ವೀರಾಜಪೇಟೆ, ಸೆ. ೧೭: ವೀರಾಜಪೇಟೆಯ ಶ್ರೀ ಕಾವೇರಿ ಗಣೇಶೋತ್ಸವ ಸಮಿತಿಯ ವತಿಯಿಂದ ತಾ. ೨೨ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತಾಲೂಕುಮಟ್ಟದ ‘ಭಗವದ್ಗೀತೆ ಶ್ಲೋಕ ಮತ್ತು ಭಾವಾರ್ಥ ಪಠಣ’ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಸ್ಪರ್ಧೆಗಳು ನಡೆಯುವ ವಿಭಾಗ

ಸಬ್ ಜೂನಿಯರ್ ವಿಭಾಗ: ೬ ರಿಂದ ೧೧ವರ್ಷ ವಯೋಮಿತಿ, ಜೂನಿಯರ್ ವಿಭಾಗ : ೧೨ ರಿಂದ ೧೬ವರ್ಷ ವಯೋಮಿತಿ, ಸೀನಿಯರ್ ವಿಭಾಗ : ೧೭ ರಿಂದ ೨೨ವರ್ಷ ವಯೋಮಿತಿ, ಸಾರ್ವಜನಿಕ ವಿಭಾಗ : ೨೩ ವರ್ಷ ಮೇಲ್ಪಟ್ಟವರು.

ಹೆಸರು ನೋಂದಾಯಿಸಲು ಕೊನೆಯ ದಿನಾಂಕ ತಾ. ೨೦. ವಿವರಗಳಿಗಾಗಿ: ಮೊ. ೯೦೦೮೬೧೩೭೨೯ ವಿಮಲಾ ದಶರಥ, ಮೊ. ೮೨೯೬೫೫೪೬೧೭ ಪ್ರೇಮಾಂಜಲಿ ಆಚಾರ್ಯ ಅವರನ್ನು ಸಂಪರ್ಕಿಸಬಹುದು.