ಇಂದು ಸುಪ್ರೀಂ ಕೋರ್ಟ್ಗೆ ಅರ್ಜಿ: ಸಿಎಂ ಸಿದ್ದರಾಮಯ್ಯ

ನವದೆಹಲಿ-ಬೆಂಗಳೂರು, ಸೆ. ೨೦: ರಾಜ್ಯದಲ್ಲಿ ತೀವ್ರ ಬರಗಾಲ ನಡುವೆ ತಮಿಳು ನಾಡಿಗೆ ಪ್ರತಿದಿನ ೫ ಸಾವಿರ ಕ್ಯೂಸೆಕ್ ನೀರು ಹರಿಸಬೇಕು ಎಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಹಿನ್ನೆಲೆಯಲ್ಲಿ ಮುಂದಿನ ಕ್ರಮ ಕೈಗೊಳ್ಳುವ ಕುರಿತು ಇಂದು ರಾಜ್ಯದ ಸರ್ವಪಕ್ಷಗಳ ಸಂಸದರು, ಕೇಂದ್ರ ಸಚಿವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಭೆ ನಡೆಸಿದರು. ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ಕೈಕೊಟ್ಟು ಮಳೆ ಕೊರತೆಯಿಂದ ಜಲಾಶಯಗಳಲ್ಲಿ ನೀರಿಲ್ಲ. ೧೯೫ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದೇವೆ. ಕಳೆದ ೧೨೩ ವರ್ಷಗಳಲ್ಲಿ ಎಂದೂ ಇಷ್ಟು ಮಳೆ ಕೊರತೆ ಆಗಿರಲಿಲ್ಲ. ಕಾವೇರಿ ನೀರಿನ ಬಗ್ಗೆ ಹಿಂದೆ ಸುಪ್ರೀಂಕೋರ್ಟ್ ಆದೇಶ ಇದೆ. ತಾ. ೨೧ ರಂದು ಸುಪ್ರೀಂ ಕೋರ್ಟ್ಗೆ ನೀರು ಇಲ್ಲವೆಂದು ಅರ್ಜಿ ಹಾಕುತ್ತೇವೆ ಎಂದರು. ತಮಿಳುನಾಡಿಗೆ ನೀರು ಬಿಡಬಾರದು ಎಂಬ ದುರುದ್ದೇಶ ನಮಗಿಲ್ಲ, ಆದರೆ ಈ ಬಾರಿ ನಮಗೇ ನೀರಿಲ್ಲ. ಕನ್ನಡ ನಾಡು, ನುಡಿ, ಜಲ, ಭೂಮಿ, ಭಾಷೆ, ಸಂಸ್ಕೃತಿ ಕಾಪಾಡುವ ವಿಚಾರದಲ್ಲಿ ಪಕ್ಷ ರಾಜಕಾರಣ ಪಕ್ಕಕ್ಕಿಟ್ಟು ನಾವೆಲ್ಲ ಒಂದೇ ಧ್ವನಿಯಾಗಿ ಗಟ್ಟಿಯಾಗಿ ನಿಲ್ಲಬೇಕು ಎಂದರು.

