ವೀರಾಜಪೇಟೆ, ಸೆ. ೧೨: ಕೊಡಗು ಖಾಸಗಿ ಬಸ್ಸು ಕಾರ್ಮಿಕರ ಸಂಘದ ೨೦೨೩-೨೪ನೇ ಸಾಲಿನ ಆಡಳಿತ ಮಂಡ ಳಿಯ ಅಧ್ಯಕ್ಷರಾಗಿ ಕುಂಬೆಯAಡ ಸುರೇಶ್ ದೇವಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಜೂಡಿವಾಜ಼್ ಮರು ಅಯ್ಕೆಯಾಗಿದ್ದಾರೆ. ಕೊಡಗು ಖಾಸಗಿ ಬಸ್ಸು ಕಾರ್ಮಿಕ ಸಂಘ ವೀರಾಜಪೇಟೆ ಇವರ ಮಾಹಸಭೆಯು ಸಂಘದ ಕಚೇರಿಯಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸುರೇಶ್ ದೇವಯ್ಯ ಅವರು, ಬಸ್ಸು ಕಾರ್ಮಿಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬಸ್ಸುಗಳ ನಿರ್ವಹಣೆಗೆ ಕಚ್ಚಾವಸ್ತುಗಳ ಬೆಲೆ ಏರಿಕೆಯಿಂದ ಕಷ್ಟವಾಗುತ್ತಿದೆ. ಸಂಘದ ಸದಸ್ಯರ ಏಳಿಗೆಗೆ ಸಂಘವು ಸದಾಕಾಲ ಶ್ರಮಿಸುತ್ತದೆ ಎಂದು ಹೇಳಿದರು.

೨೦೨೩-೨೪ನೇ ಸಾಲಿನ ಅಡಳಿತ ಮಂಡಳಿಯು ಪುನರ್ ರಚನೆಗೊಂಡು ಉಪಾಧ್ಯಕ್ಷರಾಗಿ ಪಿ.ಎಂ. ದಿನೇಶ್ ಕಾವೇರಪ್ಪ, ಖಜಾಂಚಿಯಾಗಿ ದಿನೇಶ್ ವಿ.ಎ. ಮತ್ತು ಸಂಘದ ನಿರ್ದೇಶಕರಾಗಿ ವಿನಂತು ಬಿ.ವಿ, ಮಹೇಶ್ ಎಂ.ಕೆ, ಅಜೇಯ್, ನಾಗೇಶ್ ಬಿ.ಜಿ, ಸದಾ ಪೂಣಚ್ಚ, ಕುಪ್ಪಂಡ ಪ್ರಸಾದ್ ದೇವಯ್ಯ, ಮತ್ತು ಕೆ.ಎನ್. ಜೀವನ್ ನಾಣಯ್ಯ ಆಯ್ಕೆಯಾದರು.