ಉಗ್ರರನ್ನು ಸುತ್ತುವರಿದ ಭಾರತೀಯ ಸೇನೆ

ಶ್ರೀನಗರ, ಸೆ. ೧೪: ಭದ್ರತಾ ಪಡೆ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಲಷ್ಕರ್-ಇ-ತೊಯ್ಯಾ ಉಗ್ರ ಸಂಘಟನೆಯ ಇಬ್ಬರು ಉಗ್ರರನ್ನು ಸುತ್ತುವರಿಯಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಗುರುವಾರ ಮಾಹಿತಿ ನೀಡಿದೆ. ಅನಂತ್‌ನಾಗ್ ಜಿಲ್ಲೆಯ ಗಡೋಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ಆರಂಭವಾದ ಕಾರ್ಯಾಚರಣೆ ಈಗಲೂ ಮುಂದುವರಿದಿದೆ. ಈ ಎನ್‌ಕೌಂಟರ್‌ನಲ್ಲಿ ಭಾರತೀಯ ಸೇನೆಯ ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ದೋನಕ್ ಮತ್ತು ಡಿವೈಎಸ್‌ಪಿ ಹುಮಾಯುನ್ ಭಟ್ ವೀರ ಮರಣವನ್ನಪ್ಪಿದ್ದಾರೆ. ಸೇನೆಯಿಂದ ಸುತ್ತುವರಿಯಲ್ಪಟ್ಟಿರುವ ಇಬ್ಬರು ಎಲ್‌ಇಟಿ ಭಯೋತ್ಪಾದಕರಲ್ಲಿ ಉಗ್ರ ಉಜೈ ಖಾನ್ ಸೇರಿದ್ದಾನೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ. ಭದ್ರತಾ ಪಡೆ ಸಿಬ್ಬಂದಿ ಮತ್ತು ಉಗ್ರರ ನಡುವೆ ನಡೆದ ಎರಡು ಪ್ರತ್ಯೇಕ ಗುಂಡಿನ ಕಾಳಗಗಳಲ್ಲಿ ಸೇನಾ ಕರ್ನಲ್, ಮೇಜರ್, ಪೊಲೀಸ್ ಅಧಿಕಾರಿ, ಪೊಲೀಸ್ ವಿಶೇಷಾಧಿಕಾರಿ ಮತ್ತೊಬ್ಬ ಯೋಧ ಮೃತಪಟ್ಟಿರುವ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ಬುಧವಾರ ನಡೆದಿದೆ. ಈ ವೇಳೆ ಸೈನಿಕರೊಬ್ಬರು ಕಾಣೆಯಾಗಿದ್ದಾರೆ. ದಾಳಿಯಲ್ಲಿ ಇಬ್ಬರು ಉಗ್ರರೂ ಮೃತಪಟ್ಟಿದ್ದು, ಈಚಿನ ದಿನಗಳಲ್ಲಿ ಇಲ್ಲಿ ನಡೆದ ಅತ್ಯಂತ ಭೀಕರ ರಕ್ತಪಾತಗಳಲ್ಲಿ ಈ ಹತ್ಯೆಗಳೂ ಸೇರಿವೆ. ಅನಂತ್‌ನಾಗ್ ಜಿಲ್ಲೆಯ ಗಡೋಲೆ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ಮಂಗಳವಾರ ರಾತ್ರಿ ಕಾರ್ಯಾಚರಣೆ ಆರಂಭಿಸಿದ್ದವು. ಸೇನಾ ಪಡೆಯನ್ನು ಮುನ್ನಡೆಸಿದ್ದ ಕರ್ನಲ್ ಮನ್‌ಪ್ರೀತ್ ಸಿಂಗ್ ಅವರು ಮೊದಲಿಗೆ ಉಗ್ರರ ಮೇಲೆ ದಾಳಿ ನಡೆಸಿದರು. ಉಗ್ರರು ಪ್ರತಿದಾಳಿ ನಡೆಸಿದ ವೇಳೆ ಕರ್ನಲ್ ಸಿಂಗ್, ಮೇಜರ್ ಆಶಿಶ್ ಮತ್ತು ಡಿವೈಎಸ್‌ಪಿ ಹುಮಾಯುನ್ ಭಟ್ ಅವರು ಗಂಭೀರವಾಗಿ ಗಾಯಗೊಂಡರು. ಅವರನ್ನು ಹೆಲಿಕಾಪ್ಟರ್ ಮೂಲಕ ಸೇನಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅವರು ಬದುಕುಳಿಯಲಿಲ್ಲ. ಲಷ್ಕರ್-ಇ-ತೊಯ್ದಾ ಉಗ್ರ ಸಂಘಟನೆಯ ಮಿತ್ರ ಪಡೆ ‘ದಿ ರೆಸಿಸ್ಪಾನ್ಸ್ ಫ್ರೆಂಟ್' (ಟಿಆರ್‌ಎಫ್) ಈ ದಾಳಿಯ ಹೊಣೆ ಹೊತ್ತಿದೆ ಎಂದು ಹೇಳಲಾಗಿದೆ. ಇದಕ್ಕೂ ಮೊದಲು ಜಮ್ಮುವಿನ ರಜೆರಿ ಜಿಲ್ಲೆಯ ಗಡಿಯೊಂದರ ಬಳಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಸೇನಾ ಸಿಬ್ಬಂದಿ, ಪೊಲೀಸ್ ವಿಶೇಷಾಧಿಕಾರಿ ಮತ್ತು ಇಬ್ಬರು ಉಗ್ರರು ಮೃತಪಟ್ಟಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ರಜೆರಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಯೋಧನನ್ನು ರಕ್ಷಿಸಿದ ಭಾರತೀಯ ಸೇನೆಯ ಶ್ವಾನ ‘ಕೆಂಟ್' ಮಂಗಳವಾರ ಸಾವಿಗೀಡಾಗಿತ್ತು.

