ಶನಿವಾರಸಂತೆ, ಸೆ. ೧೪: ಶನಿವಾರಸಂತೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘ ೨೦೨೨-೨೩ ನೇ ಸಾಲಿನಲ್ಲಿ ಖರ್ಚು- ವೆಚ್ಚಗಳು ಅಧಿಕವಾಗಿ, ವ್ಯಾಪಾರ-ವಹಿವಾಟು ಕಡಿಮೆಯಾಗಿದ್ದರೂ ರೂ. ೩೦,೫೧,೯೮೩ ಲಕ್ಷ ನಿವ್ವಳ ಲಾಭ ಗಳಿಸಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಎಸ್.ಸಿ. ಶರತ್ ಶೇಖರ್ ಹೇಳಿದರು.
ಸಂಘದ ಸಭಾಂಗಣದಲ್ಲಿ ನಡೆದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘ ೨೦೨೨-೨೩ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸದಸ್ಯರ ಸಹಕಾರದಿಂದ ಸಂಘ ಬೃಹತ್ ಗೋದಾಮು ನಿರ್ಮಿಸು ವಂತಾಯಿತು. ಪ್ರಸ್ತುತ ಸಭೆಯಲ್ಲಿ ವ್ಯವಹಾರ, ಸಾಲ ಸೌಲಭ್ಯ ಬಗ್ಗೆ ನಡೆದ ಚರ್ಚೆಗಳನ್ನು ಪರಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಮುಂದೆಯೂ ಸದಸ್ಯರು ಸಂಘದಲ್ಲೇ ಠೇವಣಿ ಇಟ್ಟು ವ್ಯಾಪಾರ-ವಹಿವಾಟು ಮಾಡಿ ಸಂಘದ ಬೆಳವಣಿಗೆಗೆ ಸಹಕಾರ ನೀಡಬೇಕು. ಜಿಲ್ಲೆಯ ೩ ಉತ್ತಮ ಸಹಕಾರ ಸಂಘಗಳಲ್ಲಿ ಶನಿವಾರಸಂತೆಯ ಸಹಕಾರ ಸಂಘ ೩ನೇ ಸ್ಥಾನದಲ್ಲಿದೆ. ಮುಂದಿನ ಸಾಲಿನಲ್ಲೂ ಸರ್ವ ಸದಸ್ಯರು ಸಹಕಾರ ನೀಡಿ ಅಭಿವೃದ್ಧಿಗೆ ಶ್ರಮಿಸ ಬೇಕು ಎಂದು ಕರೆ ನೀಡಿದರು.
ರೈತರ ಸಾಲ ಸೌಲಭ್ಯ, ಸಾಲ ಮರುಪಾವತಿ, ಅಂಗಡಿ ಮಳಿಗೆಗಳ ಬಾಡಿಗೆ ವಸೂಲಾತಿ, ಕ್ಷೇಮ ನಿಧಿ, ಡಿವಿಡೆಂಡ್ ಹೆಚ್ಚಿಸುವುದು ಇತ್ಯಾದಿ ವಿಷಯಗಳ ಬಗ್ಗೆ ಸದಸ್ಯರು ಆಡಳಿತ ಮಂಡಳಿ ಜತೆ ಸುದೀರ್ಘ ಚರ್ಚೆ ನಡೆಸಿದರು. ಸದಸ್ಯರಾದ ರಂಗಸ್ವಾಮಿ, ಮಹಮ್ಮದ್ ಪಾಶ, ಚಂದ್ರೇಗೌಡ, ಕೊಮಾರಪ್ಪ, ಎ.ಎಂ. ಆನಂದ್, ಟಿ.ಆರ್. ಪುರುಷೋತ್ತಮ್, ಆರ್.ಪಿ. ಲಕ್ಷö್ಮಣ್, ಚಂದ್ರಕಾAತ್, ಮಹಮ್ಮದ್ ಗೌಸ್ ಇತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಡಿವಿಡೆAಟ್ ಹಣದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸರ್ವ ಸದಸ್ಯರು ಶೇ. ೧೦ ಸಾಲದು ಹೆಚ್ಚು ಮಾಡುವಂತೆ ಪಟ್ಟು ಹಿಡಿದರು. ಮಣಿದ ಸಂಘದ ಅಧ್ಯಕ್ಷ ಶರತ್ ಶೇಖರ್ ಹಾಗೂ ಆಡಳಿತ ಮಂಡಳಿ ಡಿವಿಡೆಂಟ್ ಶೇ.೨೦ ನೀಡುವುದಾಗಿ ಘೋಷಿಸಿದರು.
ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀತುಚಂದ್ರ ಸಂಘದ ವಾರ್ಷಿಕ ವರದಿ ಮಂಡಿಸಿದರು. ಸಂಘದ ನಿರ್ದೇಶಕರಾದ ಟಿ.ಆರ್. ಗಿರೀಶ್, ಜೆ.ಸಿ. ಲೋಕೇಶ್, ಬಿ.ಕೆ. ಚಂದ್ರು, ಕೆ.ಪಿ. ಪುಷ್ಪಾ, ಡಿ.ಈ. ಬಸಪ್ಪ, ಎಸ್.ಎನ್. ರಘು, ಸಿ.ಜೆ. ಗಿರೀಶ್, ಎಸ್.ಯು. ಆನಂದ್, ಎ.ಆರ್. ರಕ್ಷಿತ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀತುಚಂದ್ರ, ಡಿ.ಸಿ.ಸಿ. ಬ್ಯಾಂಕ್ ಮೇಲ್ವಿಚಾರಕ ಭರತ್, ಕೆ.ಡಿ.ಸಿ.ಸಿ. ಬ್ಯಾಂಕ್ ಪ್ರತಿನಿಧಿ ಅಂಜಲಿ, ಮೇಲ್ವಿಚಾರಕಿ ಎಸ್.ಕೆ. ಹರಿಣಿ, ಸಿಬ್ಬಂದಿ ಅಶೋಕ್ ಕುಮಾರ್, ಎಂ. ದೀಪಕ್, ಸಿ.ಬಿ. ಸಚಿತಾ, ಎ.ವಿ. ದಿವಾಕರ್, ಸಂಜಯ್, ಈರೇಶ್, ಪ್ರದೀಪ್, ಹೇಮಂತ್ ಕುಮಾರ್, ಅಭಿಷೇಕ್, ಶ್ರೀಮಂತ್ ಹಾಜರಿದ್ದರು.