ಕೇಂದ್ರ ಸರ್ಕಾರದ ಡಿಲಿಮಿಟೇಷನ್ ಆಕ್ಟ್ ೨೦೦೨ರ (೩೩) ನಿಬಂಧನೆಗಳಿಗೆ ಅನುಸಾರವಾಗಿ ೨೦೨೬-೨೭ರ ಜನಗಣತಿಯ ನಂತರ ಅಸ್ತಿತ್ವಕ್ಕೆ ಬರಲಿರುವ ಡಿಲಿಮಿಟೇಷನ್ ಕಮಿಷನ್, ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಮರು ವಿಂಗಡಣೆಯ ಅಧಿಕಾರ ಹೊಂದಿರುತ್ತದೆ. ೨೦೦೨ರ ನಂತರ ೨೫ ವರ್ಷಗಳಿಗೊಮ್ಮೆ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಡಿಲಿಮಿಟೇಷನ್ ಕಮಿಷನ್ ಸದ್ಯದ ೫೫೦ ಲೋಕಸಭಾ ಸ್ಥಾನಗಳನ್ನು ೯೦೦ ಸ್ಥಾನಗಳಿಗೆ ಹೆಚ್ಚಿಸುವ ಗುರಿ ಹೊಂದಿದೆ.

ಈ ನಿಟ್ಟಿನಲ್ಲಿ ಕೊಡಗಿನಲ್ಲಿ ಕೊಡವ ಭಾಷಾ ಅಲ್ಪಸಂಖ್ಯಾತರ ಆಧಾರದಲ್ಲಿ (ಐiಟಿgಟಿisಣiಛಿ ಒiಟಿoಡಿiಣಥಿ) ಪ್ರತ್ಯೇಕ ಲೋಕಸಭಾ ಸ್ಥಾನ ಲಭಿಸಿದಲ್ಲಿ ಆಯ್ಕೆಯಾಗುವ ಕೊಡವ ಭಾಷಿಕ ಅಭ್ಯರ್ಥಿ ರಾಜ್ಯಸಭಾ ಸ್ಥಾನಮಾನ ಗಳಿಸಲು ಶಕ್ತನಾಗಿರುತ್ತಾನೆ.

ಅತ್ಯಂತ ಸೂಕ್ಷö್ಮ ಬುಡಕಟ್ಟಿನ ಮೂಲದ ಕೊಡವರ ಮತ್ತು ಕೊಡವ ಸಂಸ್ಕೃತಿಯೊAದಿಗೆ ಅವಿನಾಭಾವ ಸಂಬAಧ ಹೊಂದಿರುವ ಒಟ್ಟಾರೆ ೧೯ ಮೂಲ ನಿವಾಸಿ ಪಂಗಡಗಳ ಜನಸಂಖ್ಯೆ ಅತ್ಯಂತ ವೇಗವಾಗಿ ಕುಸಿಯುತ್ತಿರುವುದು. ಯುವ ಜನಾಂಗ ಕೃಷಿಯೊಂದರಿAದಲೇ ಬದುಕು ಸಾಗಿಸಲಾಗದೆ ನಗರಗಳತ್ತ ಮುಖ ಮಾಡಿರುವುದು ಹಾಗೂ ತದನಂತರ ಕೃಷಿ ಭೂಮಿ ಮಾರಾಟ ಮಾಡಿ ನಗರಗಳಲ್ಲೇ ನೆಲೆಸುತ್ತಿರುವುದು ಕೊಡಗಿನ ಒಳಗೆ ಕೊಡವ ಭಾಷಿಕರ ಅಸ್ತಿತ್ವಕ್ಕೆ ದಿನೇ ದಿನೇ ಸವಾಲೊಡ್ಡುತ್ತಿದೆ.

