ಕೂಡಿಗೆ, ಸೆ. ೧೨ : ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ೨೦೨೩-೨೪ನೇ ಸಾಲಿನ ಕುಶಾಲನಗರ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವು ಕೂಡಿಗೆ ಕ್ರೀಡಾ ಶಾಲಾ ಮೈದಾನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆ ಯನ್ನು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ. ವಿಸ್ಮಯಿ ನೆರವೇರಿಸಿದರು.

ನಂತರ ಮಾತನಾಡಿದ ಅವರು ಗ್ರಾಮಾಂತರ ಪ್ರದೇಶಗಳ

ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ಇಂತಹ ಕ್ರೀಡಾಕೂಟಗಳು

ಹೆಚ್ಚು ಸಹಾಯಕವಾಗುತ್ತ್ತವೆ ಎಂದರು.

ಈ ಸಂದರ್ಭ ಕೂಡಿಗೆ ಕ್ರೀಡಾ ಶಾಲೆಯ ಮುಖ್ಯೋಪಾಧ್ಯಾಯ ದೇವುಕುಮಾರ್, ತರಬೇತಿದಾರರಾದ ವೆಂಕಟೇಶ, ಮಂಜುನಾಥ, ದೀನಮಣಿ, ಸುರೇಶ್, ನಿವೃತ್ತ ಅಥ್ಲೆಟಿಕ್ಸ್ ತರಬೇತಿದಾರ ಅಂತೋಣಿ ಡಿಸೋಜ, ಶಿಕ್ಷಕರಾದ ಪ್ರೇಮನಾಥ್, ಮುರುಳಿ, ಅಕ್ಷಿತಾ, ಮಧುರ್, ರಂಜನಿ ಸೇರಿದಂತೆ ನೂರಾರು ಕ್ರೀಡಾಪಟುಗಳು ಭಾಗವಹಿಸಿದ್ದರು.