ಮಡಿಕೇರಿ, ಸೆ. ೧೪: ಕೊಡಗು ಟೇಬಲ್ ಟೆನ್ನಿಸ್ ಅಸೋಸಿಯೇಶನ್ ವತಿಯಿಂದ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿ ಆಯೋಜನೆ ಮಾಡಲಾಗಿದ್ದು, ತಾ. ೨೯, ೩೦ ಹಾಗೂ ಅಕ್ಟೋಬರ್ ೧ ರಂದು ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅಸೋಸಿಯೇಶನ್ ಅಧ್ಯಕ್ಷ ಪ್ರವೀಣ್ ಶೇಠ್, ಮೂರು ದಿನಗಳ ಕಾಲ ಮಡಿಕೇರಿಯ ಜ. ತಿಮ್ಮಯ್ಯ ಒಳಾಂಗಣ ಕ್ರೀಡಾಂಗಣ ದಲ್ಲಿ ಪಂದ್ಯಾವಳಿಗಳು ನಡೆಯಲಿವೆ. ವಿಶೇಷವಾಗಿ ಮಕ್ಕಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಕ್ಕಳ ೧೪ ವರ್ಷ ಒಳಗಿನ ಬಾಲಕ ಮತ್ತು ಬಾಲಕಿಯರನ್ನೊಳಗೊಂಡ ಸಬ್ ಜೂನಿರ‍್ಸ್ ಹಾಗೂ ೧೮ ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಜೂನಿರ‍್ಸ್ ವಿಭಾಗ ಮಾಡಲಾಗಿದ್ದು, ಈ ಎರಡೂ ವಿಭಾಗಗಳಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಯಾವದೇ ಪ್ರವೇಶ ಶುಲ್ಕ ಇರುವದಿಲ್ಲ ಎಂದು ತಿಳಿಸಿದರು. ಇನ್ನುಳಿದಂತೆ ಮುಕ್ತ ಪುರುಷ ಹಾಗೂ ಮಹಿಳೆಯರಿಗೆ ಸಿಂಗಲ್ಸ್ ಮತ್ತು ಡಬಲ್ಸ್, ಮುಕ್ತ ಮಿಕ್ಸೆಡ್ ಡಬಲ್ಸ್ ಹಾಗೂ ೫೦ ವರ್ಷ ಮೇಲ್ಪಟ್ಟ ವಯಸ್ಕರಿಗೆ ಪ್ರತ್ಯೇಕ ವಿಭಾಗದಲ್ಲಿ ಪಂದ್ಯಾವಳಿಗಳು ನಡೆಯಲಿವೆ. ಪಂದ್ಯಾವಳಿಯಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿಕೊಳ್ಳಲು ತಾ.೨೦ ಕೊನೆಯ ದಿನವಾಗಿದೆ. ನೋಂದಾವಣಿ ಹಾಗೂ ಮಾಹಿತಿ ಗಾಗಿ ಮೊ. ೯೮೪೫೬೦೬೭೮೪, ೯೮೮೦೦ ೧೭೦೦೩, ೯೮೮೦೦೭೩೪೪೦ ಸಂಪರ್ಕಿಸ ಬಹುದಾಗಿದೆ. ಪಂದ್ಯಾವಳಿಯು ಬೆಸ್ಟ್ ಆಫ್ ತ್ರೀ ಹಂತದಲ್ಲಿ ನಡೆಯಲಿದ್ದು, ಕ್ವಾರ್ಟರ್ ಫೈನಲ್ಸ್ ಬಳಿಕ ಬೆಸ್ಟ್ ಆಫ್ ಫೈವ್ ಹಂತದಲ್ಲಿ ನಡೆಯಲಿದೆ ಎಂದು ಹೇಳಿದರು. ಪಂದ್ಯಾವಳಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ವಿಣಾ ಅವರು ಉದ್ಘಾಟನೆ ಮಾಡಲಿದ್ದು, ಅತಿಥಿ ಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಕೆ.ರಾಮರಾಜನ್ ಉಪಸ್ಥಿತ ರಿರುವರು ಎಂದು ಹೇಳಿದರು. ಗೋಷ್ಠಿಯಲ್ಲಿ ಅಸೋಸಿಯೇಶನ್ ಗೌರವ ಅಧ್ಯಕ್ಷ ಮೊಹಮ್ಮದ್ ಆಸಿಫ್, ಖಜಾಂಚಿ ಕುಮರೇಶ್, ಸದಸ್ಯ ಪೃಥ್ವಿ ಹಾಜರಿದ್ದರು.