ಗೋಣಿಕೊಪ್ಪ ವರದಿ, ಸೆ. ೧೪: ಜೈವಿಕ ಇಂಧನ ಬಳಕೆ ಮತ್ತು ಅದರ ಉಪಯೋಗಗಳು ಮುಂದಿನ ಪೀಳಿಗೆಗೆ ಮಾದರಿ ಎಂದು ಮೈಸೂರು ಎನ್‌ಐಇ ಕ್ರೆöÊಸ್ಟ್ ಕಾಲೇಜು ಮುಖ್ಯಸ್ಥ ಎಸ್. ಶ್ಯಾಂ ಸುಂದರ್ ಅಭಿಪ್ರಾಯಪಟ್ಟರು.

ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾಲಯ, ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಜೈವಿಕ ಇಂಧನ ಸಂಶೋಧನಾ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರ ಸಹಯೋಗದಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವಿಶ್ವ ಜೈವಿಕ ಇಂಧನ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಮುಖ್ಯಸ್ಥ ಡಾ. ಜಿ.ಎಂ. ದೇವಗಿರಿ ಉದ್ಘಾಟಿಸಿದರು. ರೈತ ಮಹಿಳೆಯರಿಗೆ ಜೈವಿಕ ಇಂಧನ ಮೂಲದ ಸಸಿಗಳನ್ನು ವಿತರಿಸಲಾಯಿತು.

ಜೈವಿಕ ಇಂಧನ ಸಂಶೋಧನಾ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರದ ಸಂಯೋಜಕ ಡಾ. ಟಿ.ಎಸ್. ಗಣೇಶ್ ಪ್ರಸಾದ್, ಬಿಎಸ್‌ಹೆಚ್ ವಿಭಾಗ ಮುಖ್ಯಸ್ಥೆ ಡಾ. ಭಾಗಿರತಿ, ಎಫ್‌ಬಿಟಿಐ ವಿಭಾಗ ಮುಖ್ಯಸ್ಥ ಡಾ. ಕೆಂಚರೆಡ್ಡಿ ಇದ್ದರು.