ಕೊಡವ ಭಾಷಿಕ ಮೂಲನಿವಾಸಿಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದ ಬಾಚರಣಿಯಂಡ ಅಪ್ಪಣ್ಣ ಅವರ ಪ್ರಕಾರ (ಂಟಠಿhಚಿbeಣiಛಿಚಿಟ ಔಡಿಜeಡಿ) ಸದ್ಯ ಅಮ್ಮಕೊಡವ, ಐರಿ, ಕಣಿಯ, ಕಾಪಳ, ಕುಡಿಯ (ಪೂಮಲೆ). ಕೆಂಬಟ್ಟಿ, ಕೊಡವ, ಕೊಯವ, ಕೋಲೆಯ, ಗೊಲ್ಲ, ನಾಯರ್, ನಾಯಿಂದ, ಪಣಿಕ, ಬಣ್ಣ, ಬಾಣಿಯ, ಬೂಣೆಪಟ್ಟ, ಮಡಿವಾಳ, ಮಲಿಯ, ಮಾರಂಗಿ, ಮೇದ, ಹೆಗ್ಗಡೆ ಹೀಗೆ ೨೧ ಮೂಲನಿವಾಸಿಗಳು ಸದ್ಯ ಪಂಗಡಗಳ ಮಧ್ಯೆ ಸಮೀಕರಣಗೊಂಡು ೧೯ ಪಂಗಡಗಳು ಮಾತ್ರ ಅಸ್ತಿತ್ವದಲ್ಲಿರುವರು.

ಸದ್ಯದ ಪರಿಸ್ಥಿತಿಯಲ್ಲಿ ಕೊಡವ ಭಾಷಿಕರು ಈ ಬಾರಿಯ ಲೋಕಸಭಾ ಅಭ್ಯರ್ಥಿಗಳು ಯಾರಾಗಬಹುದೆಂದು ಚಿಂತಿಸುವ ಬದಲು ನಮ್ಮೆಲ್ಲರ ಅಸ್ತಿತ್ವ ಉಳಿಸಿಕೊಳ್ಳಲು ಮುಂದೆ ಬರಲಿರುವ ಡಿಲಿಮಿಟೇಷನ್ ಕಮಿಷನ್ (೨೦೨೬)ನ ಮುಂದೆ ನಾವುಗಳು ಕೊಡಗಿಗೆ ಪ್ರತ್ಯೇಕ ಲೋಕಸಭಾ ಸ್ಥಾನ ಮತ್ತು ಒಂದು ವಿಧಾನಸಭಾ ಸ್ಥಾನ, ಕೊಡವ ಭಾಷಿಕರಿಗೆ ಮೀಸಲಿಡುವಂತೆ, ಕೊಡವ ಭಾಷಿಕರೆಲ್ಲರೂ ಒಗ್ಗಟ್ಟಾಗಿ ಇತರ ಭಾಷಿಕ ಸಮುದಾಯಗಳ ಸಹಕಾರದೊಂದಿಗೆ ಚಿಂತನೆ / ಪ್ರಸ್ತಾಪ ಮಾಡಬೇಕಾದ ಅವಶ್ಯಕತೆ ಮತ್ತು ಕೊಡಗು ಲೋಕಸಭಾ ಕ್ಷೇತ್ರಕ್ಕೆ ಕೋಟ್ಯಂತರ ಜನರ ಜೀವನದಿಯನ್ನು ಸದಾ ನೆನಪಿಸುವಂತೆ ‘‘ಕಾವೇರಿ ಲೋಕಸಭಾ ಕ್ಷೇತ್ರ’’ ಎಂದು ನಾಮಕರಣ ಮಾಡಲು ಚಿಂತನೆ / ಪ್ರಸ್ತಾಪ ಮಾಡಬೇಕಾದ ಅವಶ್ಯಕತೆ ಇದೀಗ ನಮ್ಮ ಮುಂದಿದೆ.