ಲಿಬಿಯಾ ದುರಂತ-ಸಾವಿನ ಸಂಖ್ಯೆ ೬ ಸಾವಿರಕ್ಕೆ ಏರಿಕೆ

ಲಿಬಿಯಾ, ಸೆ. ೧೪: ಲಿಬಿಯಾದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ಆಫ್ರೀಕಾದ ಲಿಬಿಯಾ ದೇಶದಲ್ಲಿ ಡೇನಿಯಲ್ ಚಂಡಮಾರುತದ ಅಬ್ಬರಕ್ಕೆ ಡೆರ್ನಾ ನಗರವೇ ಧ್ವಂಸವಾಗಿದೆ. ಭಾನುವಾರ ಪೂರ್ವ ಲಿಬಿಯಾಗೆ ಡೇನಿಯಲ್ ಸ್ಲೈಕ್ಲೋನ್ ಅಪ್ಪಳಿಸಿದ್ದು, ಕಂಡುಕೇಳರಿಯದ ಪ್ರವಾಹ ಉಂಟಾಗಿದೆ. ಘೋರ ಅತಿಘೋರ ಪ್ರವಾಹಕ್ಕೆ ಸಿಲುಗಿ ಅಪಾರ ಸಾವು-ನೋವು ಸಂಭವಿಸಿದೆ. ಮನಗೆಳ ಅವಶೇಷಗಳಡಿಯಲ್ಲಿ, ಬೀದಿಗಳಲ್ಲಿ, ಸಮುದ್ರದಲ್ಲಿ, ಎತ್ತ ಕಣ್ಣಾಯಿಸಿದ್ರೂ ಶವಗಳೇ ಕಾಣುತ್ತಿವೆ. ಲಿಬಿಯಾದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ಮೆಡಿಟರೇನಿಯನ್ ಚಂಡಮಾರುತದ ಪ್ರವಾಹದಿಂದ ಬರೊಬ್ಬರಿ ೬ ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ನಾಪತ್ತೆಯಾದವರ ಸಂಖ್ಯೆ ೧೦ ಸಾವಿರ ಗಡಿ ದಾಟಿದೆ. ಪ್ರವಾಹದ ಒತ್ತಡದಿಂದ ಎರಡು ಡ್ಯಾಂಗಳು ಒಡೆದು, ಮೂರು ಬ್ರಿಡ್ಜ್ಗಳ ನೀರು ಸಿಕ್ಕ ಸಿಕ್ಕ ನಗರಗಳನ್ನ ಬಾಚಿಕೊಂಡು ನೀರಿನಲ್ಲಿ ಮುಳುಗಿಸಿಕೊಂಡು ಹೋಗಿವೆ. ರಣಭೀಕರ ಪ್ರವಾಹದಿಂದಾಗಿ ಲಿಬಿಯಾ ಜನರ ಬದುಕು ಬೀದಿಗೆ ಬಿದ್ದಿದೆ. ಒಂದಲ್ಲ, ಎರಡಲ್ಲ ಬರೋಬ್ಬರಿ ೬ ಸಾವಿರ ಜನರ ಜೀವ ತೆಗೆದಿರೋ ಡೆಡ್ಲಿ ಸೈಕ್ಲೋನ್‌ಗೆ ಲಿಬಿಯಾದ ಜನರು ಬೆಚ್ಚಿಬಿದ್ದಿದ್ದಾರೆ. ಈಗಾಗಲೇ ರಕ್ಷಣಾ ತಂಡಗಳ ಸಿಬ್ಬಂದಿ ಬೀದಿ, ಕಟ್ಟಡ ಮತ್ತು ಸಮುದ್ರ ತೀರದಿಂದ ಶವ ಹೊರ ತೆಗೆಯುತ್ತಿದ್ದು, ಇನ್ನೂ ಸ್ಪಷ್ಟವಾಗಿ ಎಷ್ಟು ಜನ ಮೃತಪಟ್ಟಿದ್ದಾರೆ ಎಂಬ ಲೆಕ್ಕ ಸಿಗಲಾರದ ಸ್ಥಿತಿ ನಿರ್ಮಾಣವಾಗಿದೆ.

