ಮಡಿಕೇರಿ, ಸೆ. ೧೭: ಕೊಡಗು ಜಿಲ್ಲೆಯ ಪಂಜೇರಿರ ರುಶಾಲಿ ಪೂವಮ್ಮ ಅವರು ಯಂಗ್ ಸಾಫ್ಟ್ವೇರ್ ಎಂಜಿನಿಯರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಡಾ. ಸರ್ ಎಂ. ವಿಶ್ವೇಶ್ವರಯ್ಯ ಅವರು ಸ್ಥಾಪಿಸಿದ ಶತಮಾನದ ಇತಿಹಾಸವಿರುವ ಬೆಂಗಳೂರಿನ ದಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ರಾಜ್ಯ ಘಟಕ ದಿಂದ ಇಂಜಿನಿಯರ್ಸ್ ಡೇ ಹಿನ್ನೆಲೆ ಯಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಿದೆ. ಸೆಪ್ಟಂಬರ್ ೧೫ರಂದು ಬೆಂಗಳೂರಿನ ದಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರುಶಾಲಿ ಪೂವಮ್ಮ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭ ಉನ್ನತ ಶಿಕ್ಷಣ ಸಚಿವ ಡಾ ಸುಧಾಕರ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ ಎಸ್ ಪೊನ್ನಣ್ಣ, ಶಾಸಕರಾದ ನಜೀರ್, ದಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿ ಯರ್ಸ್ ಅಧ್ಯಕ್ಷ ಲಕ್ಷö್ಮಣ್, ಕಾರ್ಯ ದರ್ಶಿ ರಂಗಾ ರೆಡ್ಡಿ ಮತ್ತಿತರರು ಉಪ ಸ್ಥಿತರಿದ್ದರು. ಪಂಜೇರಿರ ರುಶಾಲಿ ಪೂವಮ್ಮ ಅವರು ಬೆಂಗಳೂರಿನಲ್ಲಿ ಖಿಗಿ೯ ಕನ್ನಡ ಡಿಜಿಟಲ್‌ನ ಡೆಪ್ಯೂಟಿ ಎಡಿಟರ್ ಆಗಿರುವ ಜಗದೀಶ್ ಬೆಳ್ಯಪ್ಪ ಮತ್ತು ರೋಹಿಣಿ ಜಗದೀಶ್ ಅವರ ಪುತ್ರಿಯಾಗಿದ್ದಾರೆ.