ಪೊನ್ನAಪೇಟೆ, ಸೆ. ೧೪: ಪೊನ್ನಂಪೇಟೆ ಪಟ್ಟಣ ಸಹಕಾರ ಬ್ಯಾಂಕ್ನ ೭೨ನೇ ವಾರ್ಷಿಕ ಮಹಾಸಭೆ ಪೊನ್ನಂಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಬ್ಯಾಂಕಿನ ಅಧ್ಯಕ್ಷ ಚಿರಿಯಪಂಡ ಕೆ. ಉತ್ತಪ್ಪನವರ ಅಧ್ಯಕ್ಷತೆಯಲ್ಲಿ ಜರುಗಿತು.
೨೦೨೨-೨೩ನೇ ಸಾಲಿನಲ್ಲಿ ೨೫೫೯ ಸದಸ್ಯರನ್ನು ಹೊಂದಿದ್ದು, ಸದಸ್ಯರ ಅನುಕೂಲಕ್ಕಾಗಿ ಗಿರವಿ ಸಾಲ, ಜಾಮೀನು ಸಾಲ, ವಾಹನ ಸಾಲ, ಆಭರಣ ಸಾಲ, ವ್ಯಾಪಾರ ಸಾಲ, ನೀಡುತ್ತಿದ್ದು, ವರದಿ ವರ್ಷದಲ್ಲಿ ರೂ. ೪೮೭೮.೪೫ ಲಕ್ಷ ಠೇವಣಿ ಸಂಗ್ರಹಿಸಿದ್ದು, ಹಿರಿಯ ನಾಗರಿಕರಿಗೆ ಶೇ. ೦.೫೦ ರಷ್ಟು ಹೆಚ್ಚಿನ ಬಡ್ಡಿ ನೀಡುತ್ತಿದ್ದು, ದುಡಿಯುವ ಬಂಡವಾಳ ರೂ. ೬೩೫೭.೨೩ ಲಕ್ಷವಿದ್ದು, ವರದಿ ಸಾಲಿನಲ್ಲಿ ರೂ. ೨೬೦೫ ಲಕ್ಷ ಸಾಲ ನೀಡಿ ಶೇ. ೮೨.೮೧ ಸಾಲವನ್ನು ವಸೂಲಾತಿ ಮಾಡಿ ನಿವ್ವಳ ಲಾಭ ೬೪.೨೦ ಲಕ್ಷದೊಂದಿಗೆ ಆಡಿಟ್ ವರ್ಗೀಕರಣದಲ್ಲಿ ‘ಎ’ ತರಗತಿಯನ್ನು ಪಡೆದು ತನ್ನ ಸದಸ್ಯರಿಗೆ ಶೇ. ೧೦ ಡಿವಿಡೆಂಟ್ ನೀಡುವುದಾಗಿ ಅಧ್ಯಕ್ಷರು ಮಹಾಸಭೆಗೆ ಮಾಹಿತಿ ನೀಡಿದರು.
ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಟಿ.ಟಿ. ಶಕುನ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ನೂತನ ವ್ಯವಸ್ಥಾಪಕರಾದ ಟಿ.ಪಿ. ಧರ್ಮೇಂದ್ರ ಲೆಕ್ಕ ಪತ್ರ ಮತ್ತು ಆಡಿಟ್ ವರದಿಯನ್ನು ಮಂಡಿಸಿದರು. ಸದಸ್ಯರುಗಳಾದ ಸಿ.ಕೆ. ಸೋಮಯ್ಯ, ಕೆ.ಎ. ವಿಠಲ, ಮುದ್ದಿಯಡ ಸೋಮಯ್ಯ, ವ್ಯವಸಾಯ ಸಂಘದ ಅಧ್ಯಕ್ಷ ಕಂದಾ ಸುಬ್ಬಯ್ಯ, ಮಾರಾಟ ಸಂಘದ ಅಧ್ಯಕ್ಷ ಎಂ.ಡಿ ಗಣಪತಿ ಸೌಹಾರ್ದ ಬ್ಯಾಂಕಿನ ಅಧ್ಯಕ್ಷ ಅರಮಣಮಾಡ ಬೋಪಯ್ಯ, ಕೆ.ಎಂ. ಗಣಪತಿ ಸೇರಿದಂತೆ ಹಲವು ಸದಸ್ಯರು ಸಭೆಯಲ್ಲಿ ಬ್ಯಾಂಕಿನ ಪ್ರಗತಿಗಾಗಿ ಸಲಹೆ ಸೂಚನೆ ನೀಡಿದರು. ಅಮೂಲ್ಯ ಪ್ರಾರ್ಥಿಸಿ ಬ್ಯಾಂಕಿನ ಉಪಾಧ್ಯಕ್ಷ ಕೋಳೆರ ದಯಾ ಚಂಗಪ್ಪ ವಂದಿಸಿದರು.