ವರದಿ: ಪುತ್ತರಿರ ಕರುಣ್ ಕಾಳಯ್ಯ

ಚೆಟ್ಟಳ್ಳಿ, ಸೆ. ೧೭: ಮಳೆಗಾಲದ ನೀರಿನ ರಭಸಕ್ಕೆ ತ್ಯಾಜ್ಯಗಳು ಹಾಗೂ ಮರ ಮುಟ್ಟುಗಳ ರಾಶಿಯೇ ಹರಿದು ಬಂದು ಗರಗಂದೂರಿನ ಹೊಳೆಯ ಸೇತುವೆಯಲ್ಲಿ ಅಡ್ಡಲಾಗಿ ನಿಲ್ಲುವ ಮೂಲಕ ತ್ಯಾಜ್ಯಗಳ ರಾಶಿ ಕೊಳೆತು ಗರಗಂದೂರು ಹೊಳೆ ಕಲುಷಿತಗೊಳ್ಳುತ್ತಿರುವ ದೃಶ್ಯ ಕಂಡುಬರುತ್ತಿದೆ.

ಹಳೆ ಸೇತುವೆಯಿಂದಲೇ ತ್ಯಾಜ್ಯ ತಡೆ..: ಸುಂಟಿಕೊಪ್ಪ ಹಾಗೂ ಮಾದಾ ಪುರ ನಡುವಿನ ಮುಖ್ಯರಸ್ತೆಯ ಮಧ್ಯೆ ಹಲವು ತೊರೆಗಳು ಒಟ್ಟಾಗಿ ಸೇರಿ ಗರಗಂದೂರಿನಿAದ ಹರಿದು ಹಾರಂಗಿ ಸೇರುತ್ತದೆ. ಈ ಗರಗಂದೂರು(ಹರದೂರು) ಹೊಳೆಗೆ ಅಡ್ಡಲಾಗಿ ಹಳೆಯದಾದ ಸೇತುವೆ ಇದ್ದು, ಮಳೆಗಾಲದಲ್ಲಿ ಮುಳುಗಡೆಗೊಂಡು ಸಂಪರ್ಕಕ್ಕೆ ತೊಂದರೆಯಾ ಗುತ್ತಿದ್ದ ಹಿನ್ನೆಲೆ ಮಳೆಗಾಲ ಬಂತೆAದರೆ ನೀರಿನ ಮಟ್ಟ ಏರಿಕೆ ಯಾಗದಂತೆ ಎತ್ತರದಲ್ಲಿ ನೂತನ ಸೇತುವೆ ನಿರ್ಮಾಣ ಮಾಡಲಾಗಿದೆ. ಕೆಳಗಿರುವ ಹಳೆಸೇತುವೆ ಹಾಗೇ ಉಳಿದಿದ್ದು, ಮಳೆಗಾಲದಲ್ಲಿ ಮಾದಾಪುರ, ಸೂರ್ಲಬ್ಬಿ, ಹಮ್ಮಿಯಾಲ, ಮುಕ್ಕೋಡ್ಲು ಗ್ರಾಮಗಳಿಂದ ನೀರಿನಲ್ಲಿ ಹರಿದು

(ಮೊದಲ ಪುಟದಿಂದ)

ಬರುವ ಬೃಹತ್ ಗಾತ್ರದ ಒಣಗಿದ ಲೋಡುಗಟ್ಟಲೆ ಮರ ಮುಟ್ಟುಗಳು ಗರಗಂದೂರು ಸೇತುವೆಯಲ್ಲಿ ದಾಟಲಾಗದೆ ಅಡ್ಡಲಾಗಿ ನಿಲ್ಲುತ್ತಿವೆ. ಮೇಲಿಂದಲೂ ಹರಿದು ಬರುವ ಪ್ಲಾಸ್ಟಿಕ್ ಇತರೆ ತ್ಯಾಜ್ಯಗಳು ಸೇತುವೆ ಕೆಳಗೆ ರಾಶಿಯಾಗುತ್ತಿವೆ.

