ಸೋಮವಾರಪೇಟೆ, ಸೆ. ೧೨: ಬದಲಾಗುತ್ತಿರುವ ಹವಾಮಾನ, ಹೆಚ್ಚಿದ ಉತ್ಪಾದನಾ ವೆಚ್ಚದ ನಡುವೆಯೂ ಕೃಷಿಯನ್ನು ಕೈಗೊಳ್ಳ ಲೇಬೇಕಾದ ಅಗತ್ಯತೆಯಿದ್ದು, ವೈಜ್ಞಾ ನಿಕ ಕ್ರಮಗಳನ್ನು ಅಳವಡಿಸಿಕೊಂಡರೆ ಮಾತ್ರ ಕೃಷಿಯಲ್ಲಿ ಲಾಭ ಗಳಿಸಲು ಸಾಧ್ಯವಾಗಲಿದೆ ಎಂದು ಇಲ್ಲಿನ ಪುಷ್ಪಗಿರಿ ರೈತ ಉತ್ಪಾದಕರ ಸಂಘದ ಅಧ್ಯಕ್ಷ ಬನ್ನಳ್ಳಿ ಸತೀಶ್ ಅಭಿಪ್ರಾಯಿಸಿದರು.

ಸಮೀಪದ ಗೌಡಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕೃಷಿ ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೃಷಿಯಲ್ಲಿ ಸುಧಾರಿತ ಪದ್ಧತಿಯನ್ನು ಅಳವಡಿಸಿ ಕೊಳ್ಳಬೇಕು. ಪ್ರಗತಿಪರ ಕೃಷಿಕರು ಹಾಗೂ ಕೃಷಿ ವಿಜ್ಞಾನಿಗಳಿಂದ ಸಲಹೆ ಪಡೆಯಬೇಕು. ಇದರೊಂದಿಗೆ ಸರ್ಕಾರದ ವಿವಿಧ ಯೋಜನೆಗಳನ್ನು ಬಳಸಿಕೊಂಡು ಕೃಷಿಯಲ್ಲಿ ಮುಂದು ವರೆದರೆ ನಷ್ಟದಿಂದ ಪಾರಾಗಬಹುದು ಎಂದರು.

ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ವೀರೇಂದ್ರ ಕುಮಾರ್ ಮಾತನಾಡಿ, ಕೆವಿಕೆ ಕೇಂದ್ರವು ಕೃಷಿಯಲ್ಲಿನ ಸವಾಲು ಗಳನ್ನು ಎದುರಿಸಲು ರೈತರಿಗೆ ಎಲ್ಲಾ ರೀತಿಯ ನೆರವು ಒದಗಿಸುತ್ತಿದೆ. ಆಗಾಗ್ಗೆ ವಿಚಾರ ಸಂಕಿರಣಗಳನ್ನು ಆಯೋಜಿಸಿ ಮಾಹಿತಿ ನೀಡುತ್ತಿದೆ ಎಂದರು.

ಕೊಡಗಿನಲ್ಲಿ ೨ ಎಕರೆ ಪ್ರದೇಶದಲ್ಲಿ ೩೦ ರಿಂದ ೪೦ ಕ್ವಿಂಟಾಲ್ ಕರಿಮೆಣಸು ಬೆಳೆಯುವ ರೈತರಿದ್ದಾರೆ. ಕಾಫಿಯೊಂದಿಗೆ ಉಪ ಬೆಳೆಯಾಗಿ ಬೆಳೆಯಲಾಗುವ ಕರಿಮೆಣಸು ಕೃಷಿಕರಿಗೆ ಹೆಚ್ಚಿನ ಆದಾಯದ ಮೂಲವಾಗಿದೆ. ಆದರೆ ಇದನ್ನು ಉಳಿಸಿಕೊಳ್ಳುವುದೇ ಸವಾಲಾಗಿದ್ದು, ಬಳ್ಳಿಗಳ ಪೋಷಣೆ ಮುಖ್ಯವಾಗಿದೆ. ಹೊಸ ಬಳ್ಳಿಗಳನ್ನು ನೆಡುವ ಕೆಲಸವನ್ನು ಬೆಳೆಗಾರರು ನಿಲ್ಲಿಸಬಾರದು. ಕರಿಮೆಣಸಿಗೆ ಅಗತ್ಯವಾಗಿರುವ ಪೋಷಕಾಂಶ, ಗೊಬ್ಬರ, ಕ್ರಿಮಿನಾಶಕಗಳನ್ನು ಸಿಂಪಡಿಸಬೇಕು. ಕೃಷಿಗೆ ಸಂಬAಧಿಸಿದAತೆ ಯಾವುದೇ ಗೊಂದಲಗಳಿದ್ದರೂ ಕೆವಿಕೆಯನ್ನು ಸಂಪರ್ಕಿಸಬಹುದು ಎಂದರು.

ತಾ. ೨೫ರಿಂದ ೨೮ರವರೆಗೆ ಬೆಂಗಳೂರಿನಲ್ಲಿ ಅಂತರರಾಷ್ಟಿçÃಯ ಕಾಫಿ ಸಮ್ಮೇಳನ ನಡೆಯಲಿದ್ದು, ಜಿಲ್ಲೆಯಿಂದ ಪಾಲ್ಗೊಳ್ಳುವ ಆಸಕ್ತ ಕೃಷಿಕರು ಕಾಫಿ ಮಂಡಳಿಯನ್ನು ಸಂಪರ್ಕಿಸಬಹುದು ಎಂದು ಅಧಿಕಾರಿ ರಂಜಿತ್ ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕ ಹೂವಯ್ಯ, ಅಶೋಕ್, ರೈತ ಸಂಘದ ಹೋಬಳಿ ಅಧ್ಯಕ್ಷ ಮೊಗಪ್ಪ, ಬೆಳೆಗಾರರಾದ ಸೋಮಶೇಖರ್, ರಾಜಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.