ಹೀಗೆ ಕೊಡಗು ರಾಜ್ಯವಾಗಿದ್ದ ಕಾಲದಲ್ಲಿ ಶ್ರೀ ಸರದಾರ್ ವಲ್ಲಭಭಾಯಿ ಪಟೇಲರಿಂದ ಲೋಕಸಭೆಯಲ್ಲಿ ಕೊಡಗು ‘ರಾಮರಾಜ್ಯ’ವೆಂಬ ಪ್ರಶಂಸೆಗೆ ಪಾತ್ರವಾಗಿದ್ದುದನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕಾಗುತ್ತದೆ. (೧೯೪೭-೧೯೫೦) ಕರ್ನಾಟಕ ರಾಜ್ಯದೊಂದಿಗೆ (ಅಂದಿನ ಮೈಸೂರು) ವಿಲೀನವಾದಂದಿನಿAದ ಕಳೆದ ಸುಮಾರು ೭ ದಶಕಗಳವರೆಗೆ ಹಿನ್ನಡೆ ಅನುಭವಿಸಿದ್ದೇ ಹೆಚ್ಚು.

ಇತರ ಭಾಷಾ ಅಲ್ಪಸಂಖ್ಯಾತರು (ಉದಾಹರಣೆಗೆ ಫಾರ್ಸಿ ಸಮುದಾಯದವರು) ಮಾತ್ರವಲ್ಲದೆ, ನಿಧಾನವಾಗಿ ಅಳಿವಿನಂಚಿಗೆ ಬರುತ್ತಿರುವ ಕೊಡವ ಭಾಷಿಕರು ಕರ್ನಾಟಕದ ಒಟ್ಟಾರೆ ಜನಸಂಖ್ಯೆಯಲ್ಲಿ ಕೇವಲ ೦.೨೫% ಎಂಬುವುದನ್ನು ಮನಗಂಡು ಕನಿಷ್ಟ ಭಾಷಾ ಅಲ್ಪಸಂಖ್ಯಾತರೆAಬ ದೃಷ್ಟಿಯಿಂದಲಾದರೂ, ಕೊಡವ ಭಾಷಿಕ ಲೋಕಸಭಾ ಅಭ್ಯರ್ಥಿಯೊಬ್ಬರನ್ನು ಆಯ್ಕೆ ಮಾಡುವ ಸಂದರ್ಭ ಒದಗಿಬರುವವರೆಗೆ ಶ್ರಮಿಸಬೇಕಾಗಿದೆ.

ನಮ್ಮ ನೆರೆ ರಾಜ್ಯಗಳಲ್ಲಿ ಇವು ಅಲ್ಲಿನ ಅಧಿಕೃತ ಭಾಷೆಗಳಾಗಿವೆ. ಈ ಪಟ್ಟಿಯಲ್ಲಿ ಕೊಡವ ಭಾಷೆಯೇ ಇಲ್ಲ. ಅಂದರೆ ಅವನತಿಯತ್ತ ಸಾಗುವ ಕೊಡವ ಭಾಷಿಕ ಜನಾಂಗವನ್ನು, ಭಾಷೆ ಅಸ್ಮಿತೆಯನ್ನು ರಕ್ಷಿಸುವ ಜವಾಬ್ದಾರಿಗಳನ್ನು ಇಲ್ಲಿಯವರೆಗೆ ಯಾವ ಸರಕಾರವೂ ನಿರ್ವಹಿಸಿಲ್ಲ.

ಕರ್ನಾಟಕದ ಅಧಿಕೃತ ಅಲ್ಪಸಂಖ್ಯಾತ ಭಾಷೆಗಳ ಪಟ್ಟಿಯಲ್ಲಿ ಕೊಡವ ಭಾಷೆ ಇಲ್ಲವೆಂದಾದರೆ ಯಾವುದೇ ಕಾರಣಕ್ಕೂ, ಏನೇ ಹೋರಾಟ ಮಾಡಿದರೂ ೮ನೇ ಶೆಡ್ಯೂಲ್‌ಗೆ ಒಳಪಡಲು ಸಾಧ್ಯವಿಲ್ಲ.

