* ಪ್ರೆಸ್ ಕ್ಲಬ್ ಬೆಳ್ಳಿಹಬ್ಬ ಸಮಾರೋಪ * ಕ್ಷೇಮನಿಧಿ, ಸಹಕಾರ ಸಂಘಕ್ಕೆ ಚಾಲನೆ

ಮಡಿಕೇರಿ, ಸೆ. ೧೭: ಕೊಡಗಿನ ಪತ್ರಕರ್ತರ ಬಹುಕಾಲದ ಬೇಡಿಕೆಯಾಗಿರುವ ನಿವೇಶನ ಒದಗಿಸಲು ಪೂರಕ ಸಹಕಾರ ನೀಡುವುದಾಗಿ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭರವಸೆ ನೀಡಿದರು.

ಮಡಿಕೇರಿಯ ಕಾವೇರಿ ಹಾಲ್‌ನಲ್ಲಿ ಶನಿವಾರ ರಾತ್ರಿ ಆಯೋಜಿಸಲಾಗಿದ್ದ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜಕಾರಣಿಗಳು, ಪತ್ರಕರ್ತರನ್ನು ಪತ್ರಿಕಾಗೋಷ್ಠಿ, ಪ್ರಚಾರಕ್ಕೆ ಬಳಸಿಕೊಳ್ಳುತ್ತಾರೆ. ಆದರೆ, ಅವರ ಶ್ರೇಯೋಭಿವೃದ್ಧಿಗೆ ಚಿಂತನೆ ಮಾಡುವುದಿಲ್ಲ. ಪತ್ರಕರ್ತರ ಮೇಲೆ ಜವಾಬ್ದಾರಿ ಹಾಗೂ ಒತ್ತಡವಿದೆ. ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ‍್ಯ ದ ಹಿಂದೆ ಮಾಧ್ಯಮದ ಅಭಿವ್ಯಕ್ತಿ ಸ್ವಾತಂತ್ರö್ಯ ಅಡಗಿದೆ. ಪತ್ರಿಕಾ ಸ್ವಾತಂತ್ರö್ಯದಿAದ ಆಡಳಿತದಲ್ಲಾಗುವ ಲೋಪದೋಷಗಳನ್ನು ಪತ್ತೆ ಮಾಡಿ ಸರಿದಾರಿಗೆ ಕೊಂಡೊಯ್ಯುವ ಕೆಲಸ ಪತ್ರಕರ್ತರು ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜಕಾರಣಿಗಳು ಹಾಗೂ ಪತ್ರಕರ್ತರು ಒತ್ತಡದಲ್ಲಿ ಕೆಲಸ ಮಾಡುತ್ತ ವೈಯಕ್ತಿಕ ಜೀವನ ಕಳೆದುಕೊಳ್ಳುತ್ತಿದ್ದೇವೆ. ಹಲವು ಪತ್ರಕರ್ತರು ಇಂದಿಗೂ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಜಿಲ್ಲಾ ಪತ್ರಕರ್ತರು ಹಲವು ವರ್ಷಗಳಿಂದ ನಿವೇಶನಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಆದರೆ, ಜಾಗದ ಕೊರತೆ, ಆಡಳಿತಾತ್ಮಕ ಸಮಸ್ಯೆಯಿಂದ ಇದು ಸಾಧ್ಯವಾಗುತ್ತಿಲ್ಲ. ಪತ್ರಕರ್ತರ ಸಹಕಾರಿ ಸಂಘದ ಮೂಲಕ ಖಾಸಗಿ ಅಥವಾ ಸರಕಾರಿ ಜಾಗವನ್ನು ಖರೀದಿಗೆ ಮುಂದಾಗಬೇಕೆAದು ಸಲಹೆ ನೀಡಿದರು. ಇದಕ್ಕೆ ತಾನು ಪೂರಕ ಸಹಕಾರ ನೀಡುತ್ತೇನೆ ಎಂದು ಎ.ಎಸ್. ಪೊನ್ನಣ್ಣ ಭರವಸೆ ನೀಡಿದರು.