ಭಾರತ-ಪಾಕ್ ನಡುವೆ ಮಾತುಕತೆ ಅಗತ್ಯ:ಫಾರೂಕ್ ಅಬ್ದುಲ್ಲಾ

ಶ್ರೀನಗರ, ಸೆ. ೧೪: ಜಮ್ಮು ಮತ್ತು ಕಾಶ್ಮೀರದಲ್ಲಿನ ರಕ್ತಪಾತವನ್ನು ಕೊನೆಗೊಳಿಸಲು ಮತ್ತು ಶಾಶ್ವತ ಶಾಂತಿಯನ್ನು ಕಂಡುಕೊಳ್ಳಲು ಭಾರತ ಮತ್ತು ಪಾಕಿಸ್ತಾನ ಮಾತುಕತೆ ನಡೆಸಬೇಕು ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಗುರುವಾರ ಹೇಳಿದ್ದಾರೆ. ಅನಂತನಾಗ್‌ನಲ್ಲಿ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಉಪ ಅಧೀಕ್ಷಕ ಹುಮಾಯೂನ್ ಭಟ್ ಅವರ ಕುಟುಂಬವನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಾತುಕತೆ' ನಡೆಯದಿದ್ದರೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಅದು (ಹಿಂಸಾಚಾರ) ನಿಲ್ಲುತ್ತದೆ ಎಂದುಕೊAಡರೆ ನಾವು ಮೂರ್ಖರು. ಪ್ರಾಣ ಕಳೆದುಕೊಳ್ಳುತ್ತಲೇ ಇರುತ್ತೇವೆ. ಮಾತುಕತೆಯ ಹೊರತಾಗಿ ಬೇರೆ ದಾರಿಯಿಲ್ಲ. ಎರಡೂ ದೇಶಗಳು ತಮ್ಮ ಮೊಂಡುತನ ಬಿಟ್ಟು ಮಾತುಕತೆ ನಡೆಸಬೇಕು' ಎಂದರು.

ಭಯೋತ್ಪಾದಕ ಸಂಚುಗಾರನ ಬಂಧನ

ನವದೆಹಲಿ, ಸೆ. ೧೪: ಶಿವಮೊಗ್ಗ ಮೂಲದ ಭಯೋತ್ಪಾದಕ ಸಂಚುಗಾರ ಅರಾಫತ್ ಅಲಿ ಎಂಬಾತನನ್ನು ಎನ್‌ಐಎ ಪೊಲೀಸರು ದೆಹಲಿಯ ಅಂರ‍್ರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ನೈರೋಬಿಯಾದಿಂದ ದೆಹಲಿಗೆ ಆಗಮಿಸಿದ್ದ ತೀರ್ಥಹಳ್ಳಿ ಮೂಲದ ಅರಾಫತ್ ಅಲಿ ಬಂಧಿತ ಆರೋಪಿಯಾಗಿದ್ದಾನೆ. ಈತ ನೇರವಾಗಿ ಎಲ್ಲಿಯೂ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ. ಆದರೆ, ಉಗ್ರ ಚಟುವಟಿಕೆಗಳಿಗೆ ವಿದೇಶಗಳಲ್ಲಿಯೇ ಕುಳಿತು ಹಣದ ವ್ಯವಸ್ಥೆ ಮಾಡುತ್ತಿದ್ದ. ೨೦೨೦ರಲ್ಲಿ ಕರ್ನಾಟಕದ ಮೋಸ್ಟ್ ವಾಂಟೆಡ್ ಉಗ್ರ ಅಬ್ದುಲ್ ಮತೀನ್ ಜೊತೆಗೆ ಅರಾಫತ್ ಅಲಿ ದೇಶ ಬಿಟ್ಟು ಹೋಗಿದ್ದನು. ಶಿವಮೊಗ್ಗ ಭಯೋತ್ಪಾದನೆ ಸಂಚು ಪ್ರಕರಣದ ಭಾಗವಾಗಿ ಮೊಹಮ್ಮದ್ ಶಾರಿಕ್ ಎಂಬ ಆರೋಪಿ ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಪ್ರೆಶರ್ ಕುಕ್ಕರ್ ಐಇಡಿ ಅಳವಡಿಸಲು ತೆರಳುತ್ತಿದ್ದನು. ಆದರೆ, ಆಟೋ ರಿಕ್ಷಾದಲ್ಲಿ ಆಕಸ್ಮಿಕವಾಗಿ ಐಇಡಿ ಸ್ಫೋಟಗೊಂಡಿತ್ತು.