ಮಡಿಕೇರಿ, ಸೆ. ೧೯: ನಗರದ ಕೊಡಗು ವಿದ್ಯಾಲಯ ಶಾಲೆಯ ೯ನೇ ತರಗತಿ ವಿದ್ಯಾರ್ಥಿ ಸಾರ್ಜೆಂಟ್ ಸುಹಿತ್ ಜಿ.ಎಸ್. ಸತತವಾಗಿ ೭ನೇ ಬಾರಿ ರಾಜ್ಯದ ೧೯ ಬ್ಯಾಚಿನ ಎನ್‌ಸಿಸಿ ಶಿಬಿರಗಳಲ್ಲಿ ಭಾಗವಹಿಸಿ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್‌ನ ೮ ಮಕ್ಕಳ ತಂಡದಲ್ಲಿ ಮೊದಲಿಗನಾಗಿದ್ದು, ಭಾರತ ಮಟ್ಟದ ಎನ್.ಸಿ.ಸಿ. ಸೈನಿಕ ಶಿಬಿರಕ್ಕೆ ಆಯ್ಕೆಯಾಗಿದ್ದಾನೆ.
ದೆಹಲಿಯಲ್ಲಿ ನಡೆಯುತ್ತಿರುವ ಭಾರತ ಮಟ್ಟದ ಸೈನಿಕ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾನೆ ಎಂದು ಕೊಡಗು ವಿದ್ಯಾಲಯದ ಪ್ರಾಂಶುಪಾಲರು ತಿಳಿಸಿದ್ದಾರೆ. ಸುಹಿತ್ ಅವರು ಭಾಗಮಂಡಲದ ಕಾವೇರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುರೇಂದ್ರ ಕುಮಾರ್ ಮತ್ತು ಗೀತಾ ದಂಪತಿ ಪುತ್ರ.