ಜಿಲ್ಲೆಯ ಪತ್ರಕರ್ತರಿಗಾಗಿ ರೂ. ೧ ಕೋಟಿ ಕ್ಷೇಮಾನಿಧಿ ಯೋಜನೆಯನ್ನು ಅನಾವರಣ ಮಾಡಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಮತ್ತಿಕೆರೆ ಜಯರಾಂ, ಮಂಡ್ಯ ಜಿಲ್ಲೆಯಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಕ್ಷೇಮಾನಿಧಿ ಸ್ಥಾಪನೆ ಮಾಡಲಾಯಿತು. ಕೊಡಗಿನಲ್ಲಿ ನಿಧಿ ಸಂಗ್ರಹಕ್ಕೆ ಎಲ್ಲರ ಸಹಕಾರ ದೊರೆಯಲಿದೆ. ಇದರಿಂದ ನೊಂದ ಪತ್ರಕರ್ತರಿಗೆ ಸಹಕಾರಿಯಾಗಲಿದೆ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಜಿ ವಾಸುದೇವ್ ಹೊಳ್ಳ ಸ್ಮರಣ ಸಂಚಿಕೆ ‘ಪಿಂಜರಿ'ಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಕ್ಲಬ್ ಚಟುವಟಿಕೆಯನ್ನು ಶ್ಲಾಘಿಸಿ

(ಮೊದಲ ಪುಟದಿಂದ) ರೂಪಿಸಿರುವ ಯೋಜನೆಗಳು ಯಶಸ್ವಿಯಾಗಲಿ ಎಂದು ಹಾರೈಸಿದರು.

ಕೊಡಗು ಪ್ರೆಸ್ ಕ್ಲಬ್ ಸೌಹಾರ್ದ ಸಹಕಾರಿ ನಿಯಮಿತದ ಲಾಂಛನವನ್ನು ಶಕ್ತಿ ದಿನಪತ್ರಿಕೆ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಬಿಡುಗಡೆಗೊಳಿಸಿದರು.

ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘ- ಸಂಸ್ಥೆಗಳು ವರ್ಷ ಕಳೆಯುವುದು ಸಹಜ. ಆದರೆ, ಸಂಘಟನೆಗಳು ಮಾಡಿದ ಕೆಲಸಗಳಿಂದ ಮಾತ್ರ ಅದಕ್ಕೆ ಗೌರವ ಬರುತ್ತದೆ. ಬಿ.ಜಿ. ಅನಂತಶಯನ ಅವರ ನೇತೃತ್ವದ ತಂಡ ಕಟ್ಟಿದ ಕ್ಲಬ್ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಬೆಳ್ಳಿ ಹಬ್ಬ ಅರ್ಥಪೂರ್ಣಗೊಳಿಸಲು ಕಳೆದ ಡಿಸೆಂಬರ್‌ನಿAದ ಈವರೆಗೂ ಕಾರ್ಯಕ್ರಮ ಮಾಡಲಾಗಿದೆ. ಸಮಾಜವನ್ನು ಒಗ್ಗೂಡಿಸುವುದು ನಮ್ಮ ಉದ್ದೇಶವಾಗಿತ್ತು. ಈ ಹಿನ್ನೆಲೆಯಡಿ ಕಾರ್ಯಕ್ರಮ ಮಾಡಿದ್ದೇವೆ. ವಿಷಯಕ್ಕೆ ಒತ್ತು ನೀಡಿ ಸಂಘಟನೆ ಮುನ್ನಡೆಯುತ್ತಿದೆ. ಪತ್ರಕರ್ತರ ಆರ್ಥಿಕ ಅಭಿವೃದ್ಧಿಗೆ ಸಹಕಾರ ಸಂಘ ರಚನೆಯಾಗಲಿದೆ. ರೂ. ೧ ಕೋಟಿ ಕ್ಷೇಮನಿಧಿ ಸ್ಥಾಪನೆ ಮಾಡಲು ಮುಂದಾಗುತ್ತಿದ್ದೇವೆ. ಎಲ್ಲರ ಸಹಕಾರದೊಂದಿಗೆ ಇದನ್ನು ಕಾರ್ಯಗತಗೊಳಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಳ್ಳಿ ಹಬ್ಬ ಆಚರಣಾ ಸಮಿತಿ ಅಧ್ಯಕ್ಷ ಉಳ್ಳಿಯಡ ಪೂವಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೌರವಾಧ್ಯಕ್ಷೆ ಬಿ.ಆರ್. ಸವಿತಾ ರೈ ಈ ಸಂದರ್ಭ ಹಾಜರಿದ್ದರು.

ಪ್ರಜ್ಞಾ ರಾಜೇಂದ್ರ ಪ್ರಾರ್ಥಿಸಿದರು. ಆನಂದ್ ಕೊಡಗು, ಪ್ರತಿಮಾ ಹರೀಶ್ ರೈ ನಿರೂಪಿಸಿದರು. ಕೆ.ಕೆ. ರೆಜಿತ್ ಕುಮಾರ್ ಸ್ವಾಗತಿಸಿದರು. ಬಾಚರಣಿಯಂಡ ಅನು ಕಾರ್ಯಪ್ಪ ವಂದಿಸಿದರು.