ಶನಿವಾರಸಂತೆ, ಸೆ. ೧೪: ‘ಕೊಡ್ಲಿ ಪೇಟೆಯ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘ ೨೦೨೨-೨೩ ನೇ ಸಾಲಿನಲ್ಲಿ ಉತ್ತಮ ಕಾರ್ಯಚಟುವಟಿಕೆ ನಡೆಸಿದ್ದ ಹಿನ್ನೆಲೆಯಲ್ಲಿ ರೂ. ೬೧ ಲಕ್ಷ ನಿವ್ವಳ ಲಾಭ ಗಳಿಸಿದೆ. ಸಾಲ ಪಡೆದ ಸದಸ್ಯರು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು’ ಎಂದು ಸಂಘದ ಅಧ್ಯಕ್ಷ ಕೆ.ಪಿ.ಪ್ರಸನ್ನ ಹೇಳಿದರು.
ಸಮೀಪದ ಕೊಡ್ಲಿಪೇಟೆಯ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಕೊಡ್ಲಿಪೇಟೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ೨೦೨೨-೨೩ನೇ ಸಾಲಿನ ಪ್ಯಾಕ್ಸ್ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾ ಡಿದರು. ಮಹಾಸಭೆ ಆರಂಭದಲ್ಲೇ ನಕಲಿ ಚಿನ್ನ ಅಡವಿಟ್ಟು ಚಿನ್ನಾಭರಣ ಸಾಲ ಪಡೆದು ಸಂಘಕ್ಕೆ ವಂಚನೆ ಮಾಡಿದ ಪ್ರಕರಣ ಸದಸ್ಯರ ತೀವ್ರ ಚರ್ಚೆಗೆ ಗ್ರಾಸ ಒದಗಿಸಿತು. ಸದಸ್ಯ ಜಯಪ್ಪ ನಕಲಿ ಚಿನ್ನ ಅಡವಿಟ್ಟ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
ನಿರ್ದೇಶಕ ಎಸ್.ಡಿ.ತಮ್ಮಯ್ಯ ಮಾತನಾಡಿ, ಬ್ಯಾಂಕಿನ ಚಿನ್ನ ಪರೀಕ್ಷೆ ಮಾಡುವ ವ್ಯಕ್ತಿ ನಕಲಿ ಚಿನ್ನ ಇಟ್ಟು ಸಾಲ ಪಡೆದಿದ್ದ. ಈ ಕುರಿತು ಕಾರ್ಯದರ್ಶಿಗೆ ಸಂಶಯ ಬಂದು ಮತ್ತೆ ಬೇರೆ ಪರೀಕ್ಷಕರಿಂದ ಚಿನ್ನ ಪರಿಶೀಲಿಸಿದಾಗ ನಕಲಿ ಎಂದು ಗೊತ್ತಾಗಿ ಮಂಜೂರು ಮಾಡಿದ್ದ ಸಾಲವನ್ನು ಹಿಂಪಡೆದಿದ್ದಾರೆ ಎಂದು ಹೇಳಿದರು.
ಸದಸ್ಯರಾದ ಭಗವಾನ್, ಮಹೇಶ್ ಹಾಗೂ ಇಂದ್ರೇಶ್ ಮಾತನಾಡಿ, ಸಂಘಕ್ಕೆ ವಂಚನೆ ಮಾಡಲು ಯತ್ನಿಸಿದ ವ್ಯಕ್ತಿ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿ, ಬ್ಯಾಂಕಿಗೆ ಆದ ನಷ್ಟವನ್ನು ಆಡಳಿತ ಮಂಡಳಿ ಭರಿಸಬೇಕು ಎಂದು ಆಗ್ರಹಿಸಿದರು.
ಬ್ಯಾಂಕಿಗೆ ವಂಚನೆ ಮಾಡಿದ ವ್ಯಕ್ತಿ ಹಾಗೂ ಸಾಲ ನೀಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದ ಸದಸ್ಯರು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸ್ಪಷ್ಟನೆ ನೀಡಿದ ಅಧ್ಯಕ್ಷ ಪ್ರಸನ್ನ ಅವರು “ಈ ಪ್ರಕರಣ ನ್ಯಾಯಾಲ ಯದಲ್ಲಿ ಇದೆ. ತೀರ್ಪು ಬಂದ ನಂತರ ಮುಂದಿನ ಕ್ರಮ ಕೈಗೊಳ್ಳ ಲಾಗುವುದು ಎಂದು ಭರವಸೆ ನೀಡಿದರು.
ಸಂಘದ ವತಿಯಿಂದ ಮಾರಾಟ ಮಾಡಿದ ಗೊಬ್ಬರ ಕಳಪೆ ಎಂಬುದು ಸಾಬೀತಾಗಿದೆ. ಆದರೆ, ಗೊಬ್ಬರ ಖರೀದಿಸಿದ ರೈತರಿಗೆ ತುಂಬ ನಷ್ಟ ಉಂಟಾಗಿದೆ. ಆದ್ದರಿಂದ ಗೊಬ್ಬರ ಖರೀದಿಸಿದ ರೈತರಿಗೆ ಸಂಘದಿAದ ಸೂಕ್ತ ಪರಿಹಾರ ಕೊಡಬೇಕು ಇಲ್ಲವೇ ಖರೀದಿಸಿದ ಹಣವನ್ನಾದರೂ ವಾಪಸ್ಸು ಕೊಡಿ ಎಂದು ಭಗವಾನ್ ಮತ್ತೆ ಒತ್ತಾಯಿಸಿದರು.
