ಮಡಿಕೇರಿ,ಸೆ.೨೦: ಇಲ್ಲಿನ ಕೆಎಸ್‌ಆರ್‌ಟಿಸಿ ಡಿಪೋ ಬಳಿಯ ಶಾಂತಿನಿಕೇತನ ಯುವಕ ಸಂಘದ ವತಿಯಿಂದ ಗಣೇಶೋತ್ಸವ ಪ್ರಯುಕ್ತ ಸಾರ್ವಜನಿಕರು ಹಾಗೂ ಮಕ್ಕಳಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಶಾಂತಿನಿಕೇತನದಲ್ಲಿ ೪೫ನೇ ವರ್ಷದ ಗಣೇಶೋತ್ಸವ ಆಚರಿಸಲಾಗುತ್ತಿದ್ದು, ಅ.೩ರವರೆಗೆ ಉತ್ಸವ ಮೂರ್ತಿಯನ್ನು ಪೂಜಿಸಲಾಗುತ್ತದೆ. ಪ್ರತಿ ವರ್ಷದಂತೆ ಈ ಬಾರಿಯೂ ಪ್ರತಿದಿನ ಸಂಜೆ ವಿವಿಧ ಪೂಜಾದಿ ಕಾರ್ಯಗಳೊಂದಿಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಆಟೋಟ ಸ್ಪರ್ಧೆ

ತಾ. ೨೪ರಂದು ಸಂಘದ ಆವರಣದಲ್ಲಿ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ ೯.೩೦ರಿಂದ ಸ್ಪರ್ಧೆ ಆರಂಭಗೊಳ್ಳಲಿದ್ದು, ಸಾರ್ವಜನಿಕ ಪುರುಷ, ಮಹಿಳೆ ಹಾಗೂ ಮಕ್ಕಳಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.

ರಂಗಪೂಜೆ

ತಾ.೩೦ರAದು ಸಂಜೆ ೭ಗಂಟೆಗೆ ಶ್ರೀ ವಿನಾಯಕನಿಗೆ ವಿಶೇಷ ರಂಗಪೂಜೆ ಏರ್ಪಡಿಸಲಾಗಿದೆ. ಉತ್ಸವ ಮೂರ್ತಿ ಪ್ರತಿಷ್ಠಾಪನಾ ಸ್ಥಳದಲ್ಲಿ ಪೂಜೆ ನಡೆಯಲಿದೆ. ಕ್ರೀಡಾಕೂಟದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊ.೯೯೦೦೩೭೦೩೮೦, ರಂಗ ಪೂಜೆಯ ಬಗ್ಗೆ ಮಾಹಿತಿಗಾಗಿ ಮೊ.೯೯೪೫೨೮೦೯೭೯ ಸಂಪರ್ಕಿಸಬಹುದಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.