ಮಡಿಕೇರಿ, ಸೆ. ೧೭: ಮಡಿಕೇರಿ ಕೊಡವ ಸಮಾಜವು ಹಲವು ಅಭಿವೃದ್ಧಿ ಕಾರ್ಯಕ್ರಮವನ್ನು ಮಾಡುತ್ತಿದ್ದು ಸಮಾಜದ ಅಭಿವೃದ್ಧಿಯಾಗಬೇಕಾದರೆ ಎಲ್ಲಾರ ಸಹಕಾರದಿಂದ ಸಾಧ್ಯವೆಂದು ಮಡಿಕೇರಿ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸಮಾಜದ ಅಧ್ಯಕ್ಷರಾದ ಮುಂಡುವAಡ ಪಿ. ಮುತ್ತಪ್ಪ ಅವರು ಮಾತನಾಡಿದರು.

ಮಡಿಕೇರಿ ಕೊಡವ ಸಮಾಜದ ಕಟ್ಟಡವು ಹಳೆಯದಾಗಿದ್ದು ದಾನಿಗಳ ಸಹಕಾರದಿಂದ ಕಟ್ಟಡದ ನವೀಕರಣ ಕಾರ್ಯ ನಡೆಯುತ್ತಿದೆ. ಸಮಾಜದ ಜಾಗದ ದಾಖಲೆಗಳು, ಸಮಾಜದ ಅಧೀನದಲ್ಲಿರುವ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಹಲವು ಅಭಿವೃದ್ಧಿ ಕಾರ್ಯವನ್ನು ಮಾಡಲಾಗಿದ್ದು, ಮಾರ್ಚ್ ೩೧, ೨೦೨೪ ರಂದು ಜನರಲ್ ತಿಮ್ಮಯ್ಯನವರು ಜನ್ಮ ದಿನದಂದು ಜನರಲ್ ತಿಮ್ಮಯ್ಯ ಶಾಲೆಯ ಬೆಳ್ಳಿ ಮಹೋತ್ಸವವನ್ನು ಆಚರಿಸುವ ಬಗ್ಗೆ ತಿಳಿಸಿದರು.

ಸಮಾಜದ ಮಹಾಸಭೆಯ ನಡಾವಳಿಕೆ, ಆಡಳಿತ ಮಂಡಳಿಯ ವರದಿ, ಸಮಾಜದ ಹಾಗೂ ಜನರಲ್ ತಿಮ್ಮಯ್ಯ ಶಾಲೆಯ ಲೆಕ್ಕ ಪರಿಶೋಧನಾ ವರದಿ, ಅಂದಾಜು ಮುಂಗಡ ಪತ್ರದ ಒಪ್ಪಿಗೆ ಪಡೆಯಲಾಯಿತು. ಜನರಲ್ ತಿಮ್ಮಯ್ಯ ಪ್ರತಿಮೆಗೆ ಹಾನಿಗೊಳಗಾದ ಸಂದರ್ಭ ಕೊಡವ ಸಮಾಜ ನವೀಕರಣಗೊಳಿಸಲಿಕ್ಕೆ ಒತ್ತಾಯಿಸಿದ್ದು ಪುನರ್ ಪ್ರತಿಷ್ಠಾಪನೆಯ ಸಂದರ್ಭ ಜಿಲ್ಲಾಡಳಿತದೊಂದಿಗೆ ಮಡಿಕೇರಿ ಕೊಡವ ಸಮಾಜವು ಸಹಕರಿಸಲು ತೀರ್ಮಾನಿಸಲಾಯಿತು. ಸಮಾಜದ ಹೆಸರಿನಲ್ಲಿರುವ ಜಾಗವನ್ನು ಸರಿಪಡಿಸಿಕೊಳ್ಳುವುದು ಸಮಾಜದ ಜಾಗದಲ್ಲಿ ಪೆಟ್ರೋಲ್ ಬಂಕ್ ಸ್ಥಾಪನೆಗೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಮಂತ್ರಿಗಳಾದ ಮೇರಿಯಂಡ ಸಿ.ನಾಣಯ್ಯ, ಮಾಜಿ ಎಂಎಲ್‌ಸಿ ಶಾಂತೆಯAಡ ವೀಣಾ ಅಚ್ಚಯ್ಯ, ಪಿಡಬ್ಲೂö್ಯಡಿ ನಿವೃತ್ತ ಇಂಜಿನಿಯರ್ ಮೂವೇರ ಸುರೇಶ್, ಚೊಟ್ಟೆಯಂಡ ಸಂಜು ಕಾವೇರಪ್ಪ ಹಾಗೂ ಸಮಾಜದ ಸದಸ್ಯರುಗಳು ಹಾಜರಿದ್ದರು. ಮೊದಲಿಗೆ ಸಮಾಜದ ಕಛೇರಿಯಲ್ಲಿ ಕೈಲ್‌ಪೊಳ್ದ್ ಹಬ್ಬದ ಸಾಂಕೇತಿಕ ಆಯುಧ ಪೂಜೆ ಮಾಡಲಾಯಿತು. ಸಭಾ ಕಾರ್ಯಕ್ರಮದಲ್ಲಿ ನಿರ್ದೇಶಕಿ ಬೊಪ್ಪಂಡ ಸರಳಾ ಕರುಂಬಯ್ಯ ಪ್ರಾರ್ಥಿಸಿ, ಉಪಾಧ್ಯಕ್ಷರಾದ ನಂದಿನೆರವAಡ ಚೀಯಣ್ಣ ಸ್ವಾಗತಿಸಿ, ಜಂಟಿ ಕಾರ್ಯದರ್ಶಿ ನಂದಿನೆರವAಡ ದಿನೇಶ್ ವಂದಿಸಿ ಗೌರವ ಕಾರ್ಯದರ್ಶಿ ಕನ್ನಂಡ ಸಂಪತ್‌ಕುಮಾರ್ ನಿರೂಪಿಸಿದರು. ನಿರ್ದೇಶಕರಾದ ಶಾಂತೆಯAಡ ವಿಶಾಲ್ ಕಾರ್ಯಪ್ಪ, ಮಂಡೀರ ಸದಾ ಮುದ್ದಪ್ಪ, ಕೇಕಡ ವಿಜು ದೇವಯ್ಯ, ಕಾಳಚಂಡ ಅಪ್ಪಣ್ಣ, ಮೂವೇರ ಜಯರಾಮ್, ಪುತ್ತರಿರ ಕರುಣ್ ಕಾಳಯ್ಯ, ನಂದಿನೆರವAಡ ರವಿ ಬಸಪ್ಪ, ಕನ್ನಂಡ ಕವಿತಾ ಕಾವೇರಮ್ಮ ಹಾಗೂ ಕಾಂಡೇರ ಲಲ್ಲು ಕುಟ್ಟಪ್ಪ ವೇದಿಕೆಯಲ್ಲಿದ್ದರು.