ಕಳೆದ ಬಾರಿಯ ಭೂಕುಸಿತ ಹಾಗೂ ಜಲಪ್ರಳಯದ ಸಮಯ ದಲ್ಲಿ ಹಲವು ಲೋಡುಗಟ್ಟಲೆ ಮರಗಳು ಹರಿದು ಬಂದು ಸೇತುವೆಯ ಕೆಳಗೆ ಅಡ್ಡಲಾಗಿ ನಿಂತು ನೀರಿನ ಹರಿವಿಗೂ ತಡೆಯಾಗಿತ್ತು. ಪ್ರತೀವರ್ಷ ಮಳೆಗಾಲದಲ್ಲಿ ಹೊಳೆಯಲ್ಲಿ ತೇಲುತ್ತಾ ಬರುತ್ತಿದ್ದು, ನೀರಿನ ಮಟ್ಟ ಕಡಿಮೆಯಾದಂತೆ ಸೇತುವೆ ಕೆಳಗೆ ನಿಂತ ಮರಗಳನ್ನೆಲ್ಲ ಸ್ಥಳೀಯರು ತೆಪ್ಪದಿಂದ ಎಳೆದು ತಂದು ದಡದಲ್ಲಿಟ್ಟು ಒಣಗಿದ ನಂತರ ಕತ್ತರಿಸಿ ಮನೆಗಳಿಗೆ ಹೊತ್ತೊಯ್ದು ಉರುವಲಾಗಿ ಬಳಸಲಾಗುತ್ತಿತ್ತು. ಈ ಬಾರಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಹೊಳೆಯೊಳಗಿನ ಮರಗ ಳನ್ನು ಯಾರೂ ಕದ್ದೊಯ್ಯದಂತೆ ಕಣ್ಗಾವಲು ಇಡಲಾಗಿದ್ದು. ಮರ ತೆಗೆದ ವರ ಮೇಲೆ ಕಾನೂನು ಕ್ರಮಕೈ ಗೊಳ್ಳುವ ಬಗ್ಗೆ ಎಚ್ಚರಿಸಲಾಗಿದೆ.

ಹೊಳೆಯೊಳಗೆ ಕಟ್ಟಿ ಹಾಕಿದ ಮರ ಮುಟ್ಟುಗಳು..: ಹೊಳೆಯಲ್ಲಿ ತಡೆಯಾಗಿ ನಿಂತ ಮರಮುಟ್ಟುಗಳು ಹರಿದು ಹೋಗದಂತೆ ಈಗಾಗಲೇ ಕೆಲವರು ಮರದ ದಿಮ್ಮಿಗಳನ್ನು ಹಳೆ ಸೇತುವೆಗೆ ಪ್ಲಾಸ್ಟಿಕ್ ಹಗ್ಗದಿಂದ ಕಟ್ಟಿಡಲಾಗಿದೆ. ನೀರಿನಮಟ್ಟ ಕಡಿಮೆಯಾದಂತೆ ಇಲಾಖೆಯ ಕಣ್ಣುತಪ್ಪಿಸಿ ಮರ ಮುಟ್ಟುಗಳನ್ನು ಸಾಗಿಸಲಾಗುತ್ತದೆ.

ಪರಿಸರಕ್ಕೆ ಹಾನಿಯಾಗುವ ತ್ಯಾಜ್ಯಗಳ ವಿಲೇವಾರಿಗೆ ಸರಕಾರ ನೂರೆಂಟು ಕ್ರಮಕೈಗೊಂಡರೂ ಗರಗಂದೂರು ಗ್ರಾಮ ಪಂಚಾ ಯಿತಿಗೆ ಒಳಪಡುವ ಗರಗಂದೂರು ಸೇತುವೆಯ ಕೆಳಗೆ ಸಂಗ್ರಹವಾಗುವ ಮಲಿನ ತ್ಯಾಜ್ಯಗಳ ವಿಲೇವಾರಿ ಜೊತೆಗೆ ಪ್ರತಿವರ್ಷ ಮಳೆಗಾಲದಲ್ಲಿ ಹೊಳೆಯಲ್ಲಿ ಬಂದು ಸೇತುವೆ ಕೆಳಗೆ ತಡೆಒಡ್ಡುವ ಮರಗಳನ್ನು ತೆರವು ಗೊಳಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಸಂಬAಧಪಟ್ಟ ಇಲಾಖೆಗೆ ಆದೇಶಿಸಬೇಕಿದೆ.