ಮಡಿಕೇರಿ, ಸೆ. ೧೪ : ೨೦೨೩-೨೪ನೇ ಸಾಲಿನ ಕೊಡಗು ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವೀರಾಜಪೇಟೆ ತಾಲೂಕು ಹಾಗೂ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಬಾಳೆಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸರ್ವದೈವತಾ ಪ್ರಾಥಮಿಕ ಶಾಲೆ ಸಮಗ್ರ ಬಾಲಕ - ಬಾಲಕಿಯರ ಥ್ರೋಬಾಲ್, ಬಾಲಕ-ಬಾಲಕಿಯರ ವಾಲಿಬಾಲ್ ಹಾಗೂ ಬಾಲಕ-ಬಾಲಕಿಯರ ಟೇಬಲ್ ಟೆನ್ನಿಸ್‌ನಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡು ೬೦ ಅಂಕಗಳೊAದಿಗೆ ವೀರಾಜಪೇಟೆ ತಾಲೂಕು ಕ್ರೀಡಾಕೂಟ ದಲ್ಲಿ ಸಮಗ್ರ ಪ್ರಶಸ್ತಿಯನ್ನು ತನ್ನ ಮುಡಿ ಗೇರಿಸಿಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ರವಿಚಂದ್ರ ಹೆಚ್.ಹೆಚ್. ಮತ್ತು ಪ್ರಮೋದ್ ವಿ.ಎನ್. ಇವರು ವಿದ್ಯಾ ರ್ಥಿಗಳಿಗೆ ತರಬೇತಿಯನ್ನು ನೀಡಿದ್ದಾರೆ.