ಸುಂಟಿಕೊಪ್ಪ, ಸೆ. ೧೪: ಸಮೀಪದ ಗರಗಂದೂರು ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜಿನಲ್ಲಿ ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಶಾಲನಗರ ವೃತ್ತ ನಿರೀಕ್ಷಕರಾದ ರಾಜೇಶ್ ಕೋಟ್ಯಾನ್ ಮಾತನಾಡಿ ೧೨ನೇ ಶತಮಾನದಲ್ಲಿ ಜನರು ಅನುಭವಿಸುತ್ತಿದ್ದ ಸಾಮಾಜಿಕ ಅಸಮಾನತೆಗಳನ್ನು ನೀಗಿಸಲು ಎಲ್ಲಾ ಜಾತಿ ವರ್ಗಗಳ ವಚನಗಾರರು ವಚನಗಳನ್ನು ರಚಿಸಿ ಜನರಲ್ಲಿ ಸಾಮಾಜಿಕ ಪ್ರಜ್ಞೆಯ ಜೊತೆಗೆ ಅವರ ಜೀವನ ಸುಧಾರಣೆಗೆ ರೂಪಿಸಿದ ಜನರಾಡುವ ಸರಳ ಭಾಷೆಯ ವಚನಗಳು ಸದ್ಗುಣಗಳನ್ನು ಭಿತ್ತಿ ಬೆಳೆವ ಭೂಮಿಕೆ ಎಂದು ಅಭಿಪ್ರಾಯಪಟ್ಟರು.

ವಚನ ಸಾಹಿತ್ಯ ಕುರಿತು ಉಪನ್ಯಾಸ ನೀಡಿದ ಹೆಬ್ಬಾಲೆ ಫ್ರ‍್ರೌಡ ಶಾಲಾ ಉಪನ್ಯಾಸಕ ವೆಂಕಟ ನಾಯಕ್. ೮೦೦ ವರ್ಷಗಳ ಹಿಂದೆ ವಚನಕಾರರು ತಮ್ಮ ಅಧ್ಯಾತ್ಮ ನೆಲೆಯೊಳಗೆ ಬದುಕಿನ ಸಾರ ಹಾಗೂ ಸತ್ವಗಳನ್ನು ಸಾರಿ ಜಟಿಲವಾದ ಮನುಷ್ಯನ ಬದುಕನ್ನು ಸರಳ ಗೊಳಿಸಿ ನೈಜ ಬದಿಕಿನ ಗಂಧ ಲೇಪಿಸಿ ತಮ್ಮ ಅನುಭವ ನುಡಿಗಳ ತಿಂಗಳ ಬೆಳಕನ್ನು ಜನರ ಅಂಗಳಕ್ಕೆ ತಂದ ಶರಣ ಶ್ರೇಷ್ಠರು. ೧೨ನೇ ಶತಮಾನದ ಬಸವ ಯುಗದ ವಚನ ಸಾಹಿತ್ಯ ಅಂದಿನ ಜನರ ಆಚಾರ, ವಿಚಾರ ಭಾಷೆ ಸಾಹಿತ್ಯ ಮುಂತಾದ ಹಲವು ಕೇತ್ರಗಳಲ್ಲಿ ತನ್ನ ಛಾಪನ್ನು ಮೂಡಿಸಿದ ಮೇರು ಸಾಹಿತ್ಯವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜಿನ ವಸತಿ ಶಾಲೆ ಪ್ರಾಚಾರ್ಯ ಎನ್. ಮಹೇಂದ್ರ ಮಾತನಾಡಿ ವಚನಕಾರರು ದೇಹವನ್ನೇ ದೇವಾಲಯ ಮಾಡಿಕೊಂಡು ಢಾಂಭಿಕ ಭಕ್ತಿಯನ್ನು ವಿರೋಧಿಸಿದರು. ಹೊಸ ಸಮಾಜ ರಚಣೆಯ ಮುಕ್ತ ಚರ್ಚೆಗೆ ಅನುಭವ ಮಂಟಪವನ್ನು ಭೂಮಿಕೆ ಮಾಡಿಕೊಂಡ ವಚನಕಾರರು ಪುರೋಹಿತ ಶಾಹಿ ರಾಜ ಪ್ರಭುತ್ವ ಮೊದಲಾದ ಪ್ರತಿಗಾಮಿಗಳ ವಿರುದ್ಧ ಚಳವಳಿ ನಡೆಸಿ ನಾಡು ಕಟ್ಟಿದ ಮಹನೀಯರ ಆದರ್ಶ ಇಂದು ವಿದ್ಯಾರ್ಥಿಗಳಿಗೆ ಅತ್ಯಗತ್ಯ ಎಂದರು. ಚೆನ್ನಮ್ಮ ಕಾಲೇಜಿನ ನಿವೃತ್ತÀ ಉಪನ್ಯಾಸಕ ಜಿ.ಇ. ಸೋಮಶೇಖರ್, ಸುಂಟಿಕೊಪ್ಪ ಠಾಣಾಧಿಕಾರಿ ಶ್ರೀಧರ್, ಮಾತನಾಡಿದರು.

ವಚನ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷರು ಕೆ.ಎಸ್.ಮೂರ್ತಿ ಪ್ರಾಸ್ತಾವಿಕ ನುಡಿಯಾಡಿದರು. ಈ ಸಂದರ್ಭ ವಿದ್ಯಾರ್ಥಿಗಳಿಂದ ವಚನ ಸಹಿತ್ಯದ ಕುರಿತು ಭಾಷಣ, ಗಾಯನ, ನಡೆಸಿದರು. ಉಪನ್ಯಾಸಕರಾದ ದೇವರಾಜ್ ನಾಯಕ್, ಗೀತಾಂಜಲಿ, ಮಹದೇವಸ್ವಾಮಿ, ಕೆ.ಪಿ.ಪಾಪಣ್ಣ ಕಾಲೇಜಿ ಕನ್ನಡ ಉಪನ್ಯಾಸ ಪಾಪಣ್ಣ ಹಾಜರಿದ್ದರು.