೨೦೨೬ರ ಜನಗಣತಿಯ ನಂತರ ಬರಲಿರುವ ಡಿಲಿಮಿಟೇಷನ್ ಕಮಿಷನ್‌ನ ಮುಂದೆ ನಾವುಗಳು ಕೊಡವ ಭಾಷಾ ಅಲ್ಪಸಂಖ್ಯಾತ ಆಧಾರದಲ್ಲಿ ಸಮರ್ಥವಾಗಿ ನಮ್ಮ ವಾದ ಮಂಡಿಸಿದಲ್ಲಿ ನಮ್ಮ ಕೊಡವ ಭಾಷಿಕ ಜನಾಂಗ ಉದ್ಯೋಗ, ಜೀವನೋಪಾಯ ಅರಸಿ ಮೈಸೂರು, ಮಂಗಳೂರು, ಬೆಂಗಳೂರು ಹಾಗೂ ರಾಜ್ಯದ ಹೊರಗೆ ದೇಶಾದ್ಯಂತ ರಕ್ಷಣಾಪಡೆಗಳಲ್ಲಿ ಚದುರಿಹೋಗಿರುವುದು ಕೂಡ ಒಂದು ಸವಾಲಾಗಬಹುದು. ಈ ನೆಲೆಗಟ್ಟಿನಲ್ಲಿ ಹೋರಾಡಲು ಈಗಿನಿಂದಲೇ ವೇದಿಕೆಯೊಂದು ಸಿದ್ಧಪಡಿಸಿ ಹೋರಾಟದ ರೂಪುರೇಷೆ ಸಿದ್ಧಪಡಿಸಬೇಕಾಗಿದೆ.

ಈಗ ವಿದೇಶಗಳಲ್ಲಿ ನಾನಾ ಕಾರಣಗಳಿಂದ ಅವರನ್ನು ಹೊರದಬ್ಬಿದಾಗ ಇತ್ತ ಸ್ವದೇಶಕ್ಕೂ ಬರಲಾಗದೆ ಅತ್ತ ವಿದೇಶಗಳಲ್ಲೂ ಇರಲಾರದೆ ಅತಂತ್ರ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಈ ಪರಿಸ್ಥಿತಿ ನಮ್ಮ ಕೊಡಗಿನ ಐನ್‌ಮನೆ (ಬಲ್ಯಮನೆ)ಗಳಿಗೆ ಬರಬಾರದು.

ಒಂದು ಸಮೀಕ್ಷೆಯ ಪ್ರಕಾರ ಬರಲಿರುವ ವರ್ಷಗಳಲ್ಲಿ ತಂತ್ರಜ್ಞಾನದ ಫಲವಾಗಿ ಹಲವು ಸಾವಿರ ಉದ್ಯೋಗಗಳು ಕಣ್ಮರೆಯಾಗಲಿವೆ. ಆ ಸಂದರ್ಭದಲ್ಲಿ ಕೊಡಗಿಗೆ ವಾಪಾಸು ಬಂದು ನೋಡಿದಾಗ ಹಳ್ಳಿಗಳೆಲ್ಲಾ ನಗರಗಳಾಗಿರುತ್ತವೆ. ಇರುವ ಕೃಷಿ ಭೂಮಿ ಕಾಫಿ ತೋಟಗಳೂ ತಂತ್ರಜ್ಞಾನದ ಫಲವಾಗಿ ಹೆಚ್ಚಿನ ಉತ್ಪಾದಕತೆ (Pಡಿoಜuಛಿಣiviಣಥಿ) ಹೊಂದಿರುತ್ತವೆ. ತನ್ನ ತಾಯ್ನೆಲಗಳಲ್ಲಿಯೇ ಬದುಕು ಕಟ್ಟಿಕೊಳ್ಳಲು ಕೃಷಿಗೆ ಸರಕಾರದಿಂದ ಮತ್ತಷ್ಟು ಉತ್ತೇಜನಗಳು ಸಿಗಲಿವೆ ಎಂಬುದನ್ನು ತಿಳಿಹೇಳಬೇಕು.

