ಗೋಣಿಕೊಪ್ಪಲು, ಸೆ. ೧೪: ಪ್ರತಿಷ್ಠಿತ ಸಹಕಾರ ಸಂಘಗಳಲ್ಲಿ ಒಂದಾದ ಗೋಣಿಕೊಪ್ಪಲುವಿನ ಪ್ರಾಥಮಿಕ ಗ್ರಾಮಾಂತರ ಕೃಷಿ ಪತ್ತಿನ ಸಹಕಾರ ಸಂಘವು ೧.೨೧ ಕೋಟಿ ಲಾಭಾಂಶದಲ್ಲಿ ಮುಂದುವರೆ ಯುತ್ತಿದ್ದು ಮುಂದಿನ ಸಾಲಿನಲ್ಲಿ ೫ ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಾಣವಾಗಲಿದೆ. ಈಗಾಗಲೇ ನೂತನ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ. ಸಂಘದ ಸದಸ್ಯರ ಹಣದಿಂದ ಈ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ವಿಶೇಷವಾಗಿ ಕಟ್ಟಡದಲ್ಲಿ ಮಲ್ಟಿಪ್ಲೆಕ್ಸ್ ಥಿಯೇಟರ್ ಆರಂಭಿಸಲಾಗುವುದು. ನೂತನ ಕಟ್ಟಡ ಕಾಮಗಾರಿಯನ್ನು ಸಹಕಾರ ಸಂಘಗಳ ನಿಬಂಧಕರಿAದ ಆಡಳಿತಾತ್ಮಕ ಅನುಮತಿ ಪಡೆದು ಪಾರದರ್ಶಕವಾಗಿ ಕಟ್ಟಡ ನಿರ್ಮಾಣದ ಜವಾಬ್ದಾರಿ ಯನ್ನು ಹಲವು ಷರತ್ತುಗಳೊಂದಿಗೆ ಮೈಸೂರಿನ ಬಾಮೀಸ್ ಕನ್ಸ್ಟ್ರಕ್ಷನ್ ರವರಿಗೆ ನೀಡಲಾಗಿದೆ ಎಂದು ಸಹಕಾರ ಸಂಘದ ಅಧ್ಯಕ್ಷರಾದ ಕುಪ್ಪಂಡ ಎಂ. ಚಿಟ್ಟಿಯಪ್ಪ ತಿಳಿಸಿದರು.
ಗೋಣಿಕೊಪ್ಪಲುವಿನ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ಆಯೋಜನೆ ಗೊಂಡಿದ್ದ ೨೦೨೩-೨೪ನೇ ಸಾಲಿನ ೬೯ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಿಟ್ಟಿಯಪ್ಪ ಸಂಘವು ೨.೧೪ ಕೋಟಿ ಪಾಲು ಬಂಡವಾಳದೊAದಿಗೆ ಯಶಸ್ವಿಯಾಗಿ ಮುಂದುವರೆಯುತ್ತಿವೆ. ಸಂಘವು ಎ ತರಗತಿಯನ್ನು ಹೊಂದಿದ್ದು ಕಳೆದ ೧೪ ವರ್ಷಗಳಿಂದ ಎ. ತರಗತಿಯನ್ನು ಪಡೆಯುತ್ತಿದ್ದೇವೆ. ೬೫.೨೭ ಕೋಟಿ ಠೇವಣಿ ಸಂಗ್ರಹಣೆ ಯೊಂದಿಗೆ ಸದಸ್ಯರುಗಳಿಗೆ ೪೯.೪೬ ಕೋಟಿ ಸಾಲವನ್ನು ನೀಡಲಾಗಿದೆ.
