ಮಡಿಕೇರಿ, ಸೆ. ೧೭: ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಅಕ್ಟೋಬರ್ ೧೬ ರಿಂದ ೨೪ ರವರೆಗೆ ನಗರದ ಗಾಂಧಿ ಮೈದಾನÀದ ಕಲಾಸಂಭ್ರಮ ವೇದಿಕೆಯಲ್ಲಿ ಆಯೋಜಿತ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರು, ಕಲಾತಂಡಗಳಿAದ ಅರ್ಜಿ ಆಹ್ವಾನಿಸಲಾಗಿದೆ.

ಕಲಾವಿದರು, ಕಲಾತಂಡಗಳು ಅರ್ಜಿ ನಮೂನೆಯನ್ನು mಚಿಜiಞeಡಿiಜಚಿsಚಿಡಿಚಿ.ಛಿom ವೆಬ್‌ಸೈಟ್‌ನಿಂದ ಪಡೆದುಕೊಂಡು ಸೆಪ್ಟೆಂಬರ್ ೨೬ ರೊಳಗಾಗಿ mಚಿಜiಞeಡಿiಜಚಿsಚಿಡಿಚಿ@gmಚಿiಟ.ಛಿom ಇಮೇಲ್‌ಗೆ ಮೇಲ್ ಮಾಡಬೇಕು ಅಥವಾ ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಕೇರಾಫ್ ಮಡಿಕೇರಿ ನಗರ ದಸರಾ ಸಮಿತಿ, ಮಡಿಕೇರಿ ನಗರಸಭಾ ಸಂಕೀರ್ಣ ಮಡಿಕೇರಿ - ೫೭೧೨೦೧ ಈ ಕಛೇರಿಗೆ ಸಲ್ಲಿಸಬೇಕಾಗಿದೆ. ನಿಗದಿತ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿ ಸಲ್ಲಿಸುವವರು ನಿಗದಿತ ಅರ್ಜಿ ನಮೂನೆಯಲ್ಲಿಯೇ ತಮ್ಮ ಮಾಹಿತಿ ನೀಡುವಂತೆ ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಪ್ರಕಟಣೆಯಲ್ಲಿ ಕೋರಿದ್ದಾರೆ.

ಹೆಚ್ಚಿನ ಮಾಹಿತಿಗೆ ತೆನ್ನಿರಾ ಮೈನಾ. ಸಂಚಾಲಕರು, ಸಾಂಸ್ಕೃತಿಕ ಸಮಿತಿ ೯೪೪೯೧೫೬೨೧೫, ಕುಡೆಕಲ್ ಸಂತೋಷ್ ೮೭೬೨೧೧೦೯೪೮ ಸಂಪರ್ಕಿಸುವAತೆ ಪ್ರಕಟಣೆ ತಿಳಿಸಿದೆ.