ಮಡಿಕೇರಿ, ಸೆ. ೧೪: ಸ್ಥಳೀಯ ಲಯನ್ಸ್ ಸಂಸ್ಥೆಯ ಆಶ್ರಯದಲ್ಲಿ ಮಡಿಕೇರಿ ಎಲ್‌ಐಸಿ ಆವರಣದಲ್ಲಿ ಸಸಿಗಳನ್ನು ನೆಡುವುದರ ಮೂಲಕ ವನಮಹೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಮಧುಕರ್ ಶೇಟ್, ಕಾರ್ಯದರ್ಶಿ ನಟರಾಜು ಕೇಸ್ತುರ್, ಖಜಾಂಚಿ ರವಿ ಟಿ.ಬಿ, ಪ್ರಾಂತಿಯ ಅಧ್ಯಕ್ಷ ನವೀನ್ ಅಂಬೆಕಲ್ಲು, ಹಿರಿಯ ಸದಸ್ಯರಾದ ಜೆ.ವಿ. ಕೋಟಿ, ಸೋಮಣ್ಣ ಪಿ.ಪಿ, ದಾಮೋದರ್ ಕೆ.ಕೆ, ಮೋಹನಕುಮಾರ್, ಸಂತೋಷ್ ಬಿ.ಎಂ, ಆನಂದ ಹಾಗೂ ವ್ಯವಸ್ಥಾಪಕರಾದ ದೀಪಕ್ ಕುಮಾರ್ ಹಾಜರಿದ್ದರು.