ಕುಶಾಲನಗರ, ಸೆ. ೨೦: ಕುಶಾಲನಗರ ಗಣಪತಿ ದೇವಾಲಯಕ್ಕೆ ಕೂಡಿಗೆಯ ದಾನಿಗಳು ನಾಟ್ಯ ಗಣಪತಿಯ ಬೆಳ್ಳಿಯ ಕವಚ ಹಸ್ತಾಂತರಿಸಿದರು.

ಕೂಡಿಗೆ ನಿವಾಸಿ ಅನಿಲ್ ಮತ್ತು ಕುಟುಂಬದವರು, ಹೆಬ್ಬಾಲೆ ಗ್ರಾಮದ ನಿವಾಸಿ ಮಿಲಿಟರಿ ರಾಜಪ್ಪ ಮತ್ತು ಕೊಡಗು ಎಸ್ಟೇಟ್ ಡೆವಲಪರ್ಸ್ ಸಂಸ್ಥೆ ಮಾಲೀಕರು ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಆಡಳಿತ ಮಂಡಳಿಗೆ ಗಣಪತಿಯ ಬೆಳ್ಳಿಯ ಕವಚ ಹಸ್ತಾಂತರಿಸಿದರು.

ಈ ಸಂದರ್ಭ ದೇವಾಲಯ ಅಧ್ಯಕ್ಷ ವಿ.ಎನ್. ವಸಂತ್ ಕುಮಾರ್, ಪ್ರಧಾನ ಅರ್ಚಕರಾದ ನಾಗೇಂದ್ರ ಬಾಬು ಮತ್ತು ಆಡಳಿತ ಮಂಡಳಿ ಸದಸ್ಯರು ಇದ್ದರು.