ತಾ. ೨೯ ರವರೆಗೆ ಅಭಿನವ ಹಾಲಶ್ರೀ ಸಿಸಿಬಿ ಕಸ್ಟಡಿಗೆ

ಬೆಂಗಳೂರು, ಸೆ. ೨೦: ಗೋವಿಂದ ಬಾಬು ರಾಜು ಎಂಬ ಉದ್ಯಮಿಗೆ ಸುಮಾರು ೫ ಕೋಟಿ ರೂಪಾಯಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಪ್ರಕರಣದ ಮೂರನೇ ಆರೋಪಿ ಅಭಿನವ ಹಾಲಶ್ರೀಯನ್ನು ತಾ. ೨೯ ರವರೆಗೆ ೧೦ ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಿ ಬೆಂಗಳೂರಿನ ೧೯ನೇ ಎಸಿಎಂಎA ಕೋರ್ಟ್ ಆದೇಶ ನೀಡಿದೆ. ಬೆಂಗಳೂರಿನ ೧೯ನೇ ಎಸಿಎಂಎA ನ್ಯಾಯಾಲಯಕ್ಕೆ ಇಂದು ಹಾಲಶ್ರೀಯನ್ನು ಹಾಜರುಪಡಿಸಲಾಗಿತ್ತು. ಹಾಲಶ್ರೀ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಕಾಯ್ದಿರಿಸಿದೆ. ಒಡಿಶಾದ ಕಟಕ್‌ಗೆ ಹೋಗಿದ್ದ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲವೀರಪ್ಪ ಸ್ವಾಮೀಜಿಯನ್ನು ಅಲ್ಲಿನ ಸ್ಥಳೀಯ ಪೊಲೀಸರ ನೆರವಿನಿಂದ ನಿನ್ನೆ ಬಂಧಿಸಿದ್ದ ಸಿಸಿಬಿ ಪೊಲೀಸರು ಕೆಂಪೇಗೌಡ ಏರ್‌ಪೋರ್ಟ್ ಮೂಲಕ ನಗರಕ್ಕೆ ಕರೆತಂದಿದ್ದರು. ಬೆಂಗಳೂರಿನ ೧೯ನೇ ಎಸಿಎಂಎA ನ್ಯಾಯಾಲಯದ ಎದುರು ಇಂದು ಪೊಲೀಸರು ವಿಚಾರಣೆಗೆ ಸ್ವಾಮೀಜಿಯನ್ನು ಹಾಜರುಪಡಿಸಿದ್ದರು. ನಿನ್ನೆ ಸ್ವಾಮೀಜಿಯ ಬಂಧನವಾಗುತ್ತಿದ್ದAತೆ ಪ್ರಕರಣದ ಎ೧ ಆರೋಪಿ ಚೈತ್ರಾ ಕುಂದಾಪುರ ಸಿಸಿಬಿ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುವಾಗ ಖುಷಿಯಿಂದ ನಕ್ಕಿದ್ದರು. ಸ್ವಾಮೀಜಿ ಬಂಧನವಾಗಲಿ, ಸತ್ಯ ಹೊರಗೆ ಬರುತ್ತೆ, ದೊಡ್ಡದೊಡ್ಡವರ ಹೆಸರು ಹೊರಗೆ ಬರತ್ತೆ ಎಂದು ಚೈತ್ರಾ ಹೇಳಿದ್ದರು. ಎ೩ ಆರೋಪಿಯಾಗಿರುವ ಹಾಲಶ್ರೀ ಸ್ವಾಮೀಜಿ ಬಂಧನದಿAದ ಇನ್ನಷ್ಟು ಸ್ಫೋಟಕ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.

