ ಗಳನ್ನಾಡಿ ಸ್ವಾಗತಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೇಜರ್ ಪ್ರೊ. ರಾಘವ ಬಿ. ಅವರು, ವಿದ್ಯಾರ್ಥಿಗಳು ಇಂತಹ ಕಾರ್ಯಾ ಗಾರದ ಪ್ರಯೋಜನ ಪಡೆದು ಕೊಳ್ಳಬೇಕು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಶೈಕ್ಷಣಿಕ ಸಾಲ ಸೌಲಭ್ಯಗಳನ್ನು ಪಡೆದು ವಿದೇಶದಲ್ಲಿ ವ್ಯಾಸಂಗ ಮಾಡಿ ನಮ್ಮ ದೇಶದ ಸಮಗ್ರ ಆರ್ಥಿಕತೆಗೆ ಕೊಡುಗೆಯನ್ನು ನೀಡಬೇಕು ಎಂದು ಕರೆ ನೀಡಿದರು.

ವಿದ್ಯಾರ್ಥಿ ಸಂಘದ ಸಂಚಾಲಕರು ಹಾಗೂ ಹಿಂದಿ ವಿಭಾಗದ ಮುಖ್ಯಸ್ಥ ತಳವಾರ್ ಮಾತನಾಡಿ, ದೇಶದ ಪ್ರಗತಿಗೆ ಪೂರಕ ವಾಗುವ ಆರ್ಥಿಕತೆಯನ್ನು ವಿದ್ಯಾರ್ಥಿ ದೆಸೆಯಿಂದಲೇ ರೂಪಿಸುವ ಕನಸು ಕಾಣಬೇಕು. ಹೊಸ ಬಗೆಯ ವೆಂಚರ್‌ಗಳನ್ನು ಪ್ರಾರಂಭಿಸಲು ಬ್ಯಾಂಕಿAಗ್ ವ್ಯವಸ್ಥೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

೧೯ ಕರ್ನಾಟಕ ಬೆಟಾಲಿಯನ್‌ನ ಸುಬೇದಾರ್ ಪ್ರವೀಣ್ ಕುಮಾರ್, ಬ್ಯಾಂಕ್ ಅಧಿಕಾರಿಗಳಾದ ಕೇಶವ ಗೌಡ, ಲಿಖಿತ್ ಹಾಗೂ ಕಾಲೇಜಿನ ಎನ್‌ಸಿಸಿ ಸಂಚಾಲಕ ವಿಶಾಲ್ ಉಪಸ್ಥಿತರಿದ್ದರು.