ಮಡಿಕೇರಿ, ಸೆ. ೧೭: ಕೊಡಗಿನಲ್ಲಿ ಹಾಕಿ ಕ್ರೀಡೆಗೆ ಸಂಬAಧಿಸಿದAತೆ ಪ್ರಸ್ತುತ ಅಧಿಕೃತ ಸಂಸ್ಥೆಯಾಗಿರುವ ಹಾಕಿ ಕೂರ್ಗ್ನ ನೂತನ ಅಧ್ಯಕ್ಷರಾಗಿ ಪಳಂಗAಡ ಲವಕುಮಾರ್ ಅವರು ಆಯ್ಕೆಯಾಗಿದ್ದಾರೆ.

ಹಾಕಿಕೂರ್ಗ್ನ ಮುಂದಿನ ಸಾಲಿನ ಆಡಳಿತ ಮಂಡಳಿಗೆ ನಿನ್ನೆ ಚುನಾವಣೆ ನಡೆದಿದ್ದು, ನೂತನ ಪದಾಧಿಕಾರಿಗಳು ನೇಮಕ ಗೊಂಡಿದ್ದಾರೆ. ವೀರಾಜಪೇಟೆ ಕೊಡವ ಸಮಾಜದ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಿನ್ನೆ ಚುನಾವಣೆ ನಿಗದಿಯಾಗಿತ್ತು.

ಉಪಾಧ್ಯಕ್ಷರಾಗಿ ಮಾಪಂಗಡ ಯಮುನಾ ಚಂಗಪ್ಪ, ಕಾರ್ಯದರ್ಶಿಯಾಗಿ ಅಮ್ಮಂಡಿರ ಚೇತನ್, ಸಹಕಾರ್ಯದರ್ಶಿ ಕೊಕ್ಕಂಡ ರೋಷನ್ ಹಾಗೂ ಖಜಾಂಚಿಯಾಗಿ ಗುಮ್ಮಟ್ಟಿರ ಮುತ್ತಣ್ಣ ಅವರುಗಳು ಚುನಾಯಿತರಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಚೆಪ್ಪುಡೀರ ಎಂ. ಅಪ್ಪಣ್ಣ, ಉಪಾಧ್ಯಕ್ಷ ಸ್ಥಾನಕ್ಕೆ ಚೆಪ್ಪುಡೀರ ಎಸ್. ಕಾರ್ಯಪ್ಪ, ಖಜಾಂಚಿ ಸ್ಥಾನಕ್ಕೆ ಐನಂಡ ಲಾಲಾ ಅಯ್ಯಣ್ಣ ಅವರುಗಳು ಸ್ಪರ್ಧಿಸಿದ್ದರು. ಕಾರ್ಯದರ್ಶಿ ಸ್ಥಾನಕ್ಕೆ ಅಮ್ಮಂಡಿರ ಚೇತನ್ ಹಾಗೂ ಕೊಕ್ಕಂಡ ರೋಷನ್ ಸ್ಪರ್ಧೆ ಮಾಡಿದ್ದು, ಇವರಿಬ್ಬರೂ ಸಮಾನ ಮತಗಳಿಸಿದ್ದರು. ಬಳಿಕ ಇವರಲ್ಲಿ ಚೇತನ್ ಕಾರ್ಯದರ್ಶಿ ಯಾಗಿ ಹಾಗೂ ರೋಷನ್ ಲಾಟರಿ ಮೂಲಕ ಆಯ್ಕೆಗೊಂಡರು. ಹಾಕಿ ಕೂರ್ಗ್ನ ಅಧ್ಯಕ್ಷರಾಗಿ ಈ ತನಕ ಮಾಜಿ ಅಂತರರಾಷ್ಟಿçÃಯ ಆಟಗಾರ ಪೈಕೇರ ಕಾಳಯ್ಯ ಅವರು ಕಾರ್ಯ ನಿರ್ವಹಿಸುತ್ತಿದ್ದರು.

ಸಂಸ್ಥೆಯ ನಿರ್ದೇಶಕರು ಹಾಗೂ ಇನ್ನಿತರ ಪದಾಧಿಕಾರಿಗಳ ಆಯ್ಕೆ ಮುಂದಿನ ಸಭೆಯಲ್ಲಿ ಅಂತಿಮವಾಗಲಿದೆ.