ಕುಶಾಲನಗರ, ಸೆ. ೧೭: ಓಣಂ ಐಶ್ವರ್ಯ, ಸಮೃದ್ಧಿಯ ಸಂಕೇತ ವಾಗಿದ್ದು, ಹೊಸ ವರ್ಷದ ಭರವಸೆ ಯನ್ನು ಮೂಡಿಸುವ ಹಬ್ಬವಾಗಿದೆ ಎಂದು ಮಾಜಿ ಸಚಿವರಾದ ಎಂ ಪಿ ಅಪ್ಪಚ್ಚು ರಂಜನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ಕೇರಳ ಸಮಾಜದ ಆಶ್ರಯದಲ್ಲಿ ನಡೆದ ೨೩ನೇ ಓಣಂ ಹಬ್ಬ ಆಚರಣೆ ಕಾರ್ಯಕ್ರಮ ಉದ್ಘಾ ಟಿಸಿ ಅವರು ಮಾತನಾಡಿದರು. ಸಂಸ್ಕೃತಿ ಆಚರಣೆ ಉಳಿಸಿ ಬೆಳೆಸಲು ಹಬ್ಬಗಳು ಸಹಕಾರಿಯಾಗಲಿವೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂ ಡಿದ್ದ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ವಿ.ಪಿ. ಶಶಿಧರ್ ಮತ್ತಿತರರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಿದ್ದಾಪುರ ಎಸ್‌ಎನ್‌ಡಿಪಿ ಮಾಜಿ ಅಧ್ಯಕ್ಷರಾದ ಕೆ.ಎನ್. ವಾಸು, ನಿವೃತ್ತ ಅಧಿಕಾರಿ ಟಿ.ಎನ್. ಲಕ್ಷö್ಮಣನ್, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರುಕ್ಮಿಣಿ ಮತ್ತು ಕುಶಾಲನಗರ ಪುರಸಭೆಯ ಐದು ಮಂದಿ ಪೌರಕಾರ್ಮಿಕರನ್ನು ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕುಶಾಲನಗರ ಕೇರಳ ಸಮಾಜ ಅಧ್ಯಕ್ಷರಾದ ಕೆ.ಆರ್. ಶಿವಾನಂದನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭ ದಲ್ಲಿ ಕುಶಾಲನಗರ ಪುರಸಭೆ ಸದಸ್ಯರಾದ ಜಯಲಕ್ಷಿö್ಮ ಚಂದ್ರನ್, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪಿ.ಎಂ. ರುಕ್ಮಿಣಿ, ಏಳನೇ ಹೊಸಕೋಟೆಯ ಫಾ. ಸುನಿಲ್, ಮದರಸ ಅಧ್ಯಕ್ಷರಾದ ಎಂ.ಎA.ಎಸ್ ಹುಸೇನ್ ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ಕುಶಾಲನಗರದ ಸಮಾಜದ ಕಚೇರಿಯಿಂದ ಸಭಾಂಗಣದವರೆಗೆ ಸಮುದಾಯದ ಸದಸ್ಯರು ಮಾವೆಲಿ ವೇಷಧಾರಿಯೊಂದಿಗೆ ಮೆರವಣಿಗೆ ಯಲ್ಲಿ ಚೆಂಡೆ, ವಾದ್ಯಗಳ ಮೂಲಕ ಆಗಮಿಸಿದರು.

ಸಮಾಜದ ಸದಸ್ಯರ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ಸಮಾಜದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಮಾಜದ ಉಪಾಧ್ಯಕ್ಷರಾದ ಕೆ.ಜೆ. ರಾಬಿನ್, ಕೆ. ಬಾಬು, ಪಿ.ಸಿ. ಆನಂದ, ಎನ್.ಎ. ಸುಶೀಲಾ, ಎಂ.ಎಸ್. ಶಾಂತಿ, ಅಜಿತ ಧನರಾಜ್, ಎಂ.ಜಿ. ಪ್ರಕಾಶ್ ಸಲಹಾ ಸಮಿತಿಯ ಪಿ. ರವೀಂದ್ರನ್, ವಿ. ಕೃಷ್ಣ ಮತ್ತಿತರರು ಇದ್ದರು.

ಸಮಾಜದ ಕಾರ್ಯದರ್ಶಿ ಕೆ.ಜೆ. ರಾಬಿನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿರ್ದೇಶಕರಾದ ಕೆ. ರಾಜನ್ ಸ್ವಾಗತಿಸಿ ವಂದಿಸಿದರು.