ವೀರಾಜಪೇಟೆ, ಸೆ. ೧೫ : ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಚುನಾವಣಾ ಅಧಿಕಾರಿಯು ದ್ವಂಧ್ವ ನೀತಿ ಅನುಸರಿಸಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯಕ್ಕೆ ಮೊರೆ ಹೋದÀ ಹಿನೆÀ್ನಲೆಯಲ್ಲಿ ಪಂಚಾಯಿತಿಯಲ್ಲಿ ನಡೆದ ಎರಡು ಸಾಮಾನ್ಯ ಸಭೆಯನ್ನು ಗ್ರಾಮ ಪಂಚಾಯಿತಿ ಸದಸ್ಯರು ಬಹಿಷ್ಕಾರ ಮಾಡಿದ್ದಾರೆ.

ವೀರಾಜಪೇಟೆ ತಾಲೂಕು ಕೆದಮುಳ್ಳೂರು ಗ್ರಾಮ ಪಂಚಾಯಿತಿಗೆ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಚುನಾವಣೆಯ ಫಲಿತಾಂಶವನ್ನು ಚುನಾವಣಾ ಅಧಿಕಾರಿಗಳು ಘೋಷಣೆ ಮಾಡಿರುವ ವಿರುದ್ಧ ಗ್ರಾಮ ಪಂಚಾಯಿತಿಯ ಭಾ.ಜ.ಪ ಬೆಂಬಲಿತ ಸದಸ್ಯರು ಗ್ರಾಮ ಪಂಚಾಯಿತಿಯಲ್ಲಿ ನಡೆದ ಎರಡು ಸಾಮಾನ್ಯ ಸಭೆಗಳನ್ನು ಬಹಿಷ್ಕಾರ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಭಾ.ಜ.ಪ. ಬೆಂಬಲಿತ ಸದಸ್ಯರು ಮತ್ತು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಮಾಳೇಟಿರ ಸಾಬಾ ಮುತ್ತಪ್ಪ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ್ಷ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ತಾನು ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಸ್ಪರ್ಧೆ ಮಾಡಿದ್ದೆ. ಮತದಾನದ ಸಂದರ್ಭ ಮತ ಪತ್ರದಲ್ಲಿ ಮತ ಹಾಕುವ ಸ್ಥಳವನ್ನು ಬಿಟ್ಟು ಇತರ ಸ್ಥಳದಲ್ಲಿ ಮತ ಹಾಕಿದ್ದಾರೆ. ಚುನಾವಣೆ ಅಧಿಕಾರಿಗಳು ಮತ ಅಸಿಂಧು ಎಂದು ಘೊಷಣೆ ಮಾಡಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಾಳೇಟಿರ ಜೆಫ್ರಿ ಉತ್ತಪ್ಪ ಅವರನ್ನು ಅಧ್ಯಕ್ಷರಾಗಿ ಅಯ್ಕೆ ಮಾಡಿದ್ದಾರೆ. ಚುನಾವಣೆ ಸಂದರ್ಭ ೧೩ ಮತಗಳ ಪೈಕಿ ೧೨ ಮತಗಳಲ್ಲಿ ತಲಾ ೬ ಮತಗಳು ಇಬ್ಬರಿಗೂ ಬಂದಿದೆ. ಒಂದು ಮತ ಕ್ರಮಬದ್ಧವಾಗಿಲ್ಲ ಎಂದು ಅಸಿಂಧುಗೊಳಿಸಲಾಗಿದೆ. ಆದರೆ, ಆ ಮತ ತನಗೆ ಬಂದಿತು. ಈ ಲೋಪ ಪ್ರಶ್ನಿಸಿ ಚುನಾವಣೆಯ ಅಧಿಕಾರಿಯ ವಿರುದ್ಧ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿದೆ. ಆದುದರಿಂದ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆಯನ್ನು ಎಲ್ಲಾ ಭಾ.ಜ.ಪ ಬೆಂಬಲಿತ ಸದಸ್ಯರು ಬಹಿಷ್ಕಾರ ಮಾಡಿರುತ್ತೇವೆ ಎಂದರು.

ಸದಸ್ಯ ಎಂ.ಎA. ಪರಮೇಶ್ವರ ಮಾತನಾಡಿ, ಚುನಾವಣೆ ನಡೆದ ಬಳಿಕ ಗ್ರಾಮ ಪಂಚಾಯಿತಿ ಪಿ.ಡಿ.ಓ. ಅವರು ಎರಡು ಬಾರಿ ಸಭೆಯನ್ನು ಕರೆದಿದ್ದರು. ಚುನಾವಣೆಯ ಫಲಿತಾಂಶ ಮತ್ತು ಚುನಾವಣೆಯ ಅಧಿಕಾರಿಯು ಅನುಸರಿಸಿದ ಕ್ರಮದ ವಿರುದ್ಧ ನ್ಯಾಯಾಲಯಕ್ಕೆ ದೂರು ನೀಡಲಾಗಿದೆ. ಪ್ರಕರಣ ಇತ್ಯರ್ಥ ಆಗುವವರೆಗೂ ಯಾವುದೇ ಸಭೆಗಳಿಗೆ ನಾವುಗಳು ಹಾಜರಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಈ ಸಂದರ್ಭ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆÀ ನಡಿಕೇರಿಯಂಡ ಶೀಲಾ ಮೇದಪ್ಪ, ಸದಸ್ಯರಾದ ಕೆ.ಎಂ. ರಾಮಯ್ಯ, ವಿಮಲ, ಎಂ.ಬಿ. ಮೀನಾಕ್ಷಿ ಮತ್ತು ಜಯಂತಿ ಅವರು ಹಾಜರಿದ್ದರು.