ಸ್ಪಂದಿಸಿದ ಅಧ್ಯಕ್ಷ ಪ್ರಸನ್ನ, ಈಗಾಗಲೇ ಈ ಪ್ರಕರಣ ಸಹ ನ್ಯಾಯಾಲಯದಲ್ಲಿದ್ದು ತೀರ್ಪು ಬರಬೇಕು. ಏನೇ ಆದರೂ ಆಡಳಿತ ಮಂಡಳಿ ರೈತರ ಹಿತ ಕಾಯಲು ಬದ್ಧವಾಗಿದೆ ಎಂದರು.
ಸದಸ್ಯ ವೇದಕುಮಾರ್ ಮಾತನಾಡಿ, ಸರ್ಕಾರದ ನಿಯಮದಂತೆ ಪಂಚಾಯಿತಿಗೊAದು ಸಹಕಾರ ಸಂಘ ಎಂಬ ನಿಯಮದಡಿ ಬ್ಯಾಡಗೊಟ್ಟ ಗ್ರಾಮಕ್ಕೆ ಪ್ರತ್ಯೇಕ ಸಂಘ ರಚನೆ ಮಾಡಬೇಕು ಎಂದು ಮನವಿ ಮಾಡಿದರು. ಕೆಲವು ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು.
ಸದಸ್ಯ ಹನೀಫ್ ಮಾತನಾಡಿ, ಬ್ಯಾಡಗೊಟ್ಟದಲ್ಲಿ ಜನರ ಅನುಕೂಲಕ್ಕಾಗಿ ನ್ಯಾಯಬೆಲೆ ಅಂಗಡಿ ತೆರೆಯಬೇಕು ಎಂದು ಆಗ್ರಹಿಸಿದರು. ೨೦೨೨-೨೩ ನೇ ಸಾಲಿನ ಲೆಕ್ಕ ಪರಿ ಶೋಧನಾ ವರದಿಯಲ್ಲಿ ಲೋಪ ದೋಷಗಳಿದ್ದು ಸರಿಪಡಿಸುವಲ್ಲಿ ಆಡಳಿತ ಮಂಡಳಿ ನಿರ್ಲಕ್ಷö್ಯ ತೋರಿದೆ. ಬೇರೆ ಪ್ಯಾಕ್ಸ್ ಸಂಸ್ಥೆ ಆಡಿಟ್ ವರದಿಯನ್ನು ಕಾಪಿ ಮಾಡಿ ದ್ದೀರಿ. ಈ ನ್ಯೂನತೆ ಸರಿಪಡಿಸಿ ಕೊಂಡು ಮತ್ತೆ ಸಭೆ ಕರೆಯಲು ಕ್ರಮ ಕೈಗೊಳ್ಳಿ ಎಂದು ಜಯಪ್ಪ, ಮಂಜುನಾಥ್, ರೇವಣ್ಣ, ಭಗವಾನ್ ಇತರ ಸದಸ್ಯರು ಒತ್ತಾಯಿಸಿದರು.
ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯು.ವೈ. ಮಂಜುನಾಥ್ ಸಂಘದ ವರದಿ ಮಂಡಿಸಿ ಅನುಮೋದನೆ ಪಡೆದರು. ೨೦೨೩-೨೪ ನೇ ಸಾಲಿನ ಅಂದಾಜು ಆಯವ್ಯಯ ಪಟ್ಟಿಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಬಹುಮಾನ ವಿತರಿಸಲಾಯಿತು.
ಸಂಘದ ಉಪಾಧ್ಯಕ್ಷ ಬಿ.ಈ. ರಾಜು, ನಿರ್ದೇಶಕರಾದ ಬಿ.ಕೆ.ಚಿಣ್ಣಪ್ಪ, ಬಿ.ಕೆ,ಯತೀಶ್, ಎ.ಎನ್.ಭಾನುಮತಿ, ಜಿ.ಕೆ. ತೇಜಕುಮಾರ್, ಬಿ.ಪಿ. ಅಶೋಕ್, ಬಿ.ಕೆ.ರಂಜಿತಾ, ಕೆ.ಎಂ.ವಹಾಬ್, ಕೆ.ವಿ. ಮಲ್ಲೇಶ್, ಕೆ.ಬಿ. ಸುಬ್ರಮಣ್ಯಾಚಾರ್, ಜಿಲ್ಲಾ ಕೇಂದ್ರ ಬ್ಯಾಂಕಿನ ಪ್ರತಿನಿಧಿ ಎಂ.ಕೆ. ವೆಂಕಟೇಶ್, ಪ್ರಬಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಡಿ. ಅಮೃತ್, ಸಿಬ್ಬಂದಿ ಶಶಿಧರ್ ಇದ್ದರು.