ಮಡಿಕೇರಿ, ಸೆ. ೧೩: ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ, ಮಡಿಕೇರಿ, ಜಿಲ್ಲಾ ಯುವ ಒಕ್ಕೂಟ ಮೂರು ತಾಲೂಕು ಯುವ ಒಕ್ಕೂಟ ಹಾಗೂ ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಇದರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ನಡೆಸಲಾದ ಜಿಲ್ಲಾ ಯುವ ಉತ್ಸವದ ಸಾಂಸ್ಕೃತಿಕ ಗುಂಪು ನೃತ್ಯ ಸ್ಪರ್ಧೆಯಲ್ಲಿ ವೀರಾಜಪೇಟೆ ನೃತ್ಯ ಸಂಸ್ಥೆಯ ಕಾವ್ಯಶ್ರೀ ತಂಡ ಭಾಗವಹಿಸಿ, ಪ್ರಥಮ ಸ್ಥಾನ ಗಳಿಸುವುದರ ಮೂಲಕ ತುಮಕೂರುವಿನಲ್ಲಿ ನಡೆಯಲಿರುವ ರಾಜ್ಯಮಟ್ಟ ಯುವ ಉತ್ಸವಕ್ಕೆ ಆಯ್ಕೆಯಾಗಿದೆ. ಸರಸ್ವತಿ ತಂಡ ದ್ವಿತೀಯ ಹಾಗೂ ವಿಶ್ಮ ತಂಡ ತೃತೀಯ ಸ್ಥಾನವನ್ನು ಪಡೆದುಕೊಂಡಿತು. ಭಾಷಣ ಸ್ಪರ್ಧೆಯಲ್ಲಿ ಶಬೀಬ್ (ಪ್ರ), ಆರ್ಯನ್ ಚೆಂಗಪ್ಪ (ದ್ವಿ), ಬೋಜಮ್ಮ (ತೃ), ಚಿತ್ರಕಲಾ ಸ್ಪರ್ಧೆಯಲ್ಲಿ ದಿವ್ಯ ದೇಚಮ್ಮ (ಪ್ರ), ಹರ್ಷಿನಿ (ದ್ವಿ), ವೃಶೀನ್ (ತೃ) ಪೊನ್ನಂಪೇಟೆ ಸಿಐಟಿ ಕಾಲೇಜಿನ ವಿದ್ಯಾರ್ಥಿಗಳು. ಕವನ ಸ್ಪರ್ಧೆಯಲ್ಲಿ ದೇಚಮ್ಮ ಸಿ.ಎ (ಪ್ರ), ಪಾರ್ವತಿ (ದ್ವಿ), ಕಾವೇರಿ ಕೆ.ಕೆ (ತೃ). ಛಾಯಚಿತ್ರ ಸ್ಪರ್ಧೆಯಲ್ಲಿ ತಜುದ್ದೀನ್ (ಪ್ರ), ಚೋಂದಮ್ಮ (ದ್ವಿ), ಹೇಮನ್ ಅಚ್ಚಯ್ಯ (ತೃ) ಸ್ಥಾನ ಗಳಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ದಯಾನಂದ ಕೆ.ಸಿ. ವಹಿಸಿದ್ದರು. ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷ ಸುಕುಮಾರ್ ಪಿ.ಪಿ, ನೆಹರೂ ಯುವ ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಕೆ.ಟಿ.ಕೆ. ಉಲ್ಲಾಸ್, ಕಚೇರಿ ಸಹಾಯಕಿಯರಾದ ದೀಪ್ತಿ, ರಂಜಿತಾ, ಜಿಲ್ಲಾ ಯುವ ಒಕ್ಕೂಟದ ಖಜಾಂಚಿ ಕುಂಜಿಲನ ಮಧು ಮೋಹನ್, ತಾಲೂಕು ಒಕ್ಕೂಟ ಅಧ್ಯಕ್ಷ ಬಾಳಾಡಿ ದಿಲೀಪ್ ಕುಮಾರ್, ಮಾಜಿ ಅಧ್ಯಕ್ಷ ಡಿ. ನವೀನ್ ದೇರಳ ಉಪಸ್ಥಿತರಿದ್ದರು.

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಗಣ್ಯರು ದೃಢೀಕರಣ ಪತ್ರದೊಂದಿಗೆ, ನೆನಪಿನ ಕಾಣಿಕೆ, ನಗದನ್ನು ನೀಡಿದರು. ಕಾಲೇಜಿನ ಉಪನ್ಯಾಸಕರು ತೀರ್ಪು ಗಾರರಾಗಿ ಕಾರ್ಯನಿರ್ವಹಿಸಿದರು. ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಕೂಡಂಡ ಸಾಬ ಸುಬ್ರಮಣಿ ನಿರೂಪಿಸಿ, ವಂದಿಸಿದರು.