ಮಡಿಕೇರಿ, ಸೆ. ೧೨: ಕಾರ್ಯನಿರ್ವಾಹಕ ಎಂಜಿನಿಯರ್ (ವಿದ್ಯುತ್) ಕೊಡಗು ಬೃಹತ್ ಕಾಮಗಾರಿ ವಿಭಾಗ ಕೆಪಿಟಿಸಿಎಲ್ ಮೈಸೂರು ನಿಗಮದ ವತಿಯಿಂದ ನಡೆಸಲಾಗುವ ೬೬ ಕೆ.ವಿ ಸುಂಟಿಕೊಪ್ಪ, ಹಾನಗಲ್ಲು, ಶೆಟ್ಟಳ್ಳಿ (ಹುಲುಗುಲಿ-ಹರದೂರು ಗ್ರಾಮ) ಸಂಪರ್ಕ ಮಾರ್ಗದಲ್ಲಿ ಬರುವ ಬೀಟೆ ಮತ್ತು ೫೨೪ ಇತರೆ ಜಾತಿಯ ಮರಗಳನ್ನು ಇಲಾಖಾ ವತಿಯಿಂದ ಕಡಿದು ಸರ್ಕಾರಿ ಮರ ಸಂಗ್ರಹಾಲಯಕ್ಕೆ ಸಾಗಿಸಲು ಮತ್ತು ೩೬೩ ಮೆದು ಜಾತಿಯ ಮರಗಳನ್ನು ಸ್ಥಳದಲ್ಲಿಯೇ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು.

ಆದ್ದರಿಂದ ಸಾರ್ವಜನಿಕರು ಈ ಬಗ್ಗೆ ಯಾವುದೇ ಆಕ್ಷೇಪಣೆ ಇದ್ದಲ್ಲಿ ತಾ.೧೩ ರೊಳಗೆ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಸಲ್ಲಿಸಲು ಕೋರಿದೆ. ನಿಗದಿತ ಅವಧಿಯಲ್ಲಿ ಯಾವುದೇ ಆಕ್ಷೇಪಣೆ ಬಾರದಿದ್ದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ ತಿಳಿಸಿದ್ದಾರೆ.