ಮರಳು ತರಲು ಹೋದ ನಾಲ್ವರು ಬಾಲಕಿಯರು ಸಾವು

ರಾಂಚಿ, ಸೆ. ೨೦: ಮಂಗಳವಾರ ಜಾರ್ಖಂಡ್‌ನ ಗಿರಿದಿಹ್‌ನಲ್ಲಿ ಸುಗ್ಗಿಯ ಹಬ್ಬದ ಕರ್ಮ ಪೂಜೆಗೆ ಮರಳು ತರಲೆಂದು ಹೊಂಡಕ್ಕೆ ತೆರಳಿದ್ದ ನಾಲ್ವರು ಬಾಲಕಿಯರು ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ದಾರುಣ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಗಿರಿದಿಹ್‌ನ ಜಿಲ್ಲಾ ಕೇಂದ್ರದಿAದ ಸುಮಾರು ೬ ಕಿ.ಮೀ. ದೂರದ ಪಚಂಬಾ ಪೊಲೀಸ್ ಠಾಣಾ ವ್ಯಾಪ್ತಿಯ ಪೆಥಿಯಾತಂಡ್ ಗ್ರಾಮದಲ್ಲಿ ಕರ್ಮ ಪೂಜೆ ಆಚರಣೆಗೂ ಮುನ್ನ ಸ್ನಾನ ಮಾಡುವಾಗ ಅವರು ಸಾವಿಗೀಡಾಗಿದ್ದಾರೆ. ಅವರೆಲ್ಲರೂ ೧೨ ರಿಂದ ೧೫ ವರ್ಷದೊಳಗಿನವರು. ಮೃತ ಬಾಲಕಿಯರನ್ನು ಮಮತಾ ಕುಮಾರಿ (೧೫), ದಿವ್ಯಾ ಕುಮಾರಿ (೧೨), ಸೃಷ್ಟಿ ಕುಮಾರಿ (೧೨) ಮತ್ತು ಸಂಧ್ಯಾ ಕುಮಾರಿ (೧೪) ಎಂದು ಗುರುತಿಸಲಾಗಿದೆ. ಹಂದಾಡಿ ಗ್ರಾಮದ ಬಾಲಕಿಯರ ಗುಂಪೊAದು ಕರ್ಮ ಪೂಜೆಗೆಂದು ಸಮೀಪದ ಪೇಠಿಯಾತಂದ್ ಗ್ರಾಮದ ಹೊಂಡದಿAದ ಮಣ್ಣು, ಮರಳು ತರಲು ಹೋಗಿದ್ದರು. ಮಣ್ಣು ಮತ್ತು ಮರಳನ್ನು ಸಂಗ್ರಹಿಸುವ ಮೊದಲು, ಐವರು ಹುಡುಗಿಯರು ಸ್ನಾನ ಮಾಡಲೆಂದು ಕೊಳಕ್ಕೆ ಇಳಿದಿದ್ದರು. ಈ ಸಮಯದಲ್ಲಿ ಬಾಲಕಿಯೊಬ್ಬಳು ಆಳವಾದ ನೀರಿಗೆ ಜಾರಿದ್ದಾರೆ. ಆಕೆಯನ್ನು ರಕ್ಷಿಸುವ ಸಂದರ್ಭದಲ್ಲಿ ಇತರ ನಾಲ್ವರು ಕೂಡ ನೀರಿನಲ್ಲಿ ಮುಳುಗಿದ್ದಾರೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ರಾಣಾ ಹೇಳಿದ್ದಾರೆ. ಆದಾಗ್ಯೂ, ಐದನೇ ಬಾಲಕಿಯನ್ನು ಗ್ರಾಮಸ್ಥರು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

೧೯೮೪ರ ಸಿಖ್ ವಿರೋಧಿ ದಂಗೆ ಪ್ರಕರಣ: ಸಜ್ಜನ್ ಕುಮಾರ್ ಖುಲಾಸೆ

ನವದೆಹಲಿ, ಸೆ. ೨೦: ೧೯೮೪ ರ ಸಿಖ್ ವಿರೋಧಿ ದಂಗೆ ವೇಳೆ ವ್ಯಕ್ತಿಯೊಬ್ಬನನ್ನು ಕೊಂದ ಪ್ರಕರಣಕ್ಕೆ ಸಂಬAಧಿಸಿದAತೆ ದೆಹಲಿ ನ್ಯಾಯಾಲಯ ಬುಧವಾರ ಮಾಜಿ ಕಾಂಗ್ರೆಸ್ ಸಂಸದ ಸಜ್ಜನ್ ಕುಮಾರ್ ಅವರನ್ನು ಖುಲಾಸೆಗೊಳಿಸಿದೆ. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶರಾದ ಗೀತಾಂಜಲಿ ಗೋಯೆಲ್ ಅವರು, ಇತರ ಇಬ್ಬರು ಆರೋಪಿಗಳಾದ ವೇದ್ ಪ್ರಕಾಶ್ ಪಿಯಾಲ್ ಮತ್ತು ಬ್ರಹ್ಮಾನಂದ್ ಗುಪ್ತಾ ಅವರನ್ನು ಸಹ ಖುಲಾಸೆಗೊಳಿಸಿದ್ದು, ಮಾಜಿ ಕಾಂಗ್ರೆಸ್ ನಾಯಕ ಸೇರಿದಂತೆ ಮೂವರ ವಿರುದ್ಧದ ಕೊಲೆ ಮತ್ತು ಗಲಭೆ ಪ್ರಕರಣವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ. ಸುಲ್ತಾನ್‌ಪುರಿಯಲ್ಲಿ ನಡೆದ ಘಟನೆಯಲ್ಲಿ ಸಿಖ್ ವ್ಯಕ್ತಿ ಸುರ್ಜಿತ್ ಸಿಂಗ್ ಮೃತಪಟ್ಟಿದ್ದರು. ಆರೋಪಿ ಸಜ್ಜನ್ ಕುಮಾರ್‌ಗೆ ಕೇವಲ ಅನುಮಾನದ ಮೇಲೆ ಶಿಕ್ಷೆ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಕೋರ್ಟ್ ಖುಲಾಸೆಗೊಳಿಸಿದೆ. ಅಕ್ಟೋಬರ್ ೩೧, ೧೯೮೪ ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅವರ ಸಿಖ್ ಅಂಗರಕ್ಷಕರು ಹತ್ಯೆ ಮಾಡಿದ ನಂತರ ಗಲಭೆಗಳು ಭುಗಿಲೆದ್ದವು. ಗಲಭೆಗೆ ಸಂಬAಧಿಸಿದ ಮತ್ತೊಂದು ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಸಜ್ಜನ್ ಕುಮಾರ್ ಅವರು ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾರೆ.

