ಅನಿಲ್ ಎಚ್.ಟಿ.

ಮಡಿಕೇರಿ, ಸೆ. ೧೪: ಮಡಿಕೇರಿಯಲ್ಲಿ ಇತ್ತೀಚಿಗೆ ನಡೆದ ಲೋಕ ಅದಾಲತ್ ಮೋಟಾರ್ ಅಪಘಾತ ಪರಿಹಾರದ ಪ್ರಕರಣ ದಲ್ಲಿ ರಾಜಿ ಸಂಧಾನದ ಮೂಲಕ ಒಟ್ಟು ೨.೨೫ ಕೋಟಿ ರೂ.ಗಳ ಬೃಹತ್ ಮೊತ್ತದ ಪರಿಹಾರವನ್ನು ಮೃತನ ಕುಟುಂಬಸ್ಥರಿಗೆ ವಿಮಾ ಸಂಸ್ಥೆಯಿAದ ನೀಡುವ ಮಹತ್ವದ ತೀರ್ಪಿಗೆ ಸಾಕ್ಷಿಯಾಯಿತು.

ಪ್ರಕರಣದ ಹಿನ್ನೆಲೆ : ೨೦೧೭ರ ಡಿಸೆಂಬರ್ ತಿಂಗಳ ೨೫ ರಂದು ಅಲ್ಲಾರಂಡ ಅಚಲ್ ಬೋಪಣ್ಣ ಗಣಪತಿ ಮೋಟರ್ ಬೈಕ್‌ನಲ್ಲಿ ಮೂಡಿಗೆರೆಯಿಂದ ತನ್ನ ಮನೆಯಿರುವ ಬೆಳ್ಳುಮಾಡುವಿಗೆ ಪ್ರಯಾಣಿಸುತ್ತಿದ್ದರು.

ಅಪರಾಹ್ನ ೩.೨೫ ಗಂಟೆ ಸಮಯದಲ್ಲಿ ಮೂರ್ನಾಡು ಬಾಡಗ ಗ್ರಾಮ ವ್ಯಾಪ್ತಿಯಲ್ಲಿ ಮಡಿಕೇರಿ - ವೀರಾಜಪೇಟೆ ಮುಖ್ಯ ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭ ಎದುರುಗಡೆ ಯಿಂದ ಬಂದ ಪಿಕ್‌ಅಪ್ ಜೀಪ್‌ನ ಚಾಲಕ ಅಯ್ಯಪ್ಪ ಎಂಬಾತ ಅತಿ ವೇಗವಾಗಿ ಬಂದು ಅಚಲ್ ಚಲಾಯಿಸುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದರು. ಈ ಅಪಘಾತದಲ್ಲಿ ಅಚಲ್ ಗಣಪತಿ ಗಂಭೀರ ಗಾಯಗೊಂಡು ಮಡಿಕೇರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೃತ ಅಚಲ್ ಹಾಂಗ್‌ಕಾAಗ್‌ನ ಆಂಗ್ಲೋ ಈಸ್ಟರ್ನ್ ಶಿಪ್ಪಿಂಗ್ ಕಂಪನಿಯಲ್ಲಿ ೧೪ ವರ್ಷದಿಂದ ಕ್ಯಾಪ್ಟನ್ ಆಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದರು.

ನAತರದ ದಿನಗಳಲ್ಲಿ ಅಚಲ್ ಬೋಪಣ್ಣ ಅವರ ಪತ್ನಿ ಬಿ.ಡಿ. ಸ್ಫೂರ್ತಿ ಬೋಪಣ್ಣ, ಮಗ ಭೃಹನ್ ಬೋಪಣ್ಣ ಮತ್ತು ಅಚಲ್ ಅವರ ತಾಯಿ ಅನಿಲ ಎ.ಜಿ. ಅವರು ಅಪಘಾತದ ಪರಿಹಾರಕ್ಕಾಗಿ ಮಡಿಕೇರಿ ಜಿಲ್ಲಾ ನ್ಯಾಯಾಲಯದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದರು.

