ಕೊಲಂಬೊ, ಸೆ. ೧೭: ಏಷ್ಯಾಕಪ್ ೨೦೨೩ರ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿ ಭಾರತ ೮ನೇ ಬಾರಿಗೆ ಏಷ್ಯಾಕಪ್ ಮುಡಿಗೇರಿಸಿಕೊಂಡಿದೆ.

ಕೊಲAಬೊದ ಆರ್. ಪ್ರೇಮ ದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಬ್ಯಾಟ್ಸ್ಮೆನ್ ಗಳನ್ನು ಭಾರತೀಯ ಬೌಲರ್‌ಗಳು ಮಾರಕವಾಗಿ ಕಾಡಿದರು. ಹೀಗಾಗಿ ಶ್ರೀಲಂಕಾ ೫೦ ರನ್ ಗಳಿಗೆ ಆಲೌಟ್ ಆಗಿ ಭಾರತಕ್ಕೆ ೫೧ ರನ್‌ಗಳ ಗುರಿ ನೀಡಿತ್ತು. ಈ ಸುಲಭ ಮೊತ್ತದ ಗುರಿ ಬೆನ್ನಟ್ಟಿದ ಭಾರತ ೬.೧ ಓವರ್‌ಗೆ ವಿಕೆಟ್ ನಷ್ಟವಿಲ್ಲದೆ ೫೧ ರನ್ ಬಾರಿಸುವ ಮೂಲಕ ಗೆಲುವಿನ ನಗೆ ಬೀರಿತು.

ಭಾರತ ಪರ ಇಶಾನ್ ಕಿಶನ್ ಅಜೇಯ ೨೩ ಮತ್ತು ಶುಭ್ಮನ್ ಗಿಲ್ ಅಜೇಯ ೨೭ ರನ್ ಬಾರಿಸಿದರು.

ಮೊದಲ ಓವರ್‌ನ ಮೂರನೇ ಎಸೆತದಲ್ಲಿ ಕುಸಲ್ ಪೆರೆರಾ ಅವರನ್ನು ಔಟ್ ಮಾಡುವ ಮೂಲಕ ಜಸ್ಪಿçÃತ್ ಬುಮ್ರಾ ಶ್ರೀಲಂಕಾಕ್ಕೆ ದೊಡ್ಡ ಹೊಡೆತ ನೀಡಿದರು. ಇದಾದ ನಂತರ, ಸಿರಾಜ್ ಅವರು ತಮ್ಮ ಮೊದಲ ಓವರ್‌ನಲ್ಲಿ ಮೇಡನ್ ಪಡೆದರು. ನಂತರದ ಓವರ್‌ನಲ್ಲಿ ಅವರು ನಾಲ್ಕು ವಿಕೆಟ್‌ಗಳನ್ನು ಪಡೆಯುವ ಮೂಲಕ ಶ್ರೀಲಂಕಾ ತಂಡವನ್ನು ಅಲ್ಪಮೊತ್ತಕ್ಕೆ ಕುಸಿಯುವಂತೆ ಮಾಡಿದರು.

ಮೊಹಮ್ಮದ್ ಸಿರಾಜ್ ಅವರ ಎರಡನೇ ಓವರ್‌ನ ಮೊದಲ ಎಸೆತ ದಲ್ಲಿ ರವೀಂದ್ರ ಜಡೇಜಾಗೆ ಪಾಥುಮ್ ನಿಸ್ಸಾಂಕ ಕ್ಯಾಚ್ ನೀಡಿದರು. ಇದಾದ ಬಳಿಕ ಮೂರನೇ ಎಸೆತದಲ್ಲಿ ಸದಿರಾ ಔಟಾದರು. ಅಸಲಂಕಾ ನಾಲ್ಕನೇ ಎಸೆತದಲ್ಲಿ ಪೆವಿಲಿಯನ್‌ಗೆ ಮರಳಿ ದರು. ಕೊನೆಯ ಎಸೆತದಲ್ಲಿ ಧನಂಜಯ್‌ಗೆ ಪೆವಿಲಿಯನ್ ಹಾದಿ ತೋರಿಸಿ ನಾಲ್ಕನೇ ವಿಕೆಟ್ ಪಡೆದರು.

ಶ್ರೀಲಂಕಾ ಪರ ಬ್ಯಾಟಿಂಗ್‌ನಲ್ಲಿ ಕುಶಾಲ್ ಮೆಂಡಿಸ್ ೧೭ ಮತ್ತು ದುಶನ್ ಹೇಮಂತ್ ೧೩ ರನ್ ಸಿಡಿಸಿದ್ದು ಬಿಟ್ಟರೆ ಮತ್ಯಾರು ಕೂಡ ಎರಡಂಕಿ ದಾಟಲಿಲ್ಲ. ಭಾರತ ಪರ ಬೌಲಿಂಗ್ ನಲ್ಲಿ ಮೊಹಮ್ಮದ್ ಸಿರಾಜ್ ೬, ಹಾರ್ದಿಕ್ ಪಾಂಡ್ಯ ೩ ಮತ್ತು ಜಸ್ ಪ್ರೀತ್ ಬುಮ್ರಾ ೧ ವಿಕೆಟ್ ಪಡೆದಿದ್ದಾರೆ.

ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನ ರಾದ ಸಿರಾಜ್ ಅವರು ತಮಗೆ ದೊರೆತ ನಗದು ಬಹುಮಾನ ೫,೦೦೦ ಡಾಲರ್ ಅನ್ನು, ಸರಣಿಯಲ್ಲಿ ಬಹು ತೇಕ ಎಲ್ಲ ಪಂದ್ಯಗಳಲ್ಲಿ ಮಳೆ ಸುರಿ ದಾಗ ಮೈದಾನಕ್ಕೆ ಯಾವುದೇ ರೀತಿ ಹಾನಿಯಾಗದಂತೆ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಅಲ್ಲಿನ ಮೈದಾನ ನಿರ್ವ ಹಣಾ ಸಿಬ್ಬಂದಿಗಳಿಗೆ ನೀಡಿದರು.