ಏಷ್ಯಾ ಕಪ್ ನಂತರ ವಿಶ್ವದ ನಂ. ೧ ಸ್ಥಾನಕ್ಕೇರಿದ ಮೊಹಮ್ಮದ್ ಸಿರಾಜ್

ದುಬೈ, ಸೆ. ೨೦: ಅಂರ‍್ರಾಷ್ಟಿçÃಯ ಕ್ರಿಕೆಟ್ ಮಂಡಳಿ (ಐಸಿಸಿ) ಬುಧವಾರ ಏಕದಿನ ಬೌಲಿಂಗ್ ರ‍್ಯಾಂಕಿAಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಏಷ್ಯಾಕಪ್ ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಮೊಹಮ್ಮದ್ ಸಿರಾಜ್ ಅವರು ವಿಶ್ವದ ನಂಬರ್ ೧ ಸ್ಥಾನಕ್ಕೇರಿದ್ದಾರೆ. ಏಷ್ಯಾಕಪ್ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ೭ ಓವರ್‌ಗಳಲ್ಲಿ ೨೧ ರನ್ ನೀಡಿ ೬ ವಿಕೆಟ್ ಕಬಳಿಸಿದ್ದ ಮೊಹಮ್ಮದ್ ಸಿರಾಜ್ ಅವರು ೬೯೪ ಅಂಕಗಳೊAದಿಗೆ ಐಸಿಸಿ ಬೌಲರ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ೮ ಸ್ಥಾನ ಮೇಲೇರಿದ್ದಾರೆ. ಅಂದರೆ ಕಳೆದ ಬಾರಿಯ ಶ್ರೇಯಾಂಕ ಪಟ್ಟಿಯಲ್ಲಿ ಮೊಹಮ್ಮದ್ ಸಿರಾಜ್ ೯ನೇ ಸ್ಥಾನದಲ್ಲಿದ್ದರು. ಇದೀಗ ಏಕಾಏಕಿ ಮೇಲೇರಿ ಅಗ್ರಸ್ಥಾನಕ್ಕೆ ತಲುಪಿರುವುದು ವಿಶೇಷ. ಈ ಹಿಂದೆ ಅಗ್ರಸ್ಥಾನದಲ್ಲಿದ್ದ ಆಸ್ಟೆçÃಲಿಯಾ ವೇಗಿ ಜೋಶ್ ಹ್ಯಾಝಲ್‌ವುಡ್ ಅವರು ಈ ಬಾರಿ ಒಟ್ಟು ೬೭೮ ಅಂಕಗಳೊAದಿಗೆ ದ್ವಿತೀಯ ಸ್ಥಾನಕ್ಕೆ ಕುಸಿದಿದ್ದಾರೆ.