ಈ ಪ್ರಕರಣಗಳು ಮಡಿಕೇರಿ ನ್ಯಾಯಾಲಯದಲ್ಲಿ ಆಯೋಜಿತ ಲೋಕ ಅದಾಲತ್

(ಮೊದಲ ಪುಟದಿಂದ) ಮುಂದೆ ಇದೇ ತಿಂಗಳ ೯ ರಂದು ವಿಚಾರಣೆಗೆ ಬಂದಿತ್ತು. ಈ ಸಂದರ್ಭ ಉಭಯಸ್ತರು ಸೇರಿ ಚರ್ಚಿಸಿ ಎರಡೂ ಪ್ರಕರಣವನ್ನು ಒಟ್ಟಿಗೆ ರಾಜಿ ಸಂಧಾನ ಮಾಡಿಸಿದರು.

ಅಂತೆಯೇ ಮೃತನ ಕುಟುಂಬಸ್ಥರಿಗೆ ಅಂದರೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ ಇಬ್ಬರಿಗೂ ಒಟ್ಟು ಮೊತ್ತವಾಗಿ ರೂ. ೨.೨೫ ಕೋಟಿ ನೀಡುವಂತೆ ಆದೇಶಿಸಿ ಒಂದನೇ ಅಪರ ಜಿಲ್ಲಾ ನ್ಯಾಯಾಧೀಶರಾದ ಪ್ರಶಾಂತಿ ಜಿ ಪ್ರಕರಣ ಇತ್ಯರ್ಥಪಡಿಸಿದರು.

ಈ ಸಂದರ್ಭದಲ್ಲಿ ಪ್ರಕರಣ ಅರ್ಜಿದಾರರು ಮೃತನ ತಾಯಿ ಎ. ಜಿ. ಅನಿಲ ಹಾಗೂ ಪತ್ನಿ ಬಿ.ಡಿ. ಸ್ಫೂರ್ತಿ ಹಾಗೂ ಅವರ ವಕೀಲರಾದ ಬಿ.ಬಿ. ಆನಂದ, ಕೆ.ಎಸ್. ರತನ್ ತಮ್ಮಯ್ಯ, ಅಷ್ಟೂ ಮೊತ್ತದ ಪರಿಹಾರ ಕೊಡಲು ಒಪ್ಪಿದ ಜೀಪಿನ ವಿಮಾ ಕಂಪನಿಯಾಗಿದ್ದ ಚೋಳಮಂಡಲಮ್ ಎಂ.ಎಸ್. ಜನರಲ್ ಇನ್ಶೂರೆನ್ಸ್ ಕಂಪನಿಯ ಪರವಾಗಿ ಅದರ ಕರ್ನಾಟಕ ಮುಖ್ಯಸ್ಥ ಬಾಹುಬಲಿ ಎಸ್.ಕೂ.ಗೆ, ಡೆಪ್ಯೂಟಿ ಮ್ಯಾನೇಜರ್ ಅರುಣ್ ಎಸ್. ಹಾಗೂ ಸದ್ರಿ ವಿಮಾ ಕಂಪನಿಯ ವಕೀಲ ಕೆ.ಡಿ. ದಯಾನಂದ ಅವರು ಹಾಜರಿದ್ದರು.

ಪ್ರಕರಣವನ್ನು ಉಭಯ ಕಕ್ಷಿದಾರರಲ್ಲಿಯೂ ರಾಜಿ ಮಾಡಿಸುವಲ್ಲಿ ಲೋಕ್‌ಅದಾಲತ್‌ನ ಸಂಧಾನಕಾರರಾಗಿ ಒಂದನೇ ಅಪರ ಜಿಲ್ಲಾ ನ್ಯಾಯಾಧೀಶರಾದ ಪ್ರಶಾಂತಿ ಜಿ ಪ್ರಮುಖ ಪಾತ್ರ ವಹಿಸಿದ್ದರು. ಲೋಕ ಅದಾಲತ್‌ನ ವಕೀಲ ಸಂಧಾನಕಾರರಾದ ಕೃಷ್ಣ ಭಟ್ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ. ಪ್ರಸಾದ್ ಸಮಕ್ಷಮ ರಾಜಿ ಸಂಧಾನ ನೆರವೇರಿತು.

