ಗೋಣಿಕೊಪ್ಪಲು, ಸೆ. ೧೪: ಮುಂಬರುವ ಗೌರಿ ಗಣೇಶ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಆಡಳಿತ ಮಂಡಳಿ ಸಭೆಯು ಒಮ್ಮತ್ತದ ನಿರ್ಧಾರ ಕೈಗೊಂಡಿದೆ. ಇತಿಹಾಸ ಪ್ರಸಿದ್ಧವಾದ ಅಮ್ಮತ್ತಿ-ಕಾರ್ಮಾಡು ಶ್ರೀ ಬಸವೇಶ್ವರ ದೇವಸ್ಥಾನ ವತಿಯಿಂದ ವರ್ಷಂಪ್ರತಿಯAತೆ ಈ ಬಾರಿಯು ಗೌರಿ-ಗಣೇಶ ಉತ್ಸವವನ್ನು ನಾಡಿನ ಸರ್ವ ಜನಾಂಗದವರೊAದಿಗೆ ವಿಶೇಷ ರೀತಿಯಲ್ಲಿ ಆಚರಿಸಲು ಸಮಿತಿ ವತಿಯಿಂದ ನಿರ್ಧರಿಸಲಾಗಿದೆ.

ತಾ. ೧೮ ರಂದು ಬೆಳಿಗ್ಗೆ ೯ ಗಂಟೆಗೆ ಸ್ವರ್ಣಗೌರಿಯ ಆಗಮನದೊಂದಿಗೆ ಪೂಜೆ ಆರಂಭವಾಗಲಿದ್ದು, ತಾ. ೧೯ ರಂದು ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮದೊಂದಿಗೆ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ. ಪ್ರತಿ ದಿನ ಭಕ್ತಾದಿಗಳಿಂದ ಅಲಂಕಾರ ಪೂಜೆ ನಡೆಸಲಾಗುವುದು. ತಾ. ೩೦ರ ಸಂಜೆ ೫ ಗಂಟೆಯಿAದ ಸ್ಥಳೀಯ ಮಕ್ಕಳ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಂತರ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ರಾತ್ರಿ ೯ ಗಂಟೆಯಿAದ ವಿದ್ಯುತ್ ಅಲಂಕೃತ ಮಂಟಪದಲ್ಲಿ ಗೌರಿ ಗಣೇಶ ಮೂರ್ತಿಗಳನ್ನು ವಾದ್ಯಗೋಷ್ಠಿಯೊಂದಿಗೆ ಅಮ್ಮತ್ತಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿ ಮದ್ರಿರ ಗಣೇಶ್ ಅವರ ಕೆರೆಯಲ್ಲಿ ಮುಂಜಾನೆ ವೇಳೆ ವಿಸರ್ಜನೆ ಮಾಡಲಾಗುವುದು ಎಂದು ಶ್ರೀ ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.