ಮಡಿಕೇರಿ, ಸೆ. ೧೪: ಜಿಲ್ಲೆಯಲ್ಲಿ ಕೆಲವರು ಯಾವುದೇ ಪರವಾನಗಿ ಇಲ್ಲದೆ ಬೇರೆ ಗುತ್ತಿಗೆದಾರರಿಂದ ಕೆಲಸ ಸಮಾಪನಾ ಪತ್ರ (ಸಿಆರ್) ಪಡೆದು ವಿದ್ಯುತ್ ಸಂಪರ್ಕ ನೀಡುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಅಂತಹ ಕಾಮಗಾರಿಗಳ ಕಡತಗಳನ್ನು ತಡೆಹಿಡಿಯುವುದಲ್ಲದೆ, ಸಿಆರ್ ನೀಡುವ ಗುತ್ತಿಗೆದಾರರ ಪರವಾನಗಿ ರದ್ದುಮಾಡಲು ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಎಚ್ಚರಿಕೆ ನೀಡಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ವಸಂತ ರೈ ಅವರು; ನೂರು ವರ್ಷಗಳ ಇತಿಹಾಸವಿರುವ ಸಂಘವು ಸದಸ್ಯರ, ಗುತ್ತಿಗೆದಾರರ ಹಿತಕ್ಕಾಗಿ ಉತ್ತಮವಾಗಿ ಕಾರ್ಯನಿರ್ವ ಹಿಸಿಕೊಂಡು ಬರುತ್ತಿದೆ. ಗುತ್ತಿಗೆ ದಾರರು ವಿದ್ಯುತ್ ಕೆಲಸಗಳನ್ನೇ ನಂಬಿಕೊAಡು ಬದುಕು ಸಾಗಿಸು ತ್ತಿದ್ದಾರೆ. ಆದರೆ, ಕೆಲವು ಮನೆ, ಕಟ್ಟಡ ಕೆಲಸ ನಿರ್ವಹಿಸುವ ಗುತ್ತಿಗೆದಾರರು ತಮ್ಮ ಕೆಲಸಗಾರರಿಂದ ವಿದ್ಯುತ್ ಕೆಲಸಗಳನ್ನು ಮಾಡಿಸಿ ನಂತರ ಸಂಘದ ಸದಸ್ಯತ್ವ ಪಡೆಯದ ವಿದ್ಯುತ್ ಗುತ್ತಿಗೆದಾರರಿಂದ ಸಿ ಆರ್ ಪಡೆದು ಸಂಪರ್ಕ ಕಲ್ಪಿಸುತ್ತಾರೆ. ಇದು ವಿಳಂಬ ಸಂಪರ್ಕಕ್ಕೂ ಕಾರಣವಾಗುತ್ತಿದ್ದು, ಈ ರೀತಿಯ ಪ್ರಕರಣ ಕಂಡುಬAದರೆ ಅಂತಹ ಕಡತಗಳನ್ನು ತಡೆ ಹಿಡಿಯಲಾಗುವುದು. ಇದರಿಂದ ಗ್ರಾಹಕರಿಗೂ ತೊಂದರೆಯಾಗಲಿದೆ. ಹಾಗಾಗಿ ಗ್ರಾಹಕರು ಕೂಡ ಅನುಮತಿ ಪಡೆದ ಗುತ್ತಿಗೆದಾರರೊಂದಿಗೆ ವ್ಯವಹರಿಸುವಂತೆ ಕೋರಿದರು. ಅಲ್ಲದೆ ಈ ರೀತಿಯಾಗಿ ಸಿಆರ್ ನೀಡುವ ಗುತ್ತಿಗೆದಾರರ ಪರವಾನಗಿ ರದ್ದುಗೊಳಿಸಲೂ ಕ್ರಮ ಕೈಗೊಳ್ಳಲಾಗುವದು. ಈ ನಿಟ್ಟಿನಲ್ಲಿ ವಿದ್ಯುತ್ ಇಲಾಖೆ ಕೂಡ ಸಂಘದೊAದಿಗೆ ಸಹಕಾರ ನೀಡುತ್ತಿದೆ ಎಂದು ಹೇಳಿದರು. ಕೆಲವರು ವಿದ್ಯುತ್ ಇಲಾಖಾ ಲೈನ್‌ಮೆನ್ ಮೂಲಕವೂ ಕೆಲಸ ಮಾಡಿಸಿ ಕೊಳ್ಳುತ್ತಾರೆ. ಇದರಿಂದ ಲೈನ್‌ಮೆನ್ ಗಳಿಗೂ ಗ್ರಾಹಕರಿಗೂ ತೊಂದರೆ ಯಾಗಲಿದೆ. ಈ ಬಗ್ಗೆಯೂ ಎಚ್ಚರ ವಹಿಸಬೇಕೆಂದು ಹೇಳಿದರು.

ಸಂಘದ ಉಪಾಧ್ಯಕ್ಷ ಅನಿಲ್ ಮಾತನಾಡಿ; ಗುತ್ತಿಗೆದಾರರು ಮತ್ತೊಬ್ಬರಿಗೆ ಸಿಆರ್ ನೀಡುವದು ಕಾನೂನು ಬಾಹಿರವಾಗಿದೆ. ಈ ರೀತಿ ಸಿಆರ್ ನೀಡುವ ಗುತ್ತಿಗೆದಾರರ ಪರವಾನಗಿ ರದ್ದುಪಡಿಸಲು ವಿದ್ಯುತ್ ಪರಿವೀಕ್ಷಕರು ಒಪ್ಪಿಗೆ ನೀಡಿದ್ದಾರೆ. ಹಾಗಾಗಿ ಅಂತಹ ಗುತ್ತಿಗೆದಾರರು ಎಚ್ಚರವಹಿಸಬೇಕೆಂದು ಹೇಳಿದರು. ಅಲ್ಲದೆ ಕೆಲವು ಗ್ರಾಮ ಪಂಚಾಯ್ತಿಗಳಲ್ಲಿ ಪಂಚಾಯಿತಿ ಸದಸ್ಯರುಗಳೇ ಗುತ್ತಿಗೆ ಪಡೆದು ಕಾಮಗಾರಿ ನಡೆಸುತ್ತಿರುವ ಬಗ್ಗೆ ದೂರು ಬಂದಿದೆ. ಈ ಬಗ್ಗೆ ಪರಿಶೀಲನೆ ಮಾಡಿ ಅಂತಹ ಕಡತಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಕೈಗೊಳ್ಳಲಾಗುವದೆಂದು ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಅನಿತ್, ಕಾರ್ಯದರ್ಶಿ ರಾಜು, ಸಂಘಟನಾ ಕಾರ್ಯದರ್ಶಿ ಸಲಾಂ, ಸಹ ಕಾರ್ಯದರ್ಶಿ ಸಂಜೀವ್ ಇದ್ದರು.