ವಿಮಾ ಸಂಸ್ಥೆಯಾದ ಚೋಳಮಂಡಲಮ್ ಜನರಲ್ ಇನ್ಶೂರೆನ್ಸ್ ಕಂಪನಿ ೨ ತಿಂಗಳುಗಳ ಒಳಗೆ ಪರಿಹಾರದ ಮೊತ್ತವಾದ ೨.೨೫ ಕೋಟಿ ರೂ.ಗಳನ್ನು ಅಚಲ್ ಬೋಪಣ್ಣ ಅವರ ತಾಯಿ ಮತ್ತು ಪತ್ನಿಗೆ ನೀಡಲು ಒಪ್ಪಿದರು.

ಅಪಘಾತ ಪ್ರಕರಣವೊಂದರಲ್ಲಿ ಸಾವನ್ನಪ್ಪಿದವರ ಕುಟುಂಬಸ್ಥರಿಗೆ ದೊರಕಿದ ಅತೀ ದೊಡ್ಡ ಪರಿಹಾರ ಮೊತ್ತವಾಗಿ ಈ ಪ್ರಕರಣ ದಾಖಲಾಗಿದ್ದು, ವಿಮಾ ಸಂಸ್ಥೆಯಾದ ಚೋಳಮಂಡಲA ಎಂ.ಎಸ್. ಜನರಲ್ ಇನ್ಶೂರೆನ್ಸ್ ಪ್ರತಿನಿಧಿಗಳ ಪ್ರಕಾರ ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮೊತ್ತವನ್ನು ಪರಿಹಾರ ರೂಪದಲ್ಲಿ ನೀಡಲಾಗುತ್ತಿದೆ.

ಹಾಂಗ್ ಕಾಂಗ್‌ನ ಆಂಗ್ಲೋ ಈಸ್ಟರ್ನ್ ಶಿಪ್ಪಿಂಗ್ ಕಂಪೆನಿಯಲ್ಲಿ ೧೪ ವರ್ಷದಿಂದ ಕ್ಯಾಪ್ಟನ್ ಆಗಿದ್ದ ಅಚಲ್ ಬೋಪಣ್ಣ ಅವರ ಮಾಸಿಕ ವೇತನವೇ ೪ ಲಕ್ಷದಷ್ಟಿದ್ದು ಇನ್ನೂ ೩೪ ವರ್ಷಗಳ ಪ್ರಾಯದ ಅಚಲ್ ಬೋಪಣ್ಣ ಅವರ ವೃತ್ತಿ ಜೀವನದ ಉಳಿದ ಕಾಲಾವಧಿಯನ್ನು ಲೆಕ್ಕ ಹಾಕಿ ೨.೨೫ ಕೋಟಿ ರೂ. ಪರಿಹಾರವನ್ನು ನಿಗಧಿಪಡಿಸಲಾಗಿತ್ತು. ಇದೊಂದು ಅಪರೂಪದ ಪ್ರಕರಣವಾಗಿದೆ ಎಂದು ವಿಮಾ ಸಂಸ್ಥೆಯಾದ ಚೋಳಮಂಡಲಮ್ ಎಂ.ಎಸ್. ಜನರಲ್ ಇನ್ಶೂರೆನ್ಸ್ ಕಂಪೆನಿ ವಕೀಲ ಕೆ.ಡಿ. ದಯಾನಂದ್ ಹೇಳಿದರು.