ನೆರೆಯ ಕೇರಳ ರಾಜ್ಯದ ಜನತೆಯ ಮಾದರಿಯಲ್ಲಿ ಜನರೂ ಜಾಗೃತರಾಗಬೇಕಿದೆ. ಅಂತಿಮವಾಗಿ ಕೊಡಗು, ಕೊಡವ ಭಾಷಿಕರ ಸಂಸ್ಕೃತಿ, ದೇವರಕಾಡುಗಳು, ಕೈಮಡಗಳು, ಮಂದ್‌ಮಾನಿ, ಐನ್‌ಮನೆಗಳು, ಪ್ರಕೃತಿಯನ್ನು ಹತ್ತಿಕ್ಕದೆ ಇಲ್ಲಿನ ಮರಕಾಡುಗಳ ಮಧ್ಯೆ ನಾವು ಬೆಳೆಯುತ್ತಿರುವ ಬೆಳೆಗಳಾದ ಕಾಫಿ, ಏಲಕ್ಕಿ, ಕರಿಮೆಣಸು, ಭತ್ತದ ಗದ್ದೆಗಳು, ಅದಕ್ಕೆ ಪೂರಕವಾಗಿರುವ ನಮ್ಮ ಪುತ್ತರಿ, ಕೈಲ್‌ಪೊಳ್ದ್ನಂತಹ ಹಬ್ಬಗಳು, ನಮ್ಮ ಪ್ರಕೃತಿಯೊಂದಿಗಿನ ಸಂಬAಧ, ಕೊಡವ ಭಾಷಿಕರ ಒಂದಕ್ಕೊAದು ಪೂರಕ, ಅನಿವಾರ್ಯವಾಗಿರುವ ಜೀವನ, ಪಶ್ಚಿಮ ಘಟ್ಟಗಳ ಮಧ್ಯೆ ಶತಮಾನಗಳಿಂದ ಬದುಕಿ ಬಂದಿರುವ ಶೈಲಿ ಇವೆಲ್ಲವೂ ಉಳಿಯಬೇಕಾದರೆ ಮೊದಲು ನಮ್ಮ ಆಡುಭಾಷೆಯಾದ ಕೊಡವ ಭಾಷೆಯನ್ನು ಅಲ್ಪಸಂಖ್ಯಾತ ಭಾಷೆಗಳ ಪಟ್ಟಿಗೆ ಸೇರಿಸಿ ನಮ್ಮ ಆಶೋತ್ತರಗಳನ್ನು ಸಂರಕ್ಷಿಸುವ ಸಮರ್ಥ, ಕೊಡವ ಭಾಷಿಕ ಅಭ್ಯರ್ಥಿಯನ್ನು ಲೋಕಸಭೆಗೆ ಆಯ್ಕೆಮಾಡಿ ಕಳಿಸುವುದರಲ್ಲಿ ಅಡಗಿದೆ. ಆ ಗುರಿ ಮುಟ್ಟಬೇಕಾದರೆ ನಮ್ಮ ಮಧ್ಯೆ ಇರಬಹುದಾದಂತಹ ಮಾನಸಿಕ ಕಂದಕಗಳನ್ನು ಮುಚ್ಚಿ, ಯುವಜನಾಂಗವನ್ನು ಗುರಿಯಾಗಿಸಿಕೊಂಡು ಅವರಿಗೆ ನಾಳಿನ ಸುಂದರ ಕನಸುಗಳನ್ನು ಕಟ್ಟಿಕೊಡುವಲ್ಲಿ ನಾವೆಲ್ಲರೂ ಒಂದಾಗಬೇಕಿದೆ.

- ಪರದಂಡ ಸುಬ್ರಮಣಿ ಕಾವೇರಪ್ಪ

ಅಧ್ಯಕ್ಷರು, ಅಖಿಲ ಕೊಡವ ಸಮಾಜ.