ಶೇ. ೯೭ರಷ್ಟು ವಸೂಲಾತಿ ಮಾಡಲಾಗಿದೆ. ವ್ಯಾಪಾರ ವಿಭಾಗವು ಲಾಭದಲ್ಲಿದ್ದು ಸದಸ್ಯರುಗಳಿಗೆ ಅಗತ್ಯವಿರುವ ಗೊಬ್ಬರ ಹಾಗೂ ಹತ್ಯಾರು ಸಾಮಾಗ್ರಿಗಳನ್ನು ಸಂಘದಿAದಲೇ ಖರೀದಿಸಿ ಹೆಚ್ಚಿನ ಲಾಭ ಗಳಿಸಲು ಸಂಘದ ಸದಸ್ಯರು ಸಹಕರಿಸಿದ್ದಾರೆ. ಸದಸ್ಯರಿಗೆ ಶೇ.೨೫ ಡಿವಿಡೆಂಟ್ ಹಾಗೂ ಊಟದ ಬಾಪ್ತು ೧೫೦೦ ನೀಡಲಾಗಿದೆ. ಸಂಘದಲ್ಲಿ ಮಧ್ಯಮಾವದಿ ಸಾಲ, ಕೃಷಿ ಕೆಲಸಗಳಿಗೆ ಶೇ.೩ರ ಬಡ್ಡಿ ದರದಲ್ಲಿ ೧೦ ಲಕ್ಷಗಳ ವರೆಗೆ ೫ ರಿಂದ ೭ ವರ್ಷಗಳಲ್ಲಿ ಮರು ಪಾವತಿಸುವಂತೆ ಸಾಲ ನೀಡಲಾಗುತ್ತಿದೆ. ಸಂಘದ ಜಾಗದಲ್ಲಿ ೪ ಅಂತಸ್ತುಗಳ ಕಟ್ಟಡ ನಿರ್ಮಾಣ ವಾಗುತ್ತಿದೆ. ರಾಜ್ಯದಲ್ಲಿಯೇ ಉತ್ತಮ ಸಹಕಾರ ಸಂಘ ಮಾಡಬೇಕೆಂಬ ಆಶಯ ನಮ್ಮದಾಗಿದೆ. ಮುಂದಿನ ಸಾಲಿನಿಂದ ಸರ್ಕಾರದ ನಿಯಮದಂತೆ ಸಂಘದ ಹೆಸರನ್ನು ಬದಲಾಯಿಸ ಲಾಗುವುದು ಎಂದು ಅಧ್ಯಕ್ಷ ಕುಪ್ಪಂಡ ಎಂ. ಚಿಟ್ಟಿಯಪ್ಪ ತಮ್ಮ ಅಭಿಪ್ರಾಯ ವನ್ನು ಸಭೆಯಲ್ಲಿ ಮಂಡಿಸಿದರು.
ಸರ್ಕಾರದಿಂದ ಬಡ್ಡಿ ಸಹಾಯಧನ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ೧ ಕೋಟಿ ೬೭ ಲಕ್ಷ ಬರಲು ಬಾಕಿಯಿದ್ದು ಇದನ್ನು ನಿರೀಕ್ಷಿಸಲಾಗಿದೆ. ಸದಸ್ಯರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಸಂಘದಲ್ಲಿ ಸದಸ್ಯರ ಏಳಿಗೆಗೆ ಶ್ರಮಿಸಲಾಗುತ್ತಿದೆ. ನಮ್ಮ ಮೇಲೆ ನಿರೀಕ್ಷೆ ಇಟ್ಟು ಆಡಳಿತ ಮಂಡಳಿಯನ್ನು ಅವಿರೋಧವಾಗಿ ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ ಸಂಘಕ್ಕೆ ೩ ಲಕ್ಷ ಹಣವು ಉಳಿತಾಯವಾಗಿದೆ. ಸದಸ್ಯರು ನಮ್ಮ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲಾಗುತ್ತಿದೆ. ಸಂಘದ ಬೆಳವಣಿಗೆಗೆ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಶ್ರಮಿಸುತ್ತಿದ್ದಾರೆ ಎಂದು ಅಧ್ಯಕ್ಷರು ಅಭಿಪ್ರಾಯವನ್ನು ಮಂಡಿಸಿದರು.
ಸAಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯೂ ಉತ್ತಮವಾಗಿ ಆಡಳಿತ ನಡೆಸುತ್ತಿದ್ದು ಸಂಘ ಪ್ರಗತಿ ಯಲ್ಲಿರುವುದು ಸದಸ್ಯರಿಗೆ ಹೆಮ್ಮೆಯ ವಿಷಯ. ಸಂಘದಲ್ಲಿ ಸಿಬ್ಬಂದಿಗಳು ಸದಸ್ಯರಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಅಧ್ಯಕ್ಷರು ಕೂಡ ಸದಸ್ಯರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುತ್ತಿರುವುದರಿAದ ಉತ್ತಮ ವಾತಾವರಣ ಕಂಡು ಬಂದಿದೆ ಎಂದು ಹಿರಿಯ ಸದಸ್ಯರುಗಳು ಶ್ಲಾಘಿಸಿದರು.
ಮಹಾಸಭೆಯಲ್ಲಿ ಜಮ್ಮಡ ಮೋಹನ್, ಹಿರಿಯ ಸದಸ್ಯರಾದ ಕುಶ ಕುಪ್ಪಂಡ ಗಣೇಶ್, ಬೋಪಣ್ಣ, ಮಾದಪ್ಪ, ಅಪ್ಪಣ್ಣ ಸೇರಿದಂತೆ ಇನ್ನಿತರ ಪ್ರಮುಖರು ಸಂಘದ ಅಭಿವೃದ್ಧಿಯ ಬಗ್ಗೆ ಸಮಗ್ರವಾಗಿ ಚರ್ಚಿಸಿದರು. ಸಂಘದ ಮುಖ್ಯ ಕಾರ್ಯನಿರ್ವ ಹಣಾಧಿಕಾರಿಗಳಾದ ವಿ.ಕೆ. ಪ್ರತಾಪ್, ಕಾರ್ಯಕ್ರಮ ನಿರೂಪಿಸಿ ಮಹಾ ಸಭೆಯ ವರದಿ ಮಂಡಿಸಿ ಅನುಮೋದನೆ ಪಡೆದರು. ಬೈಲಾ ತಿದ್ದುಪಡಿಗೆ ಮಹಾಸಭೆಯು ಒಪ್ಪಿಗೆ ನೀಡಿತು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಕಬ್ಬಚ್ಚಿರ ಎಂ. ಸುಬ್ರಮಣಿ, ನಿರ್ದೇಶಕರುಗಳಾದ ಜಮ್ಮಡ ಸಿ. ಮೋಹನ್, ಬೆಲ್ಲತಂಡ ಸಿ. ಮಾದಯ್ಯ, ಚೆಪ್ಪುಡೀರ ಟಿ. ಗಣಪತಿ, ಕಾಡ್ಯಮಾಡ ಪಿ. ದೇವಯ್ಯ, ವೇದಪಂಡ ಬಿ. ಕಿರಣ್, ಪಿ.ವಿ. ಶೋಭಿತ್, ಕೊಕ್ಕಲೆಮಾಡ ಪಾರ್ವತಿ, ಜಮ್ಮಡ ಸೌಮ್ಯ, ಜಮ್ಮಡ ಪ್ರಮೀಳ, ಹೆಚ್.ಎಸ್. ಗಣೇಶ್, ವೈ.ಬಿ. ಗಪ್ಪು, ಕುಲ್ಲಚಂಡ ಪ್ರಮೋದ್ ಗಣಪತಿ ಸೇರಿದಂತೆ ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ಜನಾರ್ಧನ್ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು. ಸದಸ್ಯರಾದ ಚೇದಂಡ ಸುಮಿ ಸುಬ್ಬಯ್ಯ ಪ್ರಾರ್ಥಿಸಿ, ಹಿರಿಯ ನಿರ್ದೇಶಕ ಬೆಲ್ಲತಂಡ ಸಿ. ಮಾದಯ್ಯ ವಂದಿಸಿದರು.