ಮಡಿಕೇರಿ, ಸೆ. ೧೫: ಈ ಬಾರಿ ಐಗೂರು ಗ್ರಾಮ ವ್ಯಾಪ್ತಿಯಲ್ಲಿ ಏಕದಂತ ಗೆಳೆಯರ ಬಳಗ ಐಗೂರು, ಹೊಸತೋಟದ ಹರೇ ರಾಮ ಯುವಕ ಸಂಘ, ದುರ್ಗಾ ನಗರದ ವಿನಾಯಕ ಯುವಕ ಸಂಘ, ವಿಜಯನಗರದ ಗಜಾನನ ಸಮಿತಿ, ಕಾಜೂರಿನ ಹರಿಹರ ಯುವಕ ಸಂಘ, ಕುಂಬೂರಿನ ವಿನಾಯಕ ಸಮಿತಿ ಮತ್ತು ಮಾದಾಪುರದ ಗಣಪತಿ ದೇವಸ್ಥಾನ ಸಮಿತಿಯ ಆಶ್ರಯದಲ್ಲಿ ತಾ. ೧೮ ಮತ್ತು ೧೯ ರಂದು ಗೌರಿ-